ಜಗತ್ತಿನ ಖಂಡಗಳು

ಪ್ರಪಂಚದ ಏಳು ಖಂಡಗಳು

1. ಉತ್ತರ ಅಮೇರಿಕಾ 

      ವಿಶ್ವದ ಏಳು ಖಂಡಗಳಲ್ಲಿ ಮೂರನೇಯ ದೊಡ್ಡ ಖಂಡ . ಗ್ರೇಟ್ ಲೇಕ್ಸ್ ಎನ್ನಲಾಗುವ ಹೊಚ್ಚ ಹೊಸನೀರಿನ ದೊಡ್ಡ ಸರೋವರಗಳು ತುಂಬಿರುವ ಖಂಡ. ಯಾವುದೇ ಖಂಡಕ್ಕೆ ಹೋಲಿಸಿದರೂ ಇಲ್ಲಿರುವ ಕಡಲತೀರದ ಉದ್ದ ಅತ್ಯಂತ ಹೆಚ್ಚು.
*  ವಿಸ್ತೀರ್ಣ: 24,235,000ಚ.ಕಿ.ಮೀ.
*  ಜನಸಂಖ್ಯೆ: 514 ದಶಲಕ್ಷ
*  ಪಶ್ಚಿಮಾರ್ಧಗೋಳದ ಉತ್ತರದಲ್ಲಿರುವ ಈ        
   ಖಂಡ ಅಮೇರಿಕಾ ಸಂಯುಕ್ತ ಸಂಸ್ಥಾನಗಳು, 
   ಕೆನಡಾ, ಮಧ್ಯ ಅಮೇರಿಕಾ 
   ಇವುಗಳನ್ನೊಳಗೊಂಡಿರುತ್ತದೆ.
*  ಕೃಷಿ : ಬೇಳೆಕಾಳುಗಳು , ಹೊಗೆಸೊಪ್ಪು, 
    ಆಲೂಗೆಡ್ಡೆ,ಇತ್ಯಾದಿ.
*  ಖನಿಜಗಳು: ಕಲ್ಲಿದ್ದಲು, ಪೆಟ್ರೋಲಿಯಂ, ಕಬ್ಬಿಣ, 
    ಮ್ಯಾಂಗನೀಸ್
*  ಮುಖ್ಯ ನಗರಗಳು: ನ್ಯೂಯಾರ್ಕ್‌, ವಾಷಿಂಗ್ಟನ್  
   ಡಿ.ಸಿ, ಸ್ಯಾನ್ ಫ್ರಾನ್ಸಿಸ್ಕೊ, ಷಿಕಾಗೊ, ಮೆಕ್ಸಿಕೋ,  
   ಮಾಂಟ್ರಿಯಲ್, ಒಟ್ಟಾವ, ಜಮೈಕಾ.

2. ದಕ್ಷಿಣ ಅಮೇರಿಕಾ

       ಪಶ್ಚಿಮಾರ್ಧಗೋಳದ ದಕ್ಷಿಣ ಖಂಡ, ಅರ್ಜೆಂಟೈನಾ, ಬೊಲಿವಿಯಾ, ಬ್ರೆಜಿಲ್, ಚಿಲಿ, ಕೊಲಂಬಿಯ, ಈಕ್ವೆಡಾರ್, ಪೆರುಗ್ವೆ, ಪೆರು, ಉರುಗ್ವೆ, ವೆನೆಜುವೆಲಾ ಮತ್ತು ಗಯಾನ ಇವುಗಳನ್ನೊಳಗೊಂಡಿರುತ್ತದೆ.
* ವಿಸ್ತೀರ್ಣ: 19,700,00 ಚ.ಕಿ.ಮೀ
* ಜನಸಂಖ್ಯೆ : 371 ದಶಲಕ್ಷ
* ಕೃಷಿ : ಕೋಕೋ, ಕಾಫಿ, ಕಬ್ಬು, ರಬ್ಬರ್ ,  
   ಬೇಳೆಕಾಳುಗಳು
* ಖನಿಜಗಳು: ಚಿನ್ನ, ಬೆಳ್ಳಿ, ತಾಮ್ರ,ತವರ, ವಜ್ರ,
   ನೈಟ್ರೇಟ್ ಗಳು.
* ಮುಖ್ಯ ನಗರಗಳು: ರಿಯೊಡಿ ಜುನೈರೊ,
   ಟ್ರಿನಿಡಾಡ್, ಬ್ಯೂನಸ್ ಐರಸ್, ಲಾಪಾಜ್,    
   ಬೊಗೋಟ

3. ಏಷ್ಯಾ

      ಭೂಭಾಗದ ಮೂರನೇಯ ಒಂದು ಭಾಗ ಏಷ್ಯಾ. ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಖಂಡ.  ವಿಶ್ವದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಏಷ್ಯಾ ಖಂಡದಲ್ಲಿದೆ. ವಿಶ್ವದ ಅನೇಕ ಉದ್ದವಾದ ನದಿಗಳು ಈ ಖಂಡದಲ್ಲಿವೆ. ಅರೇಬಿಯಾ, ಥಾರ್ ಮರುಭೂಮಿ ಗಳಿವೆ.
* ವಿಸ್ತೀರ್ಣ: 43,999,000 ಚ.ಕಿ.ಮೀ
* ಜನಸಂಖ್ಯೆ : 3830 ದಶಲಕ್ಷ
* ಕೃಷಿ: ಧಾನ್ಯಗಳು, ಬೇಳೆಕಾಳು, ಕಾಫಿ, ಚಹ,
   ಎಣ್ಣೆಬೀಜಗಳು
* ಖನಿಜಗಳು: ಚಿನ್ನ, ಕಲ್ಲಿದ್ದಲು, ತೈಲ, ಕಬ್ಬಿಣ, 
   ಮ್ಯಾಂಗನೀಸ್
* ಮುಖ್ಯ ದೇಶಗಳು : ಭಾರತ, ಇರಾನ್, ಇರಾಕ್, 
   ಪಾಕಿಸ್ತಾನ, ಶ್ರೀಲಂಕಾ, ಮಯನ್ಮಾರ್, ಚೀನಾ,  
   ಇಂಡೋನೇಷಿಯಾ, ಮಲೇಷಿಯ
* ಮುಖ್ಯ ನಗರಗಳು : ನವದೆಹಲಿ, ಮುಂಬಯಿ,
   ಟೋಕಿಯ, ಕೊಲೊಂಬೊ, ಬ್ಯಾಂಕಾಕ್,
   ತಾಷ್ಕೆಂಟ್,ಸಿಂಗಾಪುರ, ಜಕಾರ್ತ, ಕೌಲಾಲಂಪುರ.

4. ಯೂರೋಪ್

* ವಿಸ್ತೀರ್ಣ: 19,700,000 ಚ.ಕಿ.ಮೀ
* ಜನಸಂಖ್ಯೆ: 730.2 ದಶಲಕ್ಷ
* ಕೃಷಿ : ಬೇಳೆಕಾಳುಗಳು, ಹಣ್ಣುಗಳು, ಆಲೂಗೆಡ್ಡೆ 
      ಅರಣ್ಯ ಉತ್ಪನ್ನಗಳು
* ಕೈಗಾರಿಕೆಗಳು: ಮರ, ಕಾಗದ, ಕಬ್ಬಿಣ, ವಿದ್ಯುಚ್ಛಕ್ತಿ
      ಇತ್ಯಾದಿ
* ಮುಖ್ಯ ದೇಶಗಳು : ಹಂಗೇರಿ, ನಾರ್ವೆ, ಸ್ವೀಡನ್, 
   ಆಸ್ಟ್ರಿಯಾ, ರೊಮೇನಿಯಾ, ಯು.ಕೆ, ಪ್ರಾನ್ಸ್,
   ಜರ್ಮನಿ, ಪೋಲೆಂಡ್
* ಮುಖ್ಯ ನಗರಗಳು: ಲಂಡನ್, ಬಾನ್, ಬರ್ನ್,
   ಪ್ಯಾರಿಸ್, ಮ್ಯೂನಿಕ್, ಬರ್ಲಿನ್, ಬುಡಾಪೆಸ್ಟ್,
   ಮಾಸ್ಕೊ, ಓಸೊ.

5. ಆಫ್ರಿಕಾ

    ಪ್ರಪಂಚದ ಎರಡನೇ ದೊಡ್ಡ ಖಂಡ
* ವಿಸ್ತೀರ್ಣ: 29,800,000 ಚ.ಕಿ.ಮೀ
* ಜನಸಂಖ್ಯೆ: 847.4ದಶಲಕ್ಷ
* ಕೃಷಿ: ಗೋಧಿ, ಕೋಕೋ, ತಾಳೆ, ನೆಲಗಡಲೆ, ಕಾಫಿ, 
   ಹತ್ತಿ, ಮೆಕ್ಕೆಜೋಳ,
* ಮುಖ್ಯ ನಗರಗಳು: ಕೈರೊ, ಲುಸಾಕ, ಕೇಪ್ ಟೌನ್,      ಮೊಂಬಾಸ, ನೈರೋಬಿ, ಹರಾರೆ, ಪ್ರಿಟೋರಿಯಾ.

6. ಆಸ್ಟ್ರೇಲಿಯಾ

* ದ್ವೀಪ ಖಂಡ
* ವಿಸ್ತೀರ್ಣ: 7,80,682 ಚ.ಕಿ.ಮೀ
* ಜನಸಂಖ್ಯೆ: 60ದಶಲಕ್ಷ
* ಕೈಗಾರಿಕೆ ಗಳು: ಉಣ್ಣೆ, ಮರ, ಚಿನ್ನ, ಕಬ್ಬಿಣದ
   ಆದಿರು
* ಮುಖ್ಯನಗರಗಳು: ಸಿಡ್ನಿ, ಮೆಲ್ಬೋರ್ನ್,
  ಅಡಿಲೇಡ್

7. ಅಂಟಾರ್ಟಿಕಾ

     ವಿಶ್ವದ ಅತ್ಯಂತ ಎತ್ತರದ ಖಂಡ. ಹಾಳೆಯಿಂದಾವೃತವಾಗಿದೆ. ಅತ್ಯಂತ ಶೀತವಾದ, ಅತಿದೂರವಾದ, ಶೂನ್ಯವಾದ ಖಂಡ. ವಿಶ್ವದ ಬಹುಪಾಲು ಮಂಜು ಅಂಟಾರ್ಟಿಕಾದಲ್ಲಿ ಕಂಡುಬರುತ್ತದೆ.
   

No comments:

Post a Comment