ಶಿಶು ಗೀತೆಗಳು

ಶಿಶು ಗೀತೆಗಳು

ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಶಿಶುಗೀತೆಗಳು .....
1 .ಹತ್ತು ಹತ್ತು ಇಪ್ಪತ್ತು
ತೋಟಕೆ ಹೋದನು ಸಂಪತ್ತು
ಇಪ್ಪತ್ತು ಹತ್ತು ಮೂವತ್ತು
ಕೈಯಲ್ಲಿ ಒಂದು ಕಲ್ಲಿತ್ತು
ಮೂವತ್ತು ಹತ್ತು ನಲವತ್ತು
ಎದುರಿಗೆ ಮಾವಿನ ಮರವಿತ್ತು
ನಲವತ್ತು ಹತ್ತು ಐವತ್ತು
ಮಾವಿನ ಮರದಲಿ ಕಾಯಿತ್ತು
ಐವತ್ತು ಹತ್ತು ಅರವತ್ತು
ಕಲ್ಲನು ಬೀಸಿದ ಸಂಪತ್ತು
ಅರವತ್ತು ಹತ್ತು ಎಪ್ಪತ್ತು
ಕಾಯಿಯು ತಪ ತಪ ಉದುರಿತ್ತು
ಎಪ್ಪತ್ತು ಹತ್ತು ಎಂಬತ್ತು
ಮಾಲಿಯ ಕಂಡನು ಸಂಪತ್ತು
ಎಂಬತ್ತು ಹತ್ತು ತೊಂಬತ್ತು
ಕಾಲುಗಳೆರಡು ನಡುಗಿತ್ತು
ತೊಂಭತ್ತು ಹತ್ತು ನೂರು
ಮನೆಯನು ಸೇರಿದ ಸಂಪತ್ತು

2.ತೋಟಕೆ ಹೋಗೋ ತಿಮ್ಮ
ತೋಳ ಬಂದೀತಮ್ಮ
ಹಸು ಮೈಸೋ ತಿಮ್ಮ
ಹಸು ಹಾದೀತಮ್ಮ
ಓಲೆ ಉರಿಸೋ ತಿಮ್ಮ
ಉರಿ ಸುಟ್ಟೀತಮ್ಮ
ಪಾಠ ಬರೆಯೋ ತಿಮ್ಮ
ಬಳಪ ಇಲ್ಲ ಅಮ್ಮ
ನೀರು ಸೇದೋ ತಿಮ್ಮ
ಕೈಯ್ಯಿ ನೋವು ಅಮ್ಮ
ಕಾವಲಿ ತಾರೋ ತಿಮ್ಮ
ಕಾಲು ನೋವು ಅಮ್ಮ
ಹೂವು ಬಿಡಿಸೊ ತಿಮ್ಮ
ಹಾವು ಬಂದೀತಮ್ಮ
ಊಟಕೆ ಬಾರೋ ತಿಮ್ಮ
ಓಡಿ ಬಂದೆನಮ್ಮ

1 comment: