ಲಗೋರಿ
ಲಗೋರಿ ಆಟ ಇಂದಿಗೂ ಸಹ ಅತ್ಯಂತ ಜನಪ್ರಿಯ ಆಟ. ಆಟದಲ್ಲಿ ಎರಡು ಗುಂಪುಗಳು ಇರುತ್ತವೆ. ಎರಡು ಗುಂಪಿನಲ್ಲೂ ಸಮನಾಗಿ ಸದಸ್ಯರು ಇರುತ್ತಾರೆ. ಕಪ್ಪಂಚಿನ ಬಿಲ್ಲೆಗಳು, ಮಡಕೆ ಚೂರುಗಳು, ಇಲ್ಲವೇ ಚಪ್ಪಟೆ ಕಲ್ಲುಗಳನ್ನು ಬಳಸಿ ಚೆಂಡಿನಿಂದ ಹೊಡೆದರೆ ಬೀಳುವಂತ ಅರ್ಧ ಅಡಿಯ ಚಿಕ್ಕ ಗೋಪುರ ನಿರ್ಮಿಸುತ್ತಾರೆ. ಸುಮಾರು ೩ ರಿಂದ 4 ಮೀಟರ್ ದೂರದಲ್ಲಿ ನಿಂತು ಒಂದು ತಂಡದವರು ಅದನ್ನು ಚೆಂಡಿನಿಂದ ಬಿಳಿಸಿ ಅಲ್ಲಿಂದ ಪಲಾಯನ ಮಾಡಿ,ಮತ್ತೆ ಅದೇ ತಂಡದವರು ಬಿದ್ದ ಕಲ್ಲುಗಳಿಂದ ಗೋಪುರವನ್ನು ನಿರ್ಮಿಸಲು ಯತ್ನಿಸುತ್ತಾರೆ. ಅವರ ಪ್ರಯತ್ನದಲ್ಲಿ ಸಫಲರಾದರೆ ಅವರು ಗೆದ್ದಂತೆ, ಅವರು ಗೋಪುರ ಕಟ್ಟುವ ಸಮಯದಲ್ಲಿ ಮತ್ತೊಂದು ತಂಡದ ಸದಸ್ಯರು ಯಾರಾದರು ಅವರನ್ನು ಚೆಂಡಿನಿಂದ ತಾಕಿಸಿದರೆ ಇಲ್ಲವೇ ಅವರನ್ನು ಮುಟ್ಟಿದರೆ ಅವರು ಔಟ್. ಗೋಪುರ ಬೀಳಿಸಿದ ತಂಡದರು ಗೋಪುರವನ್ನು ಕಟ್ಟಿದಾಗ “ಲಗೋರಿ….”, ಪ್ರಾಸ ಬದ್ದವಾಗಿ ಕೊಗುವುದನ್ನು ಕೇಳುವುದೇ ಆನಂದ.ತೂರು ಚೆಂಡು
ತೂರು ಚೆಂಡು ಹೆಸರಿನಲ್ಲಿ ಚೆಂಡಿದೆ ಅದ್ದರಿಂದ ಆಟಕ್ಕೆ ಒಂದು ಚಿಕ್ಕ ಚೆಂಡಿನ ಅವಶ್ಯಕತೆ ಇದೆ. ಇದೊಂದು ಗುಂಪಿನ ಆಟ. ಆಟ ಆಡಲು ಪ್ರತಿ ತಂಡದಲ್ಲಿ ಕನಿಷ್ಠ ೩ ಜನರ ಅವಶ್ಯಕತೆ ಇದೆ. ಚೆಂಡನ್ನು ಒಬ್ಬರಿಂದ ಒಬ್ಬರಿಗೆ ಪಾಸು ಮಾಡಿ ಎದುರಾಳಿ ತಂಡದ ಆಟಗಾರರ ದೇಹಕ್ಕೆ ಗುರಿಯಾಗಿರಿಸಿ ಹೊಡೆಯುವ ಆಟ. ಚೆಂಡು ಎದುರಾಳಿಯ ದೇಹಕ್ಕೆ ತಾಕಿದರೆ ಅವನು ಔಟ್.
ಅವರನ್ನು ಬಿಟ್ಟ್ ಇವರನ್ನು ಬಿಟ್ಟ್ ಇವರಾರು?
ಇದೊಂದು ಮಕ್ಕಳಾಡುವ ಜನಪ್ರಿಯ ಆಟ. ಆಟ ಅಡಲು ಕನಿಷ್ಠ ಐದು ಮಕ್ಕಳಾದರೂ ಇರಬೇಕು. ಮಕ್ಕಳನ್ನು ಸಾಲಾಗಿ ಕೂರಿಸುತ್ತಾರೆ. ಒಂದು ಮಗುವಿಗೆ ಕಣ್ಣು ಮುಚ್ಚುವ ಮೊದಲು ಅಲ್ಲಿ ಯಾರು ಯಾವ ಜಾಗದಲ್ಲಿ ಕೂತಿರುತ್ತಾರೆ ಎಂದು ನೋಡಲು ಹೇಳುತ್ತಾರೆ. ನಂತರ ಮಗುವಿಗೆ ಕಣ್ಣು ಮುಚ್ಚಿ ಅಲ್ಲಿರುವ ಮಕ್ಕಳಿಗೆ ತಮ್ಮ ಜಾಗವನ್ನು ಬದಲಿಸಿ ಕೂರುವಂತೆ ಹೇಳುತ್ತಾರೆ. ನಂತರ ಮಗುವಿಗೆ ಕಣ್ಣು ಮುಚ್ಚಿ, ಕೈ ಹಿಡಿದು “ಅವರನ್ನು ಬಿಟ್ಟ್ ಇವರನ್ನು ಬಿಟ್ಟ್ ಇವರಾರು? ” ಎಂದು ರಾಗ ಬದ್ದವಾಗಿ ಕೇಳುತ್ತಾರೆ. ಮಗು ಸರಿಯಾಗಿ ಹೆಸರು ಹೇಳಿದರೆ, ಮುಂದಿನ ಆಟದಲ್ಲಿ ಮಗು ಸೂಚಿಸಿದ ಹೆಸರಿನಮಗುವಿಗೆ ಕಣ್ಣು ಮುಚ್ಚಿ ಪ್ರಶ್ನೆ ಕೇಳುವ ಸರದಿಯಾಗುತ್ತದೆ .
ಮರ ಕೋತಿ
ನಾಡೆಲ್ಲ ಕಾಂಕ್ರಿಟು ಕಾಡಾಗುತಿರುವ ಸಮಯದಲ್ಲಿ ,ಹಿಂದೆ ಮರ ಕೋತಿ ಎನ್ನುವ
ಆಟ ಇತ್ತು ಎನ್ನುವ ಪ್ರಮೇಯ ಯಾರಿಗೂ ಇರಲಾರದು.ನೆಲದಿಂದ ಸುಮಾರು 6 ಅಡಿ ಎತ್ತರದ ರಂಬೆ ಕೊಂಬೆ ಇರುವಒಂದು ಸಣ್ಣ ಮರ/ಗಿಡ ಇದ್ದರೆ ಸಾಕು ಮರ ಕೋತಿಆಟ ಆಡಬಹುದು.
ಆಟಕ್ಕೆ ಮೊದಲು ಎಲ್ಲರೂ ಮರದ ಕೆಳಗೆ ಇರಬೇಕು, ಕೋತಿಯಾದವನು ಮರದಕೆಳಗೆ ವೃತ್ತವನ್ನು ರಚಿಸಿ ಒಂದು ಅಡಿ ಸಣ್ಣಕೋಲನ್ನು ವೃತ್ತದ ಮಧ್ಯದಲ್ಲಿ ಇಡಬೇಕು. ನಂತರಕೋತಿಯು ವೃತ್ತದ ಸುತ್ತ ಮೂರು ಸುತ್ತುಹಾಕುವುದರವಳಗೆ ಎಲ್ಲರೂ ವೃತ್ತದ ಮೇಲಿನಮರವನ್ನು ಹತ್ತ ಬೇಕು. ಯಾರ ಕೈಯಲ್ಲಿಹತ್ತಲಾಗದು ಅವನನ್ನು ಕೋತಿಯಾದವನು ಮುಟ್ಟಿದರೆ ಔಟ್. ಎಲ್ಲರೂ ಮರ ಏರಿದರೆ ,ಕೋತಿಯಾದವನು ಮರ ಹತ್ತಿ ಮರದ ಮೇಲೆಇರುವವರನ್ನು ಮುಟ್ಟಬೇಕು.ಆಗ ಅವನುಔಟ್.ಕೋತಿಯಾದವನು ಮರದ ಮೇಲಿರುವವರನ್ನು ಮುಟ್ಟುವ ಮೊದಲೇ ,ಮರದಮೇಲಿರುವವರು ಕೋತಿ ಮರ ಏರಿದಾಗ ಕೆಳಗೆಹಾರಿ ವೃತ್ತದ ಒಳಗೆ ಇರುವ ಕೋಲನ್ನು ಮುಟ್ಟಿದರೆ,ಕೋತಿ ಔಟ್. ಮುಂದಿನ ಆಟದಲ್ಲಿ ಮತ್ತೆ ಅವನೇಕೋತಿಯಾಗುತ್ತಾನೆ.
ರಾಜ ರಾಣಿ ಕಳ್ಳ ಪೋಲಿಸ್
ಇದರಷ್ಟು ಟೈಮ್ ಪಾಸು ಆಟವು ಮತ್ತೊಂದಿಲ್ಲ, ಒಂದೇ ಸಮನಾದ ನಾಲ್ಕು ಚೌಕಕಾರದ ಕಾಗದದಲ್ಲಿ ರಾಜ – ೧೦೦೦ ,ರಾಣಿ – ೫೦೦೦, ಕಳ್ಳ – ೦ ಮತ್ತು ಪೋಲಿಸ್ – ೧೦೦, ಎಂದು ಬರೆದು ನಂತರ,ಸಮಾನವಾಗಿ ಮಡಚಿ. ಮುಷ್ಟಿಯಲ್ಲಿ ಕುಲುಕಿ ಹಾಕಬೇಕು. ನಾಲ್ವರು ಒಂದೊಂದು ಚೀಟಿ ಆರಿಸಿ ಕೊಳ್ಳಬೇಕು. ಪೋಲಿಸ್ ಆದವನು ಕಳ್ಳ ಯಾರೆಂದು ಮೊದಲ ಆಯ್ಕೆಯಲ್ಲಿ ಸರಿಯಾಗಿ ತಿಳಿಸಿದರೆ ಅವನಿಗೆ ೧೦೦ ಅಂಕಗಳು ಇಲ್ಲದಿದ್ದರೆ ಅವನ ಅಂಕಗಳು ಕಳ್ಳನಿಗೆ ವರ್ಗವಣೆಯಾಗುತ್ತದೆ.
ಕಲ್ಲು ಮಣ್ಣು (ಕೆರೆ ದಡ)
“ಕಲ್ಲು ಮಣ್ಣು” ಆಟ ಆಡದ ಮಣ್ಣಿನ ಮಕ್ಕಳಿಲ್ಲ. ಇದೊಂದು ಅತ್ಯಂತ ಸರಳ ಆಟ, ಆಟ ಆಡಲು ಕನಿಷ್ಠ ನಾಲ್ವರು ಬೇಕು. ಆಟದಲ್ಲಿ ಒಬ್ಬನು ಕೊಡುವ ಸೂಚನೆಯನ್ನು ಬೇರೆಯರು ಪಾಲಿಸಬೇಕು. ಅವನು ಕಲ್ಲು ಎಂದರೆ ಎಲ್ಲರು ಕಲ್ಲನ್ನು ತಮ್ಮ ಪಾದದಲ್ಲಿ ಮುಟ್ಟಿರಬೇಕು(ಇಲ್ಲವಾದರೆ ಕಲ್ಲಿನ ಮೇಲಿರಬೇಕು). ಸೂಚನೆ ಕೊಡುವ ಆಟಗಾರ ಕಲ್ಲಿನ ಸಂಪರ್ಕದಲ್ಲಿ ಇರದ ಆಟಗಾರನನ್ನು ಮುಟ್ಟಿದರೆ ಅವನು ಆಟದಿಂದ ಔಟ್. ಹೀಗೆ ಆಟ ಸಾಗುತ್ತದೆ.
ಟೊಪ್ಪಿಗೆ ಆಟ
ಮಂಕಿ ಕ್ಯಾಪ್ ಆಟ ಅಂತ ಎಲ್ಲಾದರೂ ಕೇಳಿದರೆ ತಟ್ ಅಂತ ನೆನಪಿಗೆ ಬರುವುದು , ನಾವುಗಳು ಪ್ರಾರ್ಥಮಿಕ ಶಿಕ್ಷಣ ಪಡೆಯುವಾಗ ಆಡುತ್ತಿದ್ದ ಆಟ. ಆಟದ ವಿಧಾನ ಮರೆತಿದ್ದರು ನೀವು ಮರೆತಿರಬಹುದು. ಅದಕ್ಕೆ ಆಟದ ವಿಧಾನವನ್ನು ಒಮ್ಮೆ ನಿಮಗೆ ನೆನಪಿಸುತ್ತೇನೆ.
ಆಟದಲ್ಲಿ ಎಲ್ಲರು ಒಂದು ದೊಡ್ಡ ವೃತ್ತಾಕಾರದಲ್ಲಿ ಕುಳಿತು ಕೊಳ್ಳಬೇಕು. ಆಟದಲ್ಲಿ ಮಂಗನಾದವನು ಕೈಯಲ್ಲಿ ಕರವಸ್ತ್ರ ಅಥವಾ ಟೋಪಿಯನ್ನು ಬಚ್ಚಿಟ್ಟು ಕೊಂಡು ವೃತ್ತದ ಸುತ್ತ ” ಲೋಡ್ ಲೋಡ್ ತಿಮ್ಮಯ್ಯಾ” ಎಂದು ಕೋಗುತ್ತಾ ಸುತ್ತುವನು,ವೃತ್ತದಲ್ಲಿ ಕುಳಿತಿರುವರು ಅವನಿಗೆ ” ಏನು ಬೇಕು ಸಂಗಯ್ಯ” ಎಂದು ಪ್ರತಿ ಬಾರಿ ಕೇಳುವರು. ಹೀಗೆ ಅವನು ಸುತ್ತುವಾಗ ಯಾರಿಗೂ ಗೊತ್ತಾದಾಗ ಹಾಗೆ ಟೋಪಿ ಅಥವಾ ಕರವಸ್ತ್ರವನ್ನು ಕುಳಿತಿರುವವರ ಹಿಂದೆ ಗೊತ್ತಾಗದ ಹಾಗೆ ಇಡುವನು. ಆಗ ಯಾರ ಹಿಂದೆ ಟೋಪಿ ಅಥವಾ ಕರವಸ್ತ್ರ ಇರುತ್ತದೆಯೋ ಅವರು ಮಂಗನಾದವನನ್ನು ಹಿಡಿಯಬೇಕು. ಅಗ ಮಂಗನಾದವನು,ಟೋಪಿ ಹಿಡಿದು ಅಟ್ಟಿಸಿಕೊಂಡು ಬರುತ್ತಿರುವವನ ಜಾಗಕ್ಕೆ ಹೋಗಿ ಕೂತರೆ , ಟೋಪಿ ಹಿಡಿದವನು ಮಂಗನಾಗುತ್ತಾನೆ. ಅಷ್ಟರಲ್ಲಿ ಮಂಗನಾದವನನ್ನು ಮುಟ್ಟಿದರೆ ಅವನೇ ಮುಂದಿನ ಆಟದಲ್ಲಿ ಮಂಗನಾಗುತ್ತಾನೆ.ಮಂಕಿ ಕ್ಯಾಪ್ ಆಟ ಆಡಲು ಕನಿಷ್ಠ ೧೦ ಜನ ಇದ್ದರೆ ಚೆನ್ನ.
No comments:
Post a Comment