ಓದುಗರಿಗಾಗಿ



1. ನಿಧಾನ ಕಲಿಯುವವರೋ ಅಥವಾ ವಿಭಿನ್ನವಾಗಿ ಕಲಿಯುವವರೋ- ಶಿಮ್ಮಿ ಶರ್ಮಾ



ನಿಧಾನ ಕಲಿಕೆ ಎಂಬುದು ವಿದ್ಯಾರ್ಥಿಗಳ ಕಲಿಕೆಯ ವಿಭಿನ್ನ ಶೈಲಿ ಅಷ್ಟೆ. ನಿಧಾನವಾದರೂ ನಿಶ್ಚಯ ನಿರತವಾಗಿ ಓಡಿದರೆ ಸ್ಫರ್ಧೆ ಗೆಲ್ಲುವುದು ಖಂಡಿತ ಎಂಬ ಗಾದೆ ಮಾತು ಕೇಳಿಲ್ಲವೆ? ಈ ಲೇಖನದಲ್ಲಿ ನಿಧಾನವಾದರೂ ನಿಶ್ಚಯ ನಿರತ ಕಲಿಕೆ ಬಗ್ಗೆ  ವಿಚಾರ ಮಾಡೋಣ.
ನಾನು ಬೇರೆ ರೀತಿ ಕಲಿಯುತ್ತೇನೆ ಆದರೆ ಕಲಿಯದೇ ಬಿಡುವುದಿಲ್ಲ !
ನಿಧಾನವಾಗಿ ಕಲಿಯುವ ವಿದ್ಯಾರ್ಥಿಯೊಂದಿಗೆ ವ್ಯವಹರಿಸುವಾಗ, ತಾಳ್ಮೆ ಮತ್ತು ಸಹಾನುಭೂತಿಗಳು ತಪ್ಪದೇ  ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ಗುಣಗಳು.  ಆ ಮಕ್ಕಳ ಬಗ್ಗೆ ನಾಚಿಕೆಪಡುವ ಬದಲು, ಶಾಲಾ ನಾಯಕರು, ಶಿಕ್ಷಕರು ಮತ್ತು ಪೋಷಕರು ಆ ಮಕ್ಕಳು ತಮ್ಮ ನಿಜವಾದ ಸಾಮರ್ಥ್ಯವನ್ನು ತಲುಪಲು ಸಹಾಯ ಮಾಡಬೇಕು. ಒಡನಾಡಿ ಕಲಿಯುವವರು ಮತ್ತು ಬೋಧಕರಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ನೆರವು ನೀಡುವುದಾದರೆ, ನಾವು ಶೈಕ್ಷಣಿಕ ವ್ಯವಸ್ಥೆಯಲ್ಲಿ ನಮ್ಮ ನಿಲುವನ್ನು ಕುರಿತು ಪುನರ್ವಿಮರ್ಶಿಸಬೇಕು. ಎಲ್ಲ ಮಕ್ಕಳೂ ಒಂದೇ ರೀತಿಯಲ್ಲಿ ಅಥವಾ ಒಂದೇ ವೇಗದಲ್ಲಿ ಕಲಿಯುವುದಿಲ್ಲ. ಒಂದೇ ಕ್ಷೇತ್ರದಲ್ಲಿ ಎಲ್ಲ ಮಕ್ಕಳೂ ಉತ್ಕೃಷ್ಟವಾಗಿರುವುದಿಲ್ಲ; ಕೆಲವರು ಓದುವುದರಲ್ಲಿ  ಮುಂದು ಮತ್ತು ಕೆಲವರು ಲೆಕ್ಕದಲ್ಲಿ ಮುಂದು.ಹಾಗೆಂದಾಕ್ಷಣ ಇದು ಒಂದು ಮಗು ಇನ್ನೊಬ್ಬನಿಗಿಂತ ಜಾಣನೆಂದು ಮಾಡುತ್ತದೆಯೇ? ಖಂಡಿತವಾಗಿಯೂ ಇಲ್ಲ!
ಅಂತಹ ಮಕ್ಕಳ ಬಗ್ಗೆ ಇವರಿಂದ ಏನೂ  ಸಾಧ್ಯವಿಲ್ಲ ಎಂದು ಆಜೀವ ಹಣೆಪಟ್ಟಿ ಲಗತ್ತಿಸುವವರಿದ್ದಾರೆ. ಮತ್ತೊಂದೆಡೆ, ನಿಧಾನ ಕಲಿಯುವವರು ವಾಡಿಕೆಯ ಶಾಲೆಗಳ ಒಂದು ಭಾಗವಾಗಿರುತ್ತಾರೆ, ಆದ್ದರಿಂದ ಅವರು ದೈಹಿಕವಾಗಿ ಅಥವಾ ಮಾನಸಿಕವಾಗಿ ನ್ಯೂನತೆ ಹೊಂದಿಲ್ಲವೆಂಬುದು ಸಾಬೀತಾಗುತ್ತದೆ . ಅವರ ತೊಂದರೆ ಏನಿದ್ದರೂ ಕಲಿಯುವ ವೇಗದಲ್ಲಿ ನಿಧಾನಗತಿ ಮಾತ್ರ. ಅವರ ಏಕೈಕ ಸಮಸ್ಯೆ ಏನೆಂದರೆ ಅವರು ತಮ್ಮ ಸಹಪಾಠಿಗಳಿಗೆ ಹೋಲಿಸಿದರೆ ಪರಿಕಲ್ಪನೆಗಳನ್ನು ನಿಧಾನವಾಗಿ ಕಲಿಯುತ್ತಾರೆ ಮತ್ತು ಬೆಳವಣಿಗೆಯ ಮೈಲಿಗಲ್ಲುಗಳನ್ನು ನಿಧಾನ ವೇಗದಲ್ಲಿ ಸಾಧಿಸುತ್ತಾರೆ.
ಹಾಗೆಯೇ, ಕೆಲವೊಂದು ಮಕ್ಕಳು ನಿಧಾನವಾಗಿ ಪ್ರೌಢರಾಗುವ ಮತ್ತು ನಿಧಾನವಾಗಿ ಸೂಕ್ಷ್ಮ ಹಾಗು ಒಟ್ಟಾರೆ ಸ್ನಾಯು ಚಲನೆ ಕೌಶಲ್ಯಗಳನ್ನು ಮತ್ತು ನಿಧಾನವಾಗಿ ವಿಷಯಗ್ರಹಣೆ  ಮತ್ತು ನೆನಪಲ್ಲಿ ಇಟ್ಟುಕೊಳ್ಳುವ ಶಕ್ತಿ ಕೌಶಲ್ಯಗಳನ್ನು ಗಳಿಸುವ ಸಂದರ್ಭಗಳಿವೆ. ಅನೇಕ ಬಾರಿ ಇಂಥ ಮಕ್ಕಳನ್ನು 'ನಿಧಾನ ಕಲಿಯುವವರು' ಎಂದು ಕರೆಯುವುದಿದೆ. ವೈಯಕ್ತಿಕವಾಗಿ, ನನಗೆ  ಈ ಪದವೇ ಹಿಡಿಸುವುದಿಲ್ಲ. ಮಕ್ಕಳಿಗೆ  ಏನಾದರೂ ಹಣೆಪಟ್ಟಿ  ಕಟ್ಟುವುದೇ  ಖಂಡನೀಯವಾದದ್ದು.ಇನ್ನು ಕಲಿಯುವುದರಲ್ಲಿ 'ನಿಧಾನ' ಎಂದು ಹಣೆಪಟ್ಟಿ ಕಟ್ಟುವುದು ಅವಮಾನಕರ ಮತ್ತು ಅವರನ್ನು ಕೀಳು ಗೈದಂತೆ. – ಇನ್ನು ಆ ಮಕ್ಕಳಿಗೂ ಇತರರಷ್ಟು ತಾವು ಜಾಣರಲ್ಲ ಎಂದು ಹೇಳಿದಂತಾಗುತ್ತದೆ. ಅವರ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಮಟ್ಟಗಳಿಗೆ ತೀವ್ರ ಧಕ್ಕೆ ಒದಗುತ್ತದೆ ಮತ್ತು ತಮ್ಮೊಳಗೆ ನೋವನ್ನು ಹಿಡಿದುಕೊಳ್ಳುವ ಪ್ರಯತ್ನದಿಂದ ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿ ಅಂತರ್ಮುಖಿಗಳಾಗುತ್ತಾರೆ.
ಅದೇನೇ ಇದ್ದರೂ, ಹೆಚ್ಚುವರಿ ಸಹಾಯ ಅಗತ್ಯವಿರುವ ಮಕ್ಕಳು ಮತ್ತು ತಾವು ಕಲಿಯಲು ಮತ್ತು ಬೆಳೆಯಲು ವಿಶೇಷವಾದ ಬೋಧನೆ ಅಗತ್ಯವಿರುವ ಮಕ್ಕಳು  ಇದ್ದೇ ಇರುತ್ತಾರೆ.
ಒಂದು ಮಗುವು 'ನಿಧಾನವಾಗಿ ಕಲಿಯುವ ಮಗು ' ಆಗಿದ್ದರೆ, ಅವನಿಗೆ ವಿಷಯಗಳನ್ನು ನಿಧಾನವಾಗಿ ಕಲಿಸಿಕೊಡಿ. ಅವರಿಗೆ ಅವರ ಸಾಮರ್ಥ್ಯವನ್ನು ತಲುಪಲು ಅಗತ್ಯವಾದ ಮತ್ತು ಅವಶ್ಯವಾದ ಸಹಾನುಭೂತಿ ಮತ್ತು ಸಮಯವನ್ನು ನೀಡಿರಿ .ಅವರಿಗೆ ಅಗತ್ಯವಾದ ವಾತಾವರಣ ಮತ್ತು ಉಪಕರಣಗಳನ್ನು ಒದಗಿಸಿ. ಎಲ್ಲ ಮಕ್ಕಳಿಗೂ ಸೂಕ್ತ  ಅವಕಾಶ ದೊರಕಲೇ ಬೇಕು.

 ಶಿಕ್ಷಕರು ಮತ್ತು ಪೋಷಕರು ನಿಧಾನ ಕಲಿಯುವವರ ಜೀವನದಲ್ಲಿ ಪ್ರಮುಖ ಪಾತ್ರಗಳನ್ನು ವಹಿಸುತ್ತಾರೆ. ಅವರ ಬೆಂಬಲ ಮತ್ತು ಪ್ರೇರಣೆ ಇಂತಹ ಮಕ್ಕಳು ತಮ್ಮ ಅಡೆತಡೆಗಳಿಂದ ಹೊರಬರಲು ಬಹಳ ಸಹಾಯ ಮಾಡುತ್ತದೆಅಂದರೆ ಇದರರ್ಥಶಿಕ್ಷಕರು ಮತ್ತು ಪೋಷಕರಿಗೆ ಶಾಲೆಗಳು ಮತ್ತು ಸಮಾಜವು  ಅವರ ಬಗ್ಗೆ  ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಟ್ಟಿರುತ್ತಾರೆ . ನಿಧಾನಗತಿಯ ಕಲಿಯುವವರಿಗೆ ಆರೋಗ್ಯಕರ ಮತ್ತು ಅನುಕೂಲಕರವಾದ ಪರಿಸರವನ್ನು ರಚಿಸುವುದು ಅವರ ವೇಗವನ್ನು ಸುಧಾರಿಸಲು ಅತ್ಯಂತ ಮಹತ್ವದ್ದಾಗಿದೆ. ಸಾಮಾನ್ಯವಾಗಿ ತಮ್ಮ ತರಗತಿಯಲ್ಲಿ ನಿಧಾನಗತಿಯ ಕಲಿಯುವವರನ್ನು ಹೊಂದಿರುವ  ಶಿಕ್ಷಕರು  ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಾರೆ: ಆಯಾ  ಟರ್ಮ್ ನ ಪಠ್ಯಕ್ರಮವನ್ನು ಮಾಡಿಮುಗಿಸುವುದುಅಂತಹ ವಿದ್ಯಾರ್ಥಿಗಳ ಬಗ್ಗೆ ಪರಾನುಭೂತಿ ಕಳೆದುಕೊಳ್ಳುವ ಭಯಮತ್ತು ಇನ್ನೂ ಅನೇಕ ಸಮಸ್ಯೆಗಳು.

"ನಿಧಾನವಾಗಿ  ಕಲಿಯುವ ಮಕ್ಕಳಿ" ಗಾಗಿ ಕಾರ್ಯ ತಂತ್ರಗಳು
ಸಾಮಾನ್ಯ ನಂಬಿಕೆಗೆ ವಿರುದ್ಧವಾಗಿ, ವಾಡಿಕೆಯ ತರಗತಿಯಲ್ಲಿ ನಿಧಾನಗತಿಯ ಕಲಿಕೆಗಾರರು ಇರುವುದು ಅಪರೂಪವೂ ಅಲ್ಲ ಅಥವಾ ಅನನ್ಯವೂ ಅಲ್ಲ. ತರಗತಿಯಲ್ಲಿ ಸಾಮಾನ್ಯವಾಗಿ ಬಹು ಸಂಖ್ಯೆಯ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾದ ಬೋಧನಾ ಸಂಪನ್ಮೂಲಗಳು, ಪಠ್ಯಗಳು, ಅಭ್ಯಾಸ ಪುಸ್ತಕಗಳು, ಮತ್ತು ಕಲಿಕೆ ಸಾಮಗ್ರಿಗಳಿಂದ ಸರಾಸರಿ ವೇಗದಲ್ಲಿ ಕಲಿಯಲು ಸಾಧ್ಯವಾಗದ ವಿದ್ಯಾರ್ಥಿಯೇ ಒಬ್ಬ ನಿಧಾನಗತಿಯಲ್ಲಿ  ಕಲಿಯುವ ವಿದ್ಯಾರ್ಥಿ. ಈ ವಿದ್ಯಾರ್ಥಿಗಳಿಗೆ ವಿಶೇಷ ಬೋಧನಾ ವೇಗ ಗತಿ, ಪದೇ ಪದೇ ಹಿಮ್ಮಾಹಿತಿ ಒದಗಿಸುವುದು , ಸರಿಪಡಿಸುವ ಬೋಧನೆ, ಮತ್ತು / ಅಥವಾ ಮಾರ್ಪಡಿಸಿದ ಪಠ್ಯವಸ್ತುಗಳು ಅಗತ್ಯವಿದೆ, ಇವು ಎಲ್ಲಾ ಕಲಿಕೆ ಸಂಭವಿಸುವಂತೆ  ಸಾಕಷ್ಟು ಬದಲಾಯಿಸಿ ಕೊಳ್ಳ ಬಹುದಾದಂತಹ ಪರಿಸ್ಥಿತಿಗಳಲ್ಲಿ ನಿರ್ವಹಿಸಲ್ಪಡಬೇಕು. ಅವರ ಸ್ಪಷ್ಟ ಲಕ್ಷಣವೆನೆಂದರೆ ಹೆಚ್ಚು ಸಮರ್ಥ ವಿದ್ಯಾರ್ಥಿಗಳಿಗೆ ಹೋಲಿಸಿದರೆ  ಅವರು ಸೀಮಿತ ಅವಧಿಯ ವರೆಗೆ ಮಾತ್ರ ತಮ್ಮ  ಗಮನವನ್ನು ಕಲಿಕೆಗೆ ನೀಡುತ್ತಾರೆ. ಈ ವಿದ್ಯಾರ್ಥಿಗಳನ್ನು ಕಲಿಕೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿರುವಂತೆ  ನೋಡಿಕೊಳ್ಳಲು ವಿಷಯ ಬೋಧನೆ ವಿಧಾನಗಳಲ್ಲಿ (ನೇರ, ಪರೋಕ್ಷ), ತರಗತಿಯ ವಾತಾವರಣ (ಸಹಕಾರ, ಸ್ಪರ್ಧಾತ್ಮಕ), ಮತ್ತು ಬೋಧನಾ ಸಾಮಗ್ರಿಗಳು (ಚಲನಚಿತ್ರಗಳು, ಅಬ್ಯಾಸ ಪುಸ್ತಕಗಳು, ಸಹಕಾರಿ ಆಟಗಳು, ಅನುಕರಣೆಗಳು)  ಮುಂತಾದವಲ್ಲಿ ಸಾಮಾನ್ಯ ಬದಲಾವಣೆಗಿಂತಲೂ ಹೆಚ್ಚು ಮಾಡಬೇಕಾಗುತ್ತದೆ .

ಈ ಬದಲಾವಣೆಯು ನಮ್ಮ ಪಾಠದ ಭಾಗವಾಗಿರದಿದ್ದರೆಈ ವಿದ್ಯಾರ್ಥಿಗಳು ಮ್ಮ ಬೋಧನೆಗಳನ್ನು ಅಡ್ಡಿಪಡಿಸುವ ರೀತಿಯಲ್ಲಿ ತಮ್ಮದೇ ಆದ ವೈವಿಧ್ಯತೆಯನ್ನು ರಚಿಸಿಕೊಂಡುಬಿಡುತ್ತಾರೆ. ನಿಧಾನಗತಿಯ ಕಲಿಯುವವರ ಇತರ ತಕ್ಷಣದ ಗುಣಲಕ್ಷಣಗಳು ಮೂಲಭೂತ ಕೌಶಲ್ಯ (ಓದುವಿಕೆಬರೆಯುವಿಕೆ ಮತ್ತು ಗಣಿತಶಾಸ್ತ್ರ) ದಲ್ಲಿ ಅವರ ಕೊರತೆಗಳುಅಮೂರ್ತ ವಿಚಾರಗಳನ್ನು ಅರ್ಥೈಸಿಕೊಳ್ಳುವಲ್ಲಿ ಅವರ ಕಷ್ಟಮತ್ತು  ಆತಂಕದ ವಿಷಯವೆಂದರೆ ಅವರ ಕೆಲವೊಮ್ಮೆ ಅಸಹಜ ಮತ್ತು ಅಸಡ್ಡೆ ಕೆಲಸದ ಅಭ್ಯಾಸಗಳು.

ನಿಧಾನಗತಿಯ ಕಲಿಯುವವರಿಗೆ  ಬೋಧನೆಗೆ ಅಂತಲೇ ಯಾವುದೇ ಏಕೈಕ ತಂತ್ರ ಅಥವಾ ತಂತ್ರಗಳ ಸಂಯೋಜನೆಯು ಸಾಕಾಗುವುದಿಲ್ಲವಾದರೂ, ಮುಂದೆ ಏಳಿರುವ ಸಲಹೆಗಳು ನಿಧಾನವಾಗಿ ಕಲಿಯುವವರ ಕಲಿಕೆಯ ಅಗತ್ಯಗಳನ್ನು  ಪೂರೈಸುವ ಬೋಧನಾ ತಂತ್ರಗಳನ್ನು ನಿರ್ದಿಷ್ಟವಾಗಿ ಅಭಿವೃದ್ಧಿಪಡಿಸುವುದಕ್ಕಾಗಿ ಪ್ರಾರಂಭಿಕ ಹಂತವಾಗಿವೆ. ವಿದ್ಯಾರ್ಥಿಗಳ ಆಸಕ್ತಿಗಳು, ಅಗತ್ಯತೆಗಳು ಮತ್ತು ಅನುಭವಗಳನ್ನು ಅಳವಡಿಸುವ ಪಾಠಗಳನ್ನು ನಾವು ಅಭಿವೃದ್ಧಿಪಡಿಸಬೇಕಾಗಿದೆ.

ನಿಧಾನಗತಿಯ ಕಲಿಯುವವರು ಗಮನ ಹರಿಸುವ ಅವಧಿ  ಕಡಿಮೆ ಅವಧಿ ಯಾಗಿರುವುದನ್ನು  ಪರಿಹರಿಸಲು  ಇದು ಸಹಾಯ ಮಾಡುತ್ತದೆ. ಅಲ್ಲದೆವಿದ್ಯಾರ್ಥಿಗಳಿಗೆ ತಮ್ಮ ನಿರ್ದಿಷ್ಟ ಆಸಕ್ತಿಗಳು ಅಥವಾ ಅನುಭವಗಳನ್ನು ಮನಸ್ಸಿನಲ್ಲಿ ಇಟ್ಟು ಕೊಂಡು ಈ ಪಾಠಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಈ ವಿದ್ಯಾರ್ಥಿಗಳು ಭಾವಿಸುವಂತೆ ಮಾಡಬೇಕು.

ನಿಧಾನಗತಿಯ ಕಲಿಯುವವರಲ್ಲಿ ಒಂದು ಸಾಮಾನ್ಯ ಲಕ್ಷಣವೆಂದರೆ ಅವರು ಓದುವ ಮೂಲಕ ಕಲಿಯುವುದಕ್ಕಿಂತ  ನೋಡಿ ಮತ್ತು ಕೇಳಿ ವಿಷಯವನ್ನು  ಉತ್ತಮವಾಗಿ ಕಲಿಯುತ್ತಾರೆ. ಇದು ಅಚ್ಚರಿಯೆನಿಸಬಾರದು, ಏಕೆಂದರೆ ನಿಧಾನ ಕಲಿಯುವವರಲ್ಲಿ ಸಾಮಾನ್ಯವಾಗಿ ಓದುವಿಕೆ ಸೇರಿದಂತೆ ಮೂಲಭೂತ ಕೌಶಲ್ಯದ ಕ್ಷೇತ್ರದಲ್ಲಿ ಕಾರ್ಯಕ್ಷಮತೆಯು ಗ್ರೇಡ್ ಮಟ್ಟಕ್ಕಿಂತ ಕಡಿಮೆಯಾಗಿರುತ್ತದೆ. ಚಲನಚಿತ್ರಗಳು, ವಿಡಿಯೋ ಟೇಪ್ಗಳು ಮತ್ತು ಆಡಿಯೋಗಳನ್ನು ಪಾಠಗಳಾಗಿ ಅಳವಡಿಸಿಕೊಳ್ಳುವುದು ನಿಧಾನ ಕಲಿಯುವವರಲ್ಲಿ ಕಲಿಕೆ ವಿಧಾನಗಳಿಗೆ ತಂತ್ರಗಳನ್ನು ಬೋಧನಾ ವಿಧಾನವಾಗಿ  ಮಾಡುತ್ತದೆ. ಅನೇಕ ಬರವಣಿಗೆಯ ಕಾರ್ಯಯೋಜನೆಗಳನ್ನು ಇವರು –ಪ್ರಯತ್ನಿಸುವುದೇ ಇಲ್ಲ ಅಥವಾ ಅರೆ ಮನಸ್ಸಿನಿಂದ ಮಾತ್ರವೇ ಪ್ರಾರಂಭಿಸುತ್ತಾರೆ ಎಂದು ತಿಳಿದುಬಂದಿದೆ ಏಕೆಂದರೆ ಈ ವಿದ್ಯಾರ್ಥಿಗಳು ತಮ್ಮ ಬರಹವು ಬರವಣಿಗೆಯ ಕನಿಷ್ಟ ಮಾನದಂಡಗಳನ್ನು ಪೂರೈಸುವುದಿಲ್ಲ ಎಂದು ಮನಗಂಡಿರುತ್ತಾರೆ. ಅದರ ಬದಲು ಕೊಟ್ಟ ಕೆಲಸದ  ತ್ತರಗಳನ್ನು  ಎಚ್ಚರಿಕೆಯಿಂದ ಟೇಪ್ ಮಾಡುವುದನ್ನು  ಪರಿಗಣಿಸಬಹುದು. ಇದು ಕಾಗುಣಿತ, ಸಿಂಟ್ಯಾಕ್ಸ್ ಮತ್ತು ಬರಹ ದೋಷಗಳನ್ನು ತಪ್ಪಿಸುವ ಪ್ರಯೋಜನವನ್ನು ಹೊಂದಿದೆ.

ನಿಧಾನಗತಿಯ ಕಲಿಕೆಯ ವಿದ್ಯಾರ್ಥಿಗೆ ಕಲಿಸುವ ಬಗ್ಗೆ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಶಿಕ್ಷಕನು ಇಡೀ ಪ್ರಕ್ರಿಯೆಯ ಉದ್ದಕ್ಕೂ ತಾಳ್ಮೆಯಿಂದಿರಬೇಕು ಮತ್ತು ಸ್ಥಿರವಾಗಿರಬೇಕು. ನಿಧಾನಗತಿಯ ಕಲಿಯುವವರ ಶಿಕ್ಷಣದ ಪ್ರಮುಖ ಸಮಸ್ಯೆ ಅವರ ದುರ್ಬಲ ಜ್ಞಾನಗ್ರಹಣ ಕೌಶಲ್ಯಗಳು  ಮತ್ತು ನಿಧಾನ ವೇಗದ ಕಲಿಕೆ .ಸುಲಭವಾಗಿ  ಬೇರೆಡೆ ಗಮನ ಹರಿಸುವ ಸಾಮರ್ಥ್ಯ ಮತ್ತು ಕಡಿಮೆ ಸಮಯ  ಗಮನವನ್ನು ಹೊಂದಿರುವ ಸಾಮರ್ಥ್ಯದ ಬಗ್ಗೆ ನಾವು ತಿಳಿದುಕೊಳ್ಳಬೇಕು ಮತ್ತು ತಾಳಿಕೊಳ್ಳಬೇಕು. ಇದಲ್ಲದೆಅದರಿಂದ ಇಡೀ ತರಗತಿಯು ಪರಿಣಾಮಕ್ಕೆ ಒಳಗಾಗದಂತೆ ಈ ಪರಿಸ್ಥಿತಿಯನ್ನು ನಿಭಾಯಿಸಲು ಸೃಜನಾತ್ಮಕ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕು.



ಕಲಾ ತರಗತಿಗಳುಶಾಲಾ ಚಟುವಟಿಕೆಗಳು ಅಥವಾ ಸ್ವಯಂ ಸೇವೆ ಬಗ್ಗೆ ಸ್ವಇಚ್ಛೆಯಿಂದ ಅವರು ಮುಂದೆ ಬರಲು ಅವರನ್ನು ಆಹ್ವಾನಿಸಬೇಕು. ಭಾಗವಹಿಸುವಿಕೆಯನ್ನು ಗುರುತಿಸಿ ಮತ್ತು ಬಹುಮಾನ ನೀಡಿರಿ. ಇದು ಅವರ ಆತ್ಮ ವಿಶ್ವಾಸಕ್ಕೆ ಅದ್ಭುತ ಪರಿಣಾ ೀರುತ್ತದೆ.ತರಗತಿಯ ಮುಂದೆ ಅಥವಾ ಸಾರ್ವಜನಿಕವಾಗಿ ನಿಧಾನಗತಿಯ ವಿದ್ಯಾರ್ಥಿಗಳ ಪ್ರತಿ ಸಣ್ಣ ಪ್ರಯತ್ನವನ್ನು ನಾವು ಯಾವಾಗಲೂ ಶ್ಲಾಘಿಸಬೇಕು. ಇದು ಅವರ ಸ್ವಾಭಿಮಾನ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ. . ನಿರಂತರ ಪ್ರಯತ್ನಕ್ಕಾಗಿ ನಾವು ಅವುಗಳನ್ನು ಪ್ರೋತ್ಸಾಹಿಸಬೇಕು. ತಮ್ಮ ಕೆಲಸಗಳನ್ನು ಮುಂದೂಡಿದರೂ ಪರವಾಯಿಲ್ಲ ಕೊಟ್ಟ ಕೆಲಸವನ್ನು ಮಾಡಿ ಮುಗಿಸಲು ಅವರ ಶ್ರಮ ವನ್ನು ಮುಂದುವರಿಸಲು ಪ್ರೋತ್ಸಾಹಿಸಿ.



ಕೊನೆಯದಾಗಿಕೆಲವು ಮಾಡಬಾರದ ಕೆಲಸಗಳು:
ನಾವು ತರಗತಿಯಲ್ಲಿ  ಎಲ್ಲರ  ಮುಂದೆ ವಾಗ್ದಂಡನೆ ಮಾಡಬಾರದು. ಬರೆಯುವುದ ಕ್ಕೆ ಒತ್ತು ಕೊಡುವ ಬದಲು  ಓದುವದಕ್ಕೆ  ನಾವು ಗಮನಹರಿಸಬೇಕು. ಮೌಖಿಕ ಶಿಕ್ಷಣವು ಅವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಕಂಡುಬಂದಿರುತ್ತದೆ. ನಾವು ಹೆಚ್ಚು ಸಂರಕ್ಷಣೆ ಮಾಡಬಾರದು. ಅವರ ನಿಧಾನ ಕಲಿಕೆಯು ಅವರ ಪರಿಚಯವಾಗಿರ ದಂತೆ ನೋಡಿಕೊಳ್ಳಿರಿ.
ನಿಧಾನ ಕಲಿಯುವವರಿಗೆ ಕಲಿಸುವಾಗ ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದು ಏನೆಂದರೆ  ಏನೂ ಕಲಿಯದೇ ಇರುವುದಕ್ಕಿಂತಲೂ ನಿಧಾನವಾಗಿ ವಿಷಯಗಳನ್ನು ಕಲಿಯಲು ಅವರಿಗೆ ಅವಕಾಶ ಮಾಡಿಕೊಡುವುದು ಸರಿ ಎಂಬುದು. ಓರ್ವ ಶಿಕ್ಷಕನಾಗಿನಾವು ಈ ವಿದ್ಯಾರ್ಥಿಗಳಿಗೆ ದೀಪಸ್ಥಂಭದಮತೆ-ತಮ್ಮದೇ ಆದ ಕಲಿಕೆಯ ವೇಗದಿಂದ ಕಲಿಕೆಯ ತೀರವನ್ನು ತಲುಪಲು  ಅವರಿಗೆ ನಾವೇ ಭರವಸೆಯ ಮೂಲ ಮತ್ತು ನಿರಂತರ ಪ್ರೋತ್ಸಾಹ. ನೆನಪಿಡಿಯಾವ  ವಿದ್ಯಾರ್ಥಿಯೂ ಹಿಂದುಳಿಯಬಾರದು.

2.ಸೃಜನಶೀಲತೆ: ಪುಟ್ಟ ಮಕ್ಕಳ ಶಿಕ್ಷಣದಲ್ಲಿ ಕಲೆಯ ಪಾತ್ರ -ಆಶಾ ಸಿಂಗ್



 ಕಲೆಯು ಶಿಕ್ಷಣದ ಬುನಾದಿ
- ದೇವಿ ಪ್ರಸಾದ್, ಶಿಲ್ಪ ಶಾಸ್ತ್ರಜ್ಞ ಮತ್ತು ಶಾಂತಿ ಕ್ರಿಯಾವಾದಿ
ಪುಟ್ಟ ಮಕ್ಕಳು ತಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥ ಮಾಡಿಕೊಳ್ಳಲು, ಒಂದರೊಡನೆ ಇನ್ನೊಂದಕ್ಕೆ ಸಂಬಂಧ ಕಲ್ಪಿಸುವುದು, ಹೋಲಿಸುವುದು ಮತ್ತು ತಮ್ಮದೇ ನಿರ್ಣಯಕ್ಕೆ ಬರುವುದಕ್ಕೆ ಇರುವ ತಮ್ಮ ಒಲವನ್ನು ತೋರಿಸಲು ಬೇರೆ ಬೇರೆ ರೀತಿಯ ಬಹಳಷ್ಟು ಸಂಭಾಷಣೆಯನ್ನು ಮಾಡುತ್ತಾರೆ.  ಅವರ ಒಂದು ಸಂಭಾಷಣೆಯು ಈ ರೀತಿ ಇರಬಹುದುಇವತ್ತು ಮಳೆ ಬರ್ತಿದೆ ಯಾಕೇಂದ್ರೆ ನಮ್ಮ ಟೀಚರ್ ಇವತ್ತು ಬಕೆಟ್‌ಗಳಲ್ಲಿ ನೀರನ್ನ ಮೇಲೆ, ಮೇಲೆ, ಮೇಲೆ ಎರಚ್ತಾ ಇದ್ರು..  ಮೂರು ವರ್ಷದ ಮಗು ಅವಧಿಗಿಂತ ಸ್ವಲ್ಪ ಮುಂಚೆ ಮನೆಗೆ ಹೋಗಲು ಕಿರಿ-ಕಿರಿಗೊಂಡು ದೂರುತ್ತಾ ಯಾಕಮ್ಮ ಇಷ್ಟು ಬೇಗ ಬಂದೆ ಎಂದು ಕೇಳುತ್ತಿತ್ತು.  ನಾಲ್ಕು ವರ್ಷದ ಒಂದು ಮಗು ಅಡ್ಡಾ-ದಿಡ್ಡಿ ಇಟ್ಟಿದ್ದ ಕುರ್ಚಿಯ ದಿಂಬುಗಳನ್ನು ತನ್ನ ಅಮ್ಮ ಸರಿಯಾಗಿ ಜೋಡಿಸಿಟ್ಟಾಗ ನೀನು ಸಿಂಹದ ಗುಹೆಯನ್ನು ಹಾಳು ಮಾಡಿದೆ, ಈಗ ಅದು ಜಿಂಕೆಯನ್ನು ಹಿಡಿದು ಬಿಡತ್ತೆ! ಎಂದು ಕೂಗಾಡುತ್ತದೆ.  ಇಂತಹಾ ಮಕ್ಕಳ ಮಾತುಗಳು ಮಕ್ಕಳ ಚಿಂತನೆಯ ಉತ್ಸಾಹ ,ತುಡಿತ ಮತ್ತು ಚಿಂತನಾ ಪ್ರಕ್ರಿಯೆಯನ್ನು ತಿಳಿಸುತ್ತವೆ.ಇವು ಅವರು ವಿನೂತನವಾಗಿ ಆಲೋಚಿಸುವ ಅವರ ಸಾಮರ್ಥ್ಯವನ್ನು ಹೇಳುವುದಲ್ಲದೆ ವಾಸ್ತವವಾದ ಭೌತಿಕ-ಸಾಮಾಜಿಕ ಜಗತ್ತನ್ನು  ಅರ್ಥಮಾಡಿಕೊಳ್ಳಲು ಇರುವ ಸಾಮರ್ಥ್ಯವನ್ನು ತೋರಿಸುತ್ತವೆ. ಅವರ ಹೇಳಿಕೆಗಳು ದೊಡ್ಡವರು ಹೇಳಿಕೊಟ್ಟಿದ್ದರಿಂದ ರೂಪುಗೊಂಡಿರದೇ ಅವರದೇ ಅನುಭವ ಮತ್ತು ಶೋಧನೆಗಳಿಂದ ಹೊರಬಂದ ನವೀನ ದೃಷ್ಟಿಕೋನವನ್ನು ಬೊಟ್ಟುಮಾಡಿ ತೋರಿಸುತ್ತದೆ.  ಮಕ್ಕಳು ಸೃಜನಶೀಲ ಮನಸ್ಸು ಮತ್ತು ಬಹುಮುಖಿ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುತ್ತಾರೆ.
ಸೃಜನಶೀಲತೆ ಎಂದರೆ ಏನು?
ಸೃಜನಶೀಲತೆಯನ್ನು ವಿಭಿನ್ನ ಮತ್ತು ನವೀನ ಚಿಂತನೆ ಎಂದು ನಿಘಂಟು ವ್ಯಾಖ್ಯಾನಿಸುತ್ತದೆ.  ಸೃಜನಶೀಲತೆಯು ಪರಿಶೋಧನೆ ಮತ್ತು ಅನ್ವೇಷಣೆಯಿಂದ ಸೋಪಜ್ಞ ಕಲ್ಪನೆಗಳು ರೂಪುಗೊಳ್ಳುವ ಪ್ರಕ್ರಿಯೆ.  ಬೋಧನೆ ಮತ್ತು ಕಲಿಕೆಯಲ್ಲಿ ಸೃಜನಶೀಲತೆಯು ಪ್ರಕ್ರಿಯೆಯಿಂದ ಬರುವ ಅನುಭವದಿಂದ ರೂಪುಗೊಳ್ಳುತ್ತದೆಯೇ ಹೊರತು ಸಿದ್ಧ ಉತ್ಪನ್ನದ ಹೀಗಿರಬೇಕು ಎಂಬ ಕಾಳಜಿಯಿಂದ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.  ಸೃಜನಶೀಲತೆಯು ಪ್ರತಿಭೆ, ಕೌಶಲ್ಯ ಅಥವಾ ಬುದ್ಧಿವಂತಿಕೆಯನ್ನೂ ಮೀರಿದ್ದು. ಸೃಜನಶೀಲತೆಯು ಸ್ಪರ್ಧೆ ಅಥವಾ ಇನ್ನೊಬ್ಬರಿಗಿಂತಾ ಉತ್ತಮವಾಗಿ ಮಾಡುವುದನ್ನೂ ಮೀರಿದೆ. ಅಲ್ಲದೆ ಇದು ಚಿಂತಿಸುವ, ಪರಿಶೋಧಿಸುವ, ಅನ್ವೇಷಿಸುವ ಮತ್ತು ಕಲ್ಪನೆಯನ್ನು ಮಾಡುವ ಕೆಲಸ. ಅನನ್ಯ ಸಾಧ್ಯತೆಗಳು ಮತ್ತು ನವೀನ ಚಿಂತನೆಗಳನ್ನು ಆಸ್ವಾದಿಸುವಂತೆ ಸಕ್ರಿಯವಾಗಿ ತೊಡಗಿಸಿಕೊಳ್ಳುವಿಕೆಯನ್ನು ಮಕ್ಕಳಲ್ಲಿ ಪೋಷಿಸುವುದು ಹೇಗೆ?  ಕಲಾವಿದರು ಸೃಜನಶೀಲರು ಮತ್ತು ಕಲೆಯ ಉತ್ಕೃಷ್ಟತೆಯೇ ಸೃಜನಶೀಲತೆ ಎಂದು ಅನೇಕ ಬಾರಿ ನಾವು ಪರಿಭಾವಿಸುತ್ತೇವೆ.
ಅಮುಲ್‌ನಂತಹ ವ್ಯಾಪಾರಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಂಧರ್ಬಿಕವಾದ ಮತ್ತು ಹಾಸ್ಯಭರಿತ ಜಾಹೀರಾತುಗಳನ್ನು ನೀಡಿ ಸೃಜನಶೀತೆಯನ್ನು ತೋರುವ ಸಾಧ್ಯತೆ ಇದೆ, ಹಾಗೆಯೇ ಒಬ್ಬ ರೈತ ಸಸಿಗಳನ್ನು ನೆಡುವಾಗ ವಿನೂತನ ವಿನ್ಯಾಸಗಳನ್ನು ರೂಪಿಸಿ ಸೃಜನಶೀತೆಯನ್ನು ತೋರಿಸಬಹುದು, ಒಬ್ಬ ತಾಯಿಯು ಮನೆಯಲ್ಲಿನ ಸ್ಥಳಗಳನ್ನು ಆಸಕ್ತಿದಾಯಕ ತಾಣಗಳನ್ನಾಗಿ ವಿನ್ಯಾಸಗೊಳಿಸುವುದರಿಂದ ಸೃಜನಶೀಲತೆಯನ್ನು ತೋರಬಹುದು.   ಇದರಂತೆಯೇ ಅನೇಕ ತಂದೆತಾಯಿಯರು ಅದ್ಭುತವಾದ ಕಥೆಗಳನ್ನು ಸೃಷ್ಠಿಸಿ ತಮ್ಮ ಮಕ್ಕಳಿಗೆ ಹೇಳಿ ಅವರಿಗೆ ಆನಂದವನ್ನು ನೀಡುವುದರೊಂದಿಗೆ ಬಾಂಧವ್ಯವನ್ನೂ ಬೆಸೆಯುತ್ತಾರೆ.  ದೈನಂದಿನ ಕೆಲಸಕಾರ್ಯದಲ್ಲಿ ಹೊಸ ಮಿಂಚನ್ನು ಹೊಮ್ಮಿಸಲು ಸೃಜನಶೀಲತೆಯು ಸಾಧನವಾದರೂ ವೈವಿದ್ಯಮಯ ಆಲೋಚನೆಗಳು ಹಾಗೂ ನವೀನ ಚಿಂತನೆಗಳನ್ನು ಪ್ರೋತ್ಸಾಹಿಸಲು ಕಲೆಯು ಹೆಚ್ಚು ಉಪಯುಕ್ತ ಎಂಬುದು ಸತ್ಯ. ಸ್ವತಂತ್ರವಾಗಿ ಆಲೋಚಿಸುವ ಅನುಭವಗಳು, ಪರಿಶೋಧನೆ, ಪ್ರಯೋಗ ಮತ್ತು ಅನುಭವಗಳು ಈ ಮೂರು ಅಂಶಗಳು ಎಳೆಯ ಮಕ್ಕಳನ್ನು ಸೃಜನಶೀಲ ವ್ಯಕ್ತಿಗಳಾಗುವತ್ತ ಮುನ್ನೆಡೆಸುವ ಪ್ರಮುಖ ಸಾಧನಗಳಾಗಿವೆ. ತಾನು ಚಿಕ್ಕ ವಯಸ್ಸಿನಲ್ಲಿ ಕಲಿತ ಶಾಲೆಯಲ್ಲಿ ತನಗೆ ಸಿಕ್ಕ ಅವಕಾಶ ಮತ್ತು ಸಾಹಸದ ಅನುಭವವು ಇಂದಿನ ತನ್ನ ಅಪೂರ್ವವಾದ ಯಶಸ್ಸಿಗೆ ಕಾರಣ ಎಂದು ಜಪಾನ್ ದೂರದರ್ಶನದ ಕಾರ್ಯಕ್ರಮ ನಿರೂಪಕಿಯು ತಾನು ಬರೆದಿರುವ ಪುಸ್ತಕ ಟೊಟೊಚನ್‌ನಲ್ಲಿ ಹೇಳಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಡಿ ಕಲಿಯುವ ಸ್ವಾತಂತ್ರ್ಯ ಮತ್ತು ಇದೆಲ್ಲಕ್ಕಿಂತ ಹೆಚ್ಚಾಗಿ ತಪ್ಪು ಮಾಡುವ ಸ್ವಾತಂತ್ರ್ಯ ಮತ್ತು ಪರ್ಯಾಯ ಮಾರ್ಗಗಳನ್ನು ಆಲೋಚಿಸಲು ಸಿಕ್ಕ ಮಾರ್ಗದರ್ಶನವು ಸಮಸ್ಯಾ ಪರಿಹಾರ, ಆತ್ಮವಿಶ್ವಾಸ ಮತ್ತು ಸ್ವತಂತ್ರ ಚಿಂತನೆಗಳಂತಹ ಕೌಶಲ್ಯಗಳನ್ನು ಬೆಳಸಿಕೊಳ್ಳಲು ಅವಕಾಶ ನೀಡುತ್ತದೆ. ಆಟವಾಡುತ್ತಾ ಪ್ರಯೋಗಮಾಡುವ ದಿನ-ನಿತ್ಯದ ಸರಳ ಕಾರ್ಯದ ಸಂಕೀರ್ಣವಾದ ಜಾಲದಲ್ಲಿ ಸೃಜನಶೀಲತೆಯು ಅಡಗಿದೆ.
ಸೃಜನಶೀಲತೆಯನ್ನು ಪೋಷಿಸುವುದು
ಶಾಲಾ ವಿದ್ಯಾಭ್ಯಾಸವು ಸಮುದಾಯ ನಿರ್ದೇಶಿತ  ವಿಧಾನಗಳನ್ನು ಬಳಸುವತ್ತ ಒಲವನ್ನು ಹೊಂದಿದ್ದು ಸಾಮರ್ಥ್ಯ ಮತ್ತು ಆಸಕ್ತಿಗಳಲ್ಲಿರುವ ವ್ಯಕ್ತಿಗತ ಭಿನ್ನತೆಯ ಕಡೆಗೆ ಗಮನ ಹರಿಸುವುದಿಲ್ಲ. ಇಂದಿನ ವಿದ್ಯಾಭ್ಯಾಸದ ಪರಿಯು ಮುದ್ರಿತ ಜ್ಞಾನಬಂಡಾರವನ್ನು ಸ್ವಾಧೀನ ಪಡಿಸಿಕೊಳ್ಳವುzಕ್ಕೆ ಸೀಮಿತವಾಗಿದ್ದು ವಿದ್ಯಾರ್ಥಿಯು ಹೊಂದಿರಬಹುದಾದ ನೋಡಿ ಅರಿತ ಅಥವಾ ಆಯಾಮ ಪರಿಣಿತಿಗೆ ಪ್ರೋತ್ಸಾಹ ನೀಡುವುದಿಲ್ಲ.  ಕಲಿಕೆಯ ಆಧಾರವಾಗಿ ಕಲೆಯನ್ನು ತೆಗೆದುಕೊಂಡಾಗ ತರಗತಿಯಲ್ಲಿನ ಏಕತಾನತೆಯನ್ನು ತೊಡೆದುಹಾಕಿ ಮಾಡಿ ಕಲಿಯುವ ಮತ್ತು ನೋಡಿ ಕಲಿಯುವ ವಿದ್ಯಾರ್ಥಿಗಳನ್ನು ಒಳಗೊಳ್ಳುವ ವಿಧಾನದಿಂದ ಮಾಂತ್ರಿಕ ಅಚ್ಚರಿಗಳನ್ನು ಉಂಟುಮಾಡುತ್ತದೆ.
ಕಲೆಯು ಹೆಚ್ಚು ಸಂವಹನ ಮಾರ್ಗಗಳನ್ನು ತೆರೆಯುವುದರಿಂದ ವಿಭಿನ್ನ ವಿದ್ಯಾರ್ಥಿಗಳ ವರ್ಗದ ಸಮಸ್ಯೆಯನ್ನು ಪರಿಹರಿಸುತ್ತದೆ. ಮುದ್ರಿತ ಪಠ್ಯಕ್ಕೆ ಒಲವಿರದ ಮತ್ತು ಅನುಕ್ರಮ ಸ್ಮರಣೆಯಲ್ಲಿ ಚುರುಕಾಗಿರದ ವಿದ್ಯಾರ್ಥಿಗಳು ವಿನ್ಯಾಸಗೊಂಡಿರದ ಅಭಿವ್ಯಕ್ತತೆಗೆ ಅವಕಾಶವನ್ನು ನೀಡುವ ಮಾಧ್ಯಮದತ್ತ ಹೆಚ್ಚು ಒಲವನ್ನು ತೋರುತ್ತಾರೆ.  ಕಲೆಯಲ್ಲಿ ನಿಗದಿಪಡಿಸಿದ ವ್ಯಾಖ್ಯಾನಗಳು ಅಷ್ಟಿಲ್ಲವಾದ್ದರಿಂದ ಮತ್ತು ಮರದ ಒಳಗಿನ ಬೇರುಗಳು ಹಾಗೂ ಮರದ ಮೇಲಿನಿಂದ ತೂಗಾಡುವ ಬಿಳಿಲುಗಳನ್ನು ಹೊಂದಿರವ ಎರಡೂ ರೀತಿಯ ಮರಗಳನ್ನು ಸಮಾನವಾಗಿ ಮೆಚ್ಚುತ್ತವೆ.  ಕಾಲ ಕಳೆದಂತೆ ಶಾಲಾ ವ್ಯವಸ್ಥೆಯು ಶಿಕ್ಷಣದಲ್ಲಿ ಕಲೆಯ ಎಷ್ಟೊಂದು ಶಕ್ತಿಪೂರ್ಣ ಮತ್ತು ಎಂತಹ ಉತ್ತಮ ಕೊಡುಗೆಯನ್ನು ನೀಡುತ್ತದೆ ಎಂಬುದನ್ನು ಗ್ರಹಿಸಬೇಕು.
ಇಪ್ಪತ್ತನೇ ಶತಮಾನದ ದಾರ್ಶನಿಕರಾದ ರಬೀಂದ್ರನಾಥ ಟಾಗೋರರು ಮತ್ತು ಶ್ರೀ ಅರಬಿಂದೋರವರು ಕಲೆಗೆ ಆದ್ಯತೆಯನ್ನು ನೀಡಿ ಅದನ್ನು ಆಧಾರವಾಗಿಸಿಕೊಳ್ಳುವ ಸಮಗ್ರ ಶಿಕ್ಷಣವಿಧಾನವನ್ನು ಪ್ರತಿಪಾದಿಸಿದ್ದಾರೆ.  ಸಾಂಸ್ಕೃತಿಕ ತಳಹದಿಯ ತರಗತಿ ತಂತ್ರಗಳ ಮೂಲಕ ಭಾವನೆಗಳು ಮತ್ತು ಆಧ್ಯಾತ್ಮಿಕತೆಯನ್ನು ಪೋಷಿಸುವ ಶಿಕ್ಷಣದಲ್ಲಿನ ಸಂವೇದನಾಶೀಲತೆಯನ್ನು ಅವರು ಒತ್ತಿ ಹೇಳಿದ್ದಾರೆ. ಕಲೆ ಎಂದರೆ ವಿಭಿನ್ನ ಸಂಸ್ಕೃತಿಗಳ, ಭಾಷೆಯ, ಭೌಗೋಳಿಕ ಪರಿಸರದಲ್ಲಿನ, ಶಿಕ್ಷಣದಲ್ಲಿ ವಿಭಿನ್ನ ಹಿನ್ನಲೆಯನ್ನು ಮತ್ತು ಸಾಮರ್ಥ್ಯಗಳ ಶ್ರೇಣಿಯನ್ನು ಹೊಂದಿರುವ ಅನೇಕ ಜನರು ಮಾತನಾಡುವ ಭಾಷೆಯಾಗಿದೆ. ಸಂಗೀತ ಮತ್ತು ಚಲನೆಯು ಜೀವನದ ಗತಿಗೆ ಆಧಾರವಾಗಿರುವುದರಿಂದಲೇ ರಚ್ಚೆಹಿಡಿದ ಒಂದು ಹಸುಗೂಸು ಸಹ ಪುನರಾವರ್ತಿತ ಶಬ್ದದ ಲಯದಿಂದ ತಾತ್ಕಾಲಿಕ ಸಮಾಧಾನವನ್ನು ಹೊಂದುವುದನ್ನು ಕಾಣಬಹುದಾಗಿದೆ.  ಅಂಗವೈಕಲ್ಯವನ್ನು ಹೊಂದಿರುವ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕಲೆಯು ಹೆಚ್ಚಿನ ಕೊಡುಗೆಯನ್ನು ನೀಡಿರುವುದು ಅನೇಕ ಅಧ್ಯಯನಗಳಲ್ಲಿ ಕಂಡುಬರುತ್ತದೆ.   ವಿಭಿನ್ನ ನೈಪುಣ್ಯತೆಯ ವರ್ಗಗಳನ್ನು ಹೊಂದಿರುವ ಸಮುದಾಯಗಳಲ್ಲಿ ಕಲೆಯು ಬೆಸುಗೆಯಾಗಿರುವುದನ್ನು ಇಲ್ಲಿ ಗಮನಿಸುವುದು ಅಷ್ಟೇ ಮುಖ್ಯ.
ಪಾಶ್ಚಾತ್ಯ ಶೈಕ್ಷಣಿಕ ಪ್ರಪಂಚದಲ್ಲಿ ಸಮಗ್ರ ಶಿಕ್ಷಣವು ಹೋವರ್ಡ್ ಗಾರ್ಡನರ್‌ರವರ ಬಹುವಿಧ ಬುದ್ಧಿವಂತಿಕೆಯ ಸಿದ್ಧಾಂತವನ್ನೇ ಹೇಳುತ್ತಿದ್ದು ನಮ್ಮ ಶಾಲಾ ವ್ಯವಸ್ಥೆಯು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಆದರೆ ಮೂಲಭೂತವಾಗಿ ಭಾಷೆ ಮತ್ತು ತಾರ್ಕಿಕ-ಗಣಿತ ಈ ಎರಡು ರೀತಿಯ ಬುದ್ಧಿವಂತಿಕೆಯನ್ನು ಬೋಧಿಸುತ್ತದೆ, ಪರೀಕ್ಷಿಸುತ್ತದ್ಷೆ, ಮನದಟ್ಟು ಮಾಡಿಸುತ್ತದೆ ಮತ್ತು ಅದಕ್ಕೆ ಪ್ರಾಶಸ್ತ್ಯ ನೀಡುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಇವುಗಳನ್ನು ಯಾವುದೇ ಪ್ರಾಥಮಿಕ ಕೌಶಲ್ಯಗಳ ಮೂಲಾಧಾರ ಎಂದು ಸದಾ ಪರಿಗಣಿಸಲಾಗುತ್ತದೆ.  ಹೀಗಿದ್ದರೂ, ಇನ್ನೂ ಐದು ರೀತಿಯ ಬುದ್ಧಿವಂತಿಕೆಯು ಇದರಷ್ಟೇ ಪ್ರಮುಖವಾದವು ಎಂದು ಅವರು ಹೇಳುತ್ತಾರೆ.  ಅವುಗಳೆಂದರೆ ತಮ್ಮದೇ ಆದ ಸಾಂಕೇತಿಕ ವ್ಯವಸ್ಥೆಯೊಂದಿಗೆ ಬಹಳಷ್ಟು ಜನರು ಮಾತನಾಡುವ ಮತ್ತು ವೈಯಕ್ತಿಕ ವ್ಯತ್ಯಾಸಗಳ ವಿಶಾಲವ್ಯಾಪ್ತಿಯನ್ನು ತಲುಪುವಂತಹ ಭಾಷೆಗಳು ಎನ್ನಬಹುದು.  ಇದರಲ್ಲಿ ಚಾಕ್ಷುಷ/sಸ್ಥಾನಸಂಬಂಧಿ, ದೈಹಿಕ/ಕ್ರಿಯಾತ್ಮಕ, ಸಂಗೀತಾತ್ಮಕ, ವ್ಯಕ್ತಿಆಂತರ್ಗತ ಮತ್ತ ಅಂತರವ್ಯಕ್ತಿ ಬುದ್ಧಿವಂತಿಕೆಗಳು ಸೇರುತ್ತವೆ.  ಈ ಬುದ್ಧಿವಂತಿಕೆಗಳು ದೃಶ್ಯ ಕಲೆ, ಸಂಗೀತ, ನೃತ್ಯ ಮತ್ತು ನಾಟಕಗಳಿಗೆ ಆಧಾರವನ್ನು ಒದಗಿಸುತ್ತವೆ ಮತ್ತು ಈ ಕಲಾ ಪ್ರಕಾರದ ಮೂಲಕ ಬಹಳಷ್ಟು ವಿದ್ಯಾರ್ಥಿಗಳು ಮಾತುಕತೆ ಮತ್ತು ಸ್ವ-ಅಭಿವ್ಯಕ್ತಿಗೆ ಮಾಧ್ಯಮವನ್ನು ಕಂಡುಕೊಳ್ಳುವುದಲ್ಲದೇ, ಅರ್ಥವನ್ನು ರಚಿಸಿಕೊಳ್ಳುವ ಮತ್ತು ಸಾಧಾರಣವಾಗಿ ಎಲ್ಲಾ ವಿಷಯಗಳನ್ನು ಪರಿಣಾಮಕಾರಿಯಾಗಿ ಕಲಿಯುವ ಸಾಧನವನ್ನಾಗಿಯೂ ಬಳಸಿಕೊಳ್ಳುತ್ತಾರೆ.  ಕಲೆಯನ್ನು ಕೇವಲ ಒಂದು ಪ್ರತ್ಯೇಕ ವಿಷಯವನ್ನಾಗಿ ಬೋಧಿಸದೇ ಪಠ್ಯಕ್ರಮದ ಎಲ್ಲಾ ಮಟ್ಟಗಳಲ್ಲೂ ಸಂಯೋಜಿಸಿದಾಗ ಇದು ವಿಶೇಷವಾಗಿ ಸಾಧ್ಯವಾಗುತ್ತದೆ.
ಸಂಗೀತ, ಅಭಿನಯ, ವರ್ಣಚಿತ್ರ ರಚನೆ ಮತ್ತ ನಾಟಕವನ್ನು ಒಳಗೊಂಡಿರುವ ಕಲೆಯು ಬಹಳಷ್ಟು ವಿಷಯಗಳಿಗೆ ಜೀವಂತವಾಗಿಸುತ್ತವೆ ಮತ್ತು ಅಮೂರ್ತವಾದುವುಗಳನ್ನು ಅನುಭವಾತ್ಮಕ ವಾಸ್ತವಗಳನ್ನಾಗಿಸಲು ಅವಕಾಶವನ್ನು ನೀಡುತ್ತವೆ.
ಚಿತ್ರಕಲೆಯು ಮಕ್ಕಳು ಹೇಗೆ ಚಿಂತಿಸುತ್ತಿವೆ ಎಂಬುದಕ್ಕೆ ಪ್ರಮುಖವಾದ ಒಳನೋಟವನ್ನು ಒದಗಿಸುತ್ತದೆ.   ಮಕ್ಕಳ ಚಿತ್ರಕಲೆಯನ್ನು ಸಂಭಾಷಣೆಗೆ ಆಧಾರವನ್ನಾಗಿ ಬಳಸಿಕೊಳ್ಳುವುದು ಮುಖ್ಯ.  ರೇಖೆಗಳ ಸಂಗ್ರಹ ಎನ್ನುವಂತೆ ಮಕ್ಕಳು ವಕ್ರವಾದ, ನೇರವಾದ ಗೆರೆಗಳು ಅಥವಾ ಬಾಗಿ ಬಳುಕುವ ಗೆರೆಗಳನ್ನು ರಚಿಸಿದ್ದರೂ ಇವು ಮಕ್ಕಳ ಮನಸ್ಸಿನ ’ಕಣ್ಣಿ’ನಲ್ಲಿ ಒಂದಕ್ಕೊಂದು ಸಂಪರ್ಕವನ್ನು ಸೃಷ್ಟಿಸಿಕೊಂಡಿರುತ್ತವೆ.  ತರಗತಿಯಲ್ಲಿ ಕಲೆಯು ಮಗುವು ಪರಿಶೋಧಿಸಲು ಮತ್ತು ಅಭಿವ್ಯಕ್ತಗೊಳಿಸಲು ಅವಕಾಶವನ್ನು ನೀಡುತ್ತದೆ.  ನಿಖರವಾಗಿ ಪ್ರತಿಬಿಂಬಿಸುವ ಕೌಶಲ್ಯವು ಕ್ರಮೇಣ ಬರುತ್ತದೆ, ಪುಟಾಣಿ ಮಕ್ಕಳ ತರಗತಿಗಳು ಮಕ್ಕಳು ಪರಿಣಿತಿ ಪಡೆಯುವುದರ  ಮೇಲೆ ಗಮನ ಹರಿಸದೆ ಅವರಿಗೆ ಅನುಭವವನ್ನು ಒದಗಿಸಲು ಅವಕಾಶ ನೀಡುವುದು ಅವಶ್ಯ.
ಪುಟ್ಟ ಮಕ್ಕಳ ಶಿಕ್ಷಣ ಕಾರ್ಯಕ್ರಮಗಳಲ್ಲಿ ಕಲೆಯು ಒಂದು ಅನುಭವವಾಗುವುದಕ್ಕೆ ಮೂರು ವಿಧಾನಗಳಿವೆ.  ಒಂದು ಈಗಾಗಲೇ ಹೇಳಿರುವಂತೆ ವಾರ್ಷಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನಕಲೆಗಳು.  ಇನ್ನೊಂದು ಪ್ರತಿ ನಿತ್ಯ ತರಗತಿಯಲ್ಲಿನ ಒಡನಾಟದಲ್ಲಿ ಕಲೆಯನ್ನು ಬಳಸಿಕೊಳ್ಳುವುದು. ವಿಶೇಷವಾಗಿ ವಾರ್ಷಿಕ ಕಾರ್ಯಕ್ರಮಗಳ ಆಚರಣೆಯನ್ನು ಏರ್ಪಡಿಸುವ ಪ್ರಗತಿಪರ ವ್ಯವಸ್ಥೆಗಳು ಬಹಳಷ್ಟು ಶಿಕ್ಷಕರಿಗೆ ತಿಳಿದಿದೆ ಹಾಗೆಯೇ ಕಲೆಯನ್ನು ದಿನ ನಿತ್ಯದ ಕೆಲಸದಲ್ಲಿ ಬಳಸಿಕೊಳ್ಳುವುದು ತಿಳಿದಿದೆ. ಆದರೆ ಅರಿಯ ಬೇಕಾದ ಮೂರನೇ ವಿಚಾರವೆಂದರೆ ಒಬ್ಬ ಕಲಾವಿದನೊಂದಿಗೆ ಮಕ್ಕಳು ದಿನವನ್ನು ಕಳೆಯುವ ಅಕಾಶ ಕಲ್ಪಿಸುವುದು 
ಪ್ರತಿ ನಿತ್ಯದ ಲಯದಲ್ಲಿ ಕಲೆ: ವಿನೋದಭರಿತ ಒಡನಾಟಗಳು
ಇತ್ತೀಚಿನ ವರ್ಷಗಳಲ್ಲಿ, ’ಮಗು ಕೇಂದ್ರಿತ ಕಲಿಕೆ’ ಕುರಿತು ವಾದಿಸುವವರು ಮಕ್ಕಳ ಕಲಿಕೆಯ ಶೈಲಿಯಲ್ಲಿ ಬಹುವಿಧಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.  ಮಕ್ಕಳ ಸಾಮಾಜಿಕ, ವಿಷಯ ಗ್ರಹಣೆ ಮತ್ತು ಭಾವನಾತ್ಮಕ ಸಾಮರ್ಥ್ಯಗಳು ಮತ್ತು ವಿಭಿನ್ನ ಭಾಷೆಗಳ ಭಿನ್ನತೆಯ ಬಗ್ಗೆ ಅರಿವು ಬೆಳೆಯುತ್ತಿದೆ.  ಪುಟ್ಟ ಮಕ್ಕಳ ಶಿಕ್ಷಕರಾಗಿ ತರಗತಿಯಲ್ಲಿನ ವೈವಿಧ್ಯ ಮತ್ತು ಔಪಚಾರಿಕ ಕಲಿಕಾ ವಾತಾವರಣದಲ್ಲಿ ಮಕ್ಕಳು ತಮ್ಮ ವೈಯಕ್ತಿಕ ಅವಕಾಶಗಳನ್ನು ಕಂಡುಕೊಳ್ಳುವ ವಿಧಾನಗಳ ಬಗ್ಗೆ ಅರಿತುಕೊಳ್ಳಲು ನಮಗೆ ಚುರುಕಾದ ಮಿದುಳು ಇರಬೇಕಾಗುತ್ತದೆ. ಗೊಂಬೆಗಳನ್ನು ಇಟ್ಟಿರುವ ಒಂದು ಸರಳವಾದ ಜಾಗವು ಅನಿಸಿಕೆಗಳು ಮತ್ತು ಗ್ರಹಿಕೆಗಳನ್ನು ತಿಳಿಸುವ ಪಾತ್ರಾಭಿನಯಕ್ಕೆ, ಸಂಭಾಷಣೆಗೆ ವಿಶಾಲವಾದ ಅವಕಾಶವನ್ನು ಒದಗಿಸುತ್ತದೆ.  ಪ್ರಕೃತಿ ವಿಹಾರದ ನಡಿಗೆ ಸಮಯದಲ್ಲಿ ಸಂಗ್ರಹಿಸಲಾದ ಎಲೆಗಳೊಂದಿಗೆ ತರಕಾರಿ ಜೋಡಣೆ ಮತ್ತು ಚಿತ್ರಕಲೆಯು ವಿನೋದವನ್ನು ಒದಗಿಸುವುದಲ್ಲದೇ ನಿಸರ್ಗ, ತರಗತಿ ಮತ್ತು ಕಲಿಕೆಯ ನಡುವೆ ಸಂಪರ್ಕವನ್ನು ಪ್ರಚೋದಿಸುತ್ತದೆ.  ಸಂಗೀತ, ಕಥೆಹೇಳುವುದು, ಗೊಂಬೆಯಾಟದ ವೀಕ್ಷಣೆ ಮತ್ತು ಚಲನೆಗೆ ಬಹುವಿಧ ಕೌಶಲ್ಯಗಳನ್ನು ಒಳಗೊಂಡಿದೆ ಮತ್ತು ಬಹು ಆಯಾಮದ ಕಲಿಕೆಯನ್ನು ಒದಗಿಸುತ್ತದೆ.  ಸೃಜನಶೀಲತೆಯು ಪುಟಾಣಿ ಮಕ್ಕಳ ಪಠ್ಯಕ್ರಮದ ಒಂದು ಭಾಗವಾದ ಚಟುವಟಿಕೆಗಳಲ್ಲಿದೆ ಹಾಗೂ ಅಭಿವ್ಯಕ್ತತೆಗೆ ಅವಕಾಶವನ್ನು ನೀಡುವ ಮಕ್ಕಳ ತೊಡಗಿಸಿಕೊಳ್ಳುವಿಕೆಯನ್ನು ಪೋಷಿಸಲು ಇದು ಒಂದು ವಿನೋದ ಭರಿತ ವಿಧಾನವಾಗಿದೆ.
ವಾರ್ಷಿಕ ಸಮಾರಂಭದ ಕಾರ್ಯಕ್ರಮಗಳಾಗಿ ಕಲೆ: ಸಂಪರ್ಕವನ್ನು ಸೃಷ್ಟಿಸುವುದು
ಒಂದು ಸರಣಿ ಕಾರ್ಯಕ್ರಮದ ತರಾತುರಿಯನ್ನು ವಾರ್ಷಿಕ ಕಾರ್ಯಕ್ರಮಗಳ ಪಟ್ಟಿಯಲ್ಲಿ ಸೃಷ್ಟಿಸುವುದರಿಂದ ಇವು ಬಹಳಷ್ಟು ಸಮಯ ವಾರ್ಷಿಕ ಕಾರ್ಯಕ್ರಮಗಳನ್ನು ಹಾಳುಗೆಡವುತ್ತವೆ.  ಹೀಗಿದ್ದರೂ, ನಾವು ಪ್ರತಿಯೊಬ್ಬರೂ ವಿಭಿನ್ನ ಸ್ಮರಣೆಯೊಂದಿಗೆ ಶಾಲಾ ವಾರ್ಷಿಕ ಆಚರಣೆಯ ಸವಿ ನೆನಪನ್ನು ಸ್ಮರಿಸುತ್ತೇವೆ.  ಶಾಲೆಯ ನಿಶ್ಶಬ್ದ, ಶಿಸ್ತಿನ ವಾತಾವರಣವು ಬದಲಾಗಿ ಚಿತ್ರಕಲೆ, ಕಸೂತಿ ಕೆಲಸ ಅಥವಾ ನೃತ್ಯ ಮತ್ತು ಸಂಗೀತವನ್ನು ಅಭ್ಯಸಿಸುತ್ತಿರುವ ಚಟುವಟಿಕೆ ತುಂಬಿದ ಸ್ಥಳಗಳಾಗಿ ಬಿಡುತ್ತವೆ.  ಶಾಲಾ ಪ್ರಾಂಗಣದಲ್ಲಿ ಮಕ್ಕಳ ಕಲೆಯ ಕಾರ್ಯಗಳನ್ನು ಪ್ರದರ್ಶಿಸಲಾಗಿರುತ್ತದೆ; ವಾರ್ಷಿಕ ಕಾರ್ಯಕ್ರಮಗಳು ವಿವಿಧ ಪ್ರದರ್ಶನಗಳನ್ನು ಪ್ರಮುಖವಾಗಿ ಹೊಂದಿರುತ್ತವೆ. ವಿಶೇಷವಾಗಿ ಈ ಪ್ರದರ್ಶನಗಳು ಕಲಿಕೆಯಲ್ಲಿ ಹುದುಗಿರುವ ಕಲೆಯೊಂದಿಗೆ ಸಂಪರ್ಕವನ್ನು ಹೊಂದಿರುತ್ತದೆ.
ಪೌರಾಣಿಕ ಪಾತ್ರಗಳಾಗಿ ವೇಷ ಭೂಷಣ ಧರಿಸಿದ ಮಕ್ಕಳ ಪಾತ್ರಗಳು ಸಾಂಸ್ಕೃತಿಕ ಸಂಕೇತಗಳನ್ನು ಅರ್ಥೈಸಿಕೊಳ್ಳುವಂತೆ ಮಾಡುತ್ತವೆ, ನಾಗ ಬುಡಕಟ್ಡು ಜನಾಂಗದ ವೇಷದಲ್ಲಿ ಅಥವಾ ಸಂತಾಲೀ ಸೀರೆಯಲ್ಲಿ ಹೀಗೆ ಅಲಂಕರಿಸಿಕೊಳ್ಳುವುದು ಅವರಿಗೆ ಒಂದು ಅವಿಸ್ಮರಣೀಯ ಅನುಭವವನ್ನು ನೀಡುತ್ತದೆ. ವಿವಿಧ ರಾಜ್ಯಗಳಲ್ಲಿನ ಚಿರಪರಿಚಿತವಲ್ಲದ ಉಡುಗೆಗಳಲ್ಲಿ ಅಲಂಕರಿಸಿಕೊಳ್ಳುವುದು ಕ್ಷಣಿಕವಾಗಿ ಮಕ್ಕಳನ್ನು ತಮ್ಮ ಭೌಗೋಳಿಕ ಮಿತಿಯ ಹೊರಗಿನ ವಿಶ್ವದಲ್ಲಿ ನಿಲ್ಲಿಸುತ್ತದೆ.  ಉಡುಗೆ-ತೊಡುಗೆಗಳ ಮೂಲಕ ಮಕ್ಕಳ ಕಲ್ಪನೆಯಲ್ಲಿ ಜನರ ಜೀವನದಲ್ಲಿನ ವೈವಿಧ್ಯತೆಯ ಬಗ್ಗೆ ಚಿಂತಿಸುವಂತೆ ಮಾಡುತ್ತದೆ.  ಮಕ್ಕಳು ವಿಭಿನ್ನವಾಗಿ ಅಲಂಕರಿಸಿಕೊಂಡಾಗ ಅಥವಾ ಯಾವುದೇ ರೀತಿಯ ನೃತ್ಯದಲ್ಲಿ ಭಾಗವಹಿಸಿದಾಗ ಅವರು ಅವರಂತಲ್ಲದೇ ಆ ಪಾತ್ರವಾಗಿಯೇ ಅಭಿನಯಿಸುತ್ತಾರೆ.  ಕಲೆಯು ಒಂದು ಪ್ರದರ್ಶನವಾಗಿ ಬಹು ವಿಧದ ಸಾಮಾಜಿಕ-ಸಾಂಸ್ಕೃತಿಕತೆಯೊಂದಿಗೆ ಸಂಪರ್ಕವನ್ನು ಹೊಂದುವ ಸಾಮರ್ಥ್ಯವನ್ನು ಬೆಳಸುತ್ತದೆ.  ನವ್ಯತೆಯನ್ನು ಅನುಭವಿಸಲು ಮತ್ತು ಹೊಸ ದೃಷ್ಟಿಕೋನದ ಸಾಧ್ಯತೆಗಳೊಂದಿಗೆ ಸಂಬಂಧವನ್ನು ಬೆಳಸಿಕೊಳ್ಳಲು ಮಕ್ಕಳು ಸಮರ್ಥರಾಗುತ್ತಾರೆ.
ಸಂಗೀತ ಮತ್ತು ಸಾಹಿತ್ಯಗಳು ಭಾಷೆಗಳ ಸ್ವರದ ಏರಿಳಿತ ಮತ್ತು ಶಬ್ಧಗಳನ್ನು ಅನಾವರಣಗೊಳಿಸುತ್ತದೆ.  ಚಲನೆಯ ಮೂಲಕ ಅಥವಾ ಚಿತ್ರಕಲೆಯ ರಚನೆಯ ಮೂಲಕ ಕಲಾಪ್ರಕಾರಗಳ ಅನುಭವವನ್ನು ಪಡೆಯುವುದು ವಿವಿಧ ಸಾಮಾಜಿಕ, ಭೌಗೋಳಿಕ ಪರಿಸರದಲ್ಲಿ ಬಣ್ಣ ಅಥವಾ ವರ್ಣಗಳಿಗಿರುವ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳುವಂತೆ ಮಾಡುವುದಲ್ಲದೇ ಅದಕ್ಕೆ ಸಂಬಂಧಿಸಿದ ಕಥೆಗಳು, ಉಡುಗೆಗಳು ಮತ್ತು ಆಚರಣೆಗಳನ್ನು ತಿಳಿಯಲು ಕುತೂಹಲವನ್ನು ಹುಟ್ಟುಹಾಕುತ್ತವೆ.
ಪರಿಣಿತರ ಮೂಲಕ ಕಲೆ
ಮಕ್ಕಳಿಗೆ ಶಾಲಾ ಜೀವನದಲ್ಲಿ ಕಲೆಗೆ ಅನೇಕ ಅವಕಾಶಗಳನ್ನು ಒದಗಿಸಲು ಕೆಲವು ಶಾಲೆಗಳು ಬೇರೆಯ ವಿಧಾನಗಳನ್ನು ಅನುಸರಿಸುತ್ತವೆ.  ವೃತ್ತಿಪರ ಕಲಾಪರಿಣಿತರೊಂದಿಗೆ ಶಿಬಿರಗಳನ್ನು ಏರ್ಪಡಿಸುವ ಪ್ರಯತ್ನಗಳು, ಪ್ರಸಿದ್ಧ ಕಲಾವಿದರೊಂದಿಗೆ ಕಾರ್ಯ ನಿರ್ವಹಿಸುವುದು ಹೀಗೆ ಅನುಭವಗಳನ್ನು ಮೀರಿ ಆಕರ್ಷಣೆಯನ್ನು ಎದುರಿಸುವಾಗ ಅವರು ಪರಿಣಿತಿಯ ಬಗ್ಗೆ ಮತ್ತು ಕೌಶಲ್ಯಗಳ ಬಗ್ಗೆ ಅಚ್ಚರಿಯನ್ನು ಹೊರ ಹಾಕುವಂತೆ ಮಾಡುತ್ತದೆ.  ಮಕ್ಕಳ ಸಂತೋಷಕ್ಕಾಗಿ ಕೆಲವು ಶಾಲೆಗಳು ಇಂತಹ ಪ್ರಯತ್ನಗಳನ್ನು ಮಾಡುವ ಕ್ರಮಗಳನ್ನು ಹೊಂದಿವೆ.  ಸ್ಪಕ್ ಮ್ಯಾಕೆ ಈ ನಿಟ್ಟಿನಲ್ಲಿ ಇಡುವ ಒಂದು ಹೆಜ್ಜೆಯಾಗಿದೆ.  ಕಲಾ ಚಟ್ಟುವಟಿಕೆಗಳನ್ನು ಕೇಂದ್ರ ಭಾಗಕ್ಕೆ ತರುವುದರಲ್ಲಿ ಅನೇಕ ಸಂಪತ್ತನ್ನು ಹೊಂದಿದೆ.  ಅವುಗಳೆಂದರೆ
ಸ್ಪೂರ್ತಿದಾಯಕತೆ
ಬಹುವಿಧ ಪ್ರತಿಭೆಗೆ ಮೌಲ್ಯವನ್ನು ಸೃಷ್ಟಿಸುವುದು
ವಿವಿಧ ವೃತ್ತಿಗಳೆಡೆಗೆ ಗೌರವವನ್ನು ಸೃಷ್ಟಿಸುವುದು. (ಸಂಗೀತ ಸಾಧನಗಳನ್ನು ನುಡಿಸುವವರು, ಕುಂಬಾರರು, ಗಣಿತಜ್ಞರು ಹೀಗೆ ಪ್ರತಿಯೊಬ್ಬರೂ ಒಂದೇ ವೇದಿಕೆಯನ್ನು ಹಂಚಿಕೊಳ್ಳುವರು)
ಪರಿಪೂರ್ಣತೆಗೆ ಅಭ್ಯಾಸದ ಪಾತ್ರವನ್ನು ಅರ್ಥಮಾಡಿಕೊಳ್ಳುವುದು.
ವಿಭಿನ್ನ ಪ್ರತಿಭೆಯನ್ನು ಹೊಂದಿರುವ ಮಕ್ಕಳಿಗೆ ಸಂವಹಿಸಲು ಮತ್ತು ಅಭಿವ್ಯಕ್ತಿಸಲು ಅವಕಾಶವನ್ನು ತೆರೆಯುವುದು.
ತಮ್ಮ ಅನುಭವವಾಗಿ ಕಲೆ ಪುಸ್ತಕದಲ್ಲಿ ಜಾನ್ ಡ್ಯೂಯಿಯವರ‍್ಲು ಒಂದು ಸಾಂಪ್ರದಾಯಿಕ ಮತ್ತು ವಾಡಿಕೆಯ ಅರಿವಿನ ಪದರವನ್ನು ಛೇದಿಸಿ ಹೊರಹೊಮ್ಮುವ ಅನನ್ಯ ಸಾಮರ್ಥ್ಯ ಕಲೆಗೆ ಇದೆ ಎಂದು ಬರೆದಿದ್ದಾರೆ.   ಕಲೆಗಾರ ಸರ್ವದಾ ಹೊಸತನದ ನೈಜ ಪ್ರತಿಪಾದಕನಾಗಿದ್ದಾನೆ. ಇಲ್ಲಿ ಹೊರಗೆ ನಡೆದ ಘಟನೆಗಳಷ್ಟೇ ಹೊಸತಲ್ಲ  ಅದು ಪ್ರಚೋದಿಸುವ ಭಾವನೆಗಳು,ದೃಷ್ಟಿಕೋನಗಳು ಮನಗಾಣ್ಕೆ ಮುಖ್ಯವಾಗುತ್ತದೆ. ಎಂದು ಅವರು ಭಾವಿಸುತ್ತಾರೆ.  ನಾವೇ ಕಲೆಯನ್ನು ಸೃಷ್ಟಿಸಲು ಮತ್ತು ಅದಕ್ಕೆ ಪ್ರತಿಸ್ಪಂದಿಸಲು ಪ್ರಾರಂಭಿಸಿದಾಗ, ಭಾವನೆ, ದೃಷ್ಟಿಕೋನ ಮತ್ತು ಮನಗಾಣ್ಕೆಯನ್ನು ಪ್ರಚೋದಿಸುತ್ತೇವೆ. ನಾವು ವಿಶ್ವದ ಮೇಲ್ಮೈ ವಾಸ್ತವಿಕತೆಯ ತಳದಲ್ಲಿರುವ  ಸತ್ಯವನ್ನು ನೋಡುತ್ತೇವೆ.  ನಾವು ನಮ್ಮ ಕಲ್ಪನೆಯನ್ನು ಹೊರಹಾಕುತ್ತೇವೆ.
ಕಲೆಗಳು ಏಕೆ ಮಹತ್ವದ್ದಾಗಿವೆ?
೧. ಇವು, ವರ್ಣೀಯ, sssಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಡೆ-ತಡೆಗಳನ್ನು ತುಂಡರಿಸಿ ಎಲ್ಲಾ ಜನರೂ ಮಾತನಾಡುವ ಭಾಷೆಯಾಗಿದೆ ಮತ್ತು ಸಾಂಸ್ಕೃತಿಕ ಮೆಚ್ಚುಗೆಯನ್ನು ಹಾಗೂ ಅರಿವನ್ನು ಹೆಚ್ಚಿಸುವುದಾಗಿದೆ.
೨. ಅಕ್ಷರಗಳು ಮತ್ತು ಸಂಖ್ಯೆಗಳಂತೆಯೇ ಇವು ಪ್ರಮುಖವಾದ ಸಾಂಕೇತಿಕ ವ್ಯವಸ್ಥೆಗಳು.
೩. ಇವು ಮನಸ್ಸು, ದೇಹ ಮತ್ತು ಆತ್ಮವನ್ನು ಒಗ್ಗೂಡಿಸುತ್ತವೆ.
೪. ಸ್ವ-ಅಭಿವ್ಯಕ್ತಿಗೆ ಇವು ಅವಕಾಶವನ್ನು ಒದಗಿಸಿ, ಆಂತರಿಕ ವಿಶ್ವವನ್ನು ಗಟ್ಟಿಯಾದ ವಾಸ್ತವಿಕ  ಬಾಹ್ಯವಿಶ್ವಕ್ಕೆ ಹೊಂದಿಸುತ್ತವೆ
೫. ಇವು ಉಲ್ಲಾಸದಸ್ಥಿತಿಗೆ ಮತ್ತು ಅನುಭವದ ಉತ್ತುಂಗತೆಗೆ ಮಾರ್ಗವನ್ನು ನೀಡುತ್ತವೆ.
೬. ಉತ್ತೇಜನ, ನಿರ್ದೇಶನ, ಮೌಲ್ಯಾಂಕನ ಮತ್ತು ಆಳವಾದ ಅರ್ಥೈಕೆಯನ್ನು ಉಂಟುಮಾಡುವ ವಾಸ್ತವಿಕ ಅನ್ವಯಗಳ ನಡುವೆ ಪರಿಮಿತಿ ಇಲ್ಲದ ಸಂಪರ್ಕವನ್ನು ರಚಿಸುತ್ತವೆ.
೭. ಆರಂಭದಿಂದ ಅಂತ್ಯದವರೆಗೂ ಇವು ಪ್ರಕ್ರಿಯೆಯನ್ನು ಅನುಭವಿಸಲು ಇರುವ ಅವಕಾಶ ಒದಗಿಸುತ್ತವೆ.
೮. ಅವು ಸ್ವಾವಲಂಬನೆ ಮತ್ತು ಸಹಯೋಗ ಎರಡನ್ನೂ ಬೆಳಸುತ್ತವೆ.
೯. ಅವು ಕೂಡಲೇ ಹಿಮ್ಮಾಹಿತಿಯನ್ನು ಒದಗಿಸುತ್ತವೆ ಮತ್ತು ಪರ್ಯಾಲೋಚನೆಗೆ ಅವಕಾಶವನ್ನು ಒದಗಿಸುತ್ತವೆ.
೧೦. ವೈಯಕ್ತಿಕ ಸಾಮರ್ಥ್ಯಗಳನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವುದನ್ನು ಸಾಧ್ಯವಾಗಿಸುತ್ತದೆ ಮತ್ತು ಕೆಲವೊಮ್ಮೆ ಈ ಸಾಮರ್ಥ್ಯಗಳ ಮೂಲಕ ಕಷ್ಟಕರವಾದ ಅಮೂರ್ತತೆಯನ್ನು ಅರ್ಥಮಾಡಿಕೊಳ್ಳಲು ಸೇತುವೆಯಾಗುತ್ತದೆ.
೧೧. ಪ್ರಕ್ರಿಯೆ ಮತ್ತು ವಿಷಯ ಸಾಮಾಗ್ರಿ ಎರಡರ ಕಲಿಕೆಯನ್ನು ಜೋಡಿಸುತ್ತವೆ.
೧೨. ಇವು ಶೈಕ್ಷಣಿಕ ಸಾಧನೆಗಳನ್ನು ಸುಧಾರಿಸುತ್ತವೆ - ಪರೀಕ್ಷೆಯಲ್ಲಿ ತೆಗೆಯುವ ಅಂಕಗಳನ್ನು, ಧೋರಣೆಗಳನ್ನು, ಸಾಮಾಜಿಕ ಕೌಶಲ್ಯಗಳನ್ನು, ನಿರ್ಣಾಯಕ ಮತ್ತು ಸೃಜನಾತ್ಮಕ ಚಿಂತನೆಗಳನ್ನು ವೃದ್ಧಿಸುತ್ತವೆ.
೧೩. ವಿಮರ್ಶೆ, ನಿರ್ಮಾಣ, ಮೌಲ್ಯಮಾಪನ ಮತ್ತು ಸಮಸ್ಯಾ ಪರಿಹಾರದಂತಹ ಉನ್ನತ ಮಟ್ಟದ ಆಲೋಚನೆಗಳ ಕೌಶಲ್ಯಗಳನ್ನು ಅಭಿವೃದ್ಧಿಸುತ್ತವೆ ಮತ್ತು ಅಭ್ಯಸಿಸುವಂತೆ ಮಾಡುತ್ತವೆ.
೧೪. ಇವು ಯಾವುದೇ ಪರ್ಯಾಯ ಮೌಲ್ಯಮಾಪನದ ಪ್ರಮುಖವಾದ ಘಟಕವಾಗಿವೆ. 
೧೫. ಪ್ರತಿಯೊಬ್ಬ ವಿದ್ಯಾರ್ಥಿಯು ಕಲಿಯಲು ಇವು ಸಾಧನವನ್ನು ಒದಗಿಸುತ್ತವೆ.
ಮುಕ್ತಾಯ ಮತ್ತು ಸರಳ ತರಗತಿ ತಂತ್ರಗಳು:
ನಮ್ಮ ಶಾಲೆಗಳಲ್ಲಿ ಕಲೆಗೆ ಅತ್ಯಂತ ಕಡಿಮೆ ಅವಕಾಶವನ್ನು ನೀಡಿದ್ದೇವೆ.  ಹೀಗಿದ್ದರೂ, ವಿದ್ಯಾರ್ಥಿಗಳ ವೈವಿಧ್ಯತೆಯನ್ನು ಪರಿಗಣಿಸಿ ಮಾನವ ಅಭಿವೃದ್ಧಿಗಾಗಿ ಮತ್ತು ಸೃಜನಶೀಲತೆಗಾಗಿ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ವಿವಿಧ ಆಯ್ಕೆಗಳನ್ನು ಒದಗಿಸುವತ್ತ ಹೆಚ್ಚಿನ ಚಿಂತನೆಯನ್ನು ಮಾಡುವ ಕಡೆಗೆ ಇದೊಂದು  ಆಂದೋಲನ.
ಅಸಮರ್ಥತೆಯುಳ್ಳ ಮಕ್ಕಳಿಗೂ ಅಭಿವ್ಯಕ್ತಿ ಸ್ನೇಹಿ ಎಕತಾನತೆಯಿರದ ಕಲಾ ಪ್ರಕಾರಗಳಲ್ಲಿ ಸಾಕಷ್ಟು ಅವಕಾಶ ಮತ್ತು ಪರಿಸರ ದೊರಕುತ್ತದೆ.
ಆದ್ದರಿಂದ ಶಾಲೆಗಳು ಈ ವಿಷಯಗಳೆಡೆಗೆ ಗಮನ ಹರಿಸಬೇಕು:
ವಿವಿಧ ಪ್ರಕಾರಗಳನ್ಣೊಳಗೊಂಡಂತೆ ಹೆಚ್ಚು ಸಮಾವೇಶಿಯನ್ನಾಗಿಸುವುದು: ಒಂದೇ ರೀತಿಯ ಪ್ರತಿಸ್ಪಂದನೆಗಳ ಬದಲಿಗೆ ವೈವಿಧ್ಯಮಯವಾಗಿಸುವುದು
ವಿಭಿನ್ನ ಶಾಲಾ ವ್ಯವಸ್ಥೆಗಳ ಅತ್ಯುತ್ತಮ ಅಭ್ಯಾಸಗಳ ಶೋಧನೆ: ಈ ದಿನದ ಹಾಡು,
ಸ್ಥಳೀಯ ದಿನಗಳು: ಉಡುಗೆಗಳು, ಮುಖವಾಡಗಳು ಮತ್ತು ತಬಲಾ ವಾದಕಗಳ ವಸ್ತುಸಂಗ್ರಹಾಲಯದ ಬಳಕೆ
ಸ್ಥಳೀಯ ಕಲೆಗಳು ಮತ್ತು ಆಚರಣೆಗಳು: ವಿವಿಧ ಕಲಾವಿದರೊಂದಿಗೆ ಸಂಪರ್ಕ
ಮಕ್ಕಳಿಗೆ ಅಭಿಮುಖವಾದ  ಯೋಜನೆಗಳಿಗಾಗಿ ಕಲಾವಿದರೊಂದಿಗೆ ಸಂಪರ್ಕ ಹೊಂದಿರಿ 
ತರಗತಿಯಲ್ಲಿ ಲವಲವಿಕೆ ತುಂಬಲು ಕೆಲವು ಹೊಳಹುಗಳು
ಕಥೆಗಳನ್ನು ಓದುವುದು, ಒಟ್ಟಿಗೆ ನಗುವುದು, ಮಕ್ಕಳು ಪಾತ್ರಗಳಂತೆ ಅಭಿನಯಿಸಲು ಪ್ರೋತ್ಸಾಹಿಸುವುದು, ಧ್ವನಿಯ ಏರಿಳಿತವನ್ನು ಬಳಸುವುದು
ಕಲ್ಪನಾತ್ಮಕ ಆಟಗಳ ಸಮಯದಲ್ಲಿ  ಅಥವಾ ಗೊಂಬೆ ಇಡುವ ಸಮಯಗಳಲ್ಲಿ ಮನೆಯ ಚಹಾ ಸಮಾರಂಭಗಳಲ್ಲಿ ಸೇರುವುದು
ತಯಾರಿ ಕೋಣೆಯನ್ನು ಅಥವಾ ಮನೆಯ ಕೋಣೆಯನ್ನು ಮೂರು ಕರಡಿಗಳ ಕಥೆಯಲ್ಲಿನ ಪಾತ್ರಗಳಿಗೆ ಸ್ಥಳಗಳನ್ನು ವಿವಿಧ ಸಂಖ್ಯೆಯ ಮಕ್ಕಳ ಗುಂಪುಗಳನ್ನು ಒಟ್ಟುಗೂಡಿಸಿ ಮಾರ್ಪಡಿಸುವುದು. ಅದೇ ಸ್ಥಳವನ್ನು ಬಾಹ್ಯಾಕಾಶ ನೌಕೆಯನ್ನಾಗಿ ಅಥವಾ ವೈದ್ಯಕೀಯ ಚಿಕಿತ್ಸಾಲಯವನ್ನಾಗಿಸುವುದು.
ಮರದ ಚೌಕಗಳಿಂದ ಸೇತುವೆಗಳನ್ನು ಮತ್ತು ಗೋಪುರಗಳನ್ನು ಕಟ್ಟುವ ಆಟದಲ್ಲಿ ಮಕ್ಕಳೊಂದಿಗೆ ತೊಡಗಿಕೊಳ್ಳುವುದು.  ವಿವಿಧ ಭೂ ವಿನ್ಯಾಸಗಳನ್ನು ನಿರ್ಮಿಸಲು ಹಳೆಯ ರಟ್ಟಿನ ಪೆಟ್ಟಿಗಳು ಮತ್ತು ಎಲೆಗಳನ್ನು ಬಳಸುವುದು.
ಬೆರಳುಗಳನ್ನು ಬಳಸಿ ಆಟವಾಡುವುದನ್ನು ಮತ್ತು ಹಾಡುಗಳನ್ನು ಕಲಿಯಲು ಮಕ್ಕಳೊಂದಿಗೆ ಮಾತನಾಡಲು ಗೊಂಬೆಯಾಟದವರನ್ನು ಆಹ್ವಾನಿಸುವುದು.
ಹೊಸ ಉದ್ದೇಶಗಳು ಮತ್ತು ಕಾರ್ಯಗಳನ್ನು ಪ್ರೋತ್ಸಾಹಿಸಲು ತರಗತಿ ಪೀಠೋಪಕರಣಗಳ ಜೋಡಣೆಯನ್ನು ಬದಲಿಸುವುದು.
ಎಲ್ಲರೂ ಕೂಡಿ ಕಥೆಗಳನ್ನು ಕೇಳುವುದು ಮತ್ತು ಊಟ ಮಾಡುವುದಕ್ಕಾಗಿ ಮೇಜನ್ನು ಬಳಸುವ ಬದಲು ನೆಲದ ಮೇಲೆ ಕೂರುವುದು.
ಮಕ್ಕಳು ಕುಳಿತು ಓದುವುದಕ್ಕೆ ಮತ್ತು ಒಗಟುಗಳನ್ನು ಬಿಡಿಸುವುದನು ಅನುಕೂಲವಾಗುವ ಪ್ರತ್ಯೇಕ ಸ್ಥಳಗಳನ್ನು ನಿರ್ಮಿಸುವುದು.
ಪ್ರತಿ ನಿತ್ಯ ಬಳಸುವ ಸಾಮಾನ್ಯ ವಸ್ತುಗಳನ್ನು ಹೊಸ ಹೊಸ ರೀತಿಯಲ್ಲಿ ಬಳಸುವುದು.  ಉದಾಹರಣೆಗೆ, ರಬ್ಬರ್ ಚೆಂಡನ್ನು ಬಣ್ಣದಲ್ಲಿ ಅದ್ದಿ ಚಿತ್ರ ರಚಿಸುವುದು, ಪುಸ್ತಕವನ್ನು ಮಾತನಾಡುವ ಗೊಂಬೆಯನ್ನಾಗಿ ಬದಲಾಯಿಸುವುದು, ಅಥವಾ ಮೇಜನ್ನು ತಲೆಕೆಳಗಾಗಿಸಿ ದೋಣಿಯನ್ನಾಗಿಸುವುದು.
ಆಶಾರವರು ದೆಹಲಿಯಲ್ಲಿರುವ ಲೇಡಿ ಇರ್ವಿನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಇಲ್ಲಿ ಇವರು ಮಾನವ ಬೆಳವಣಿಗೆ ವಿಷಯವನ್ನು ಬೋಧಿಸುತ್ತಿದ್ದಾರೆ.  ಇವರ ಮೂಲ ಆಸಕ್ತಿಯು ಶಿಕ್ಷಣದಲ್ಲಿ ಕಲೆಯನ್ನು ಬಳಸಿಕೊಳ್ಳುವುದು.  ಶಿಕ್ಷಣದಲ್ಲಿ ನಾಟಕದ ಪ್ರಯೋಗ ವಿಷಯದಲ್ಲು ಇವರು ಕಾರ್ಯನಿರ್ವಹಿಸಿದ್ದಾರೆ.  ಬೋಧಿಸುವುದಲ್ಲದೇ, ಇವರು ನಾಟಕವನ್ನು ಬೋಧನೆಯ ಹಾಗೂ ಸ್ವ-ಪರ್ಯಾಲೋಚನೆಯ ಸಾಧನವನ್ನಾಗಿ ಬಳಸಲು ಶಿಕ್ಷಕರು ಮತ್ತು ಮಕ್ಕಳೊಂದಿಗೂ ಕಾರ್ಯ ನಡೆಸುತ್ತಿದ್ದಾರೆ.  ನೃತ್ಯದಲ್ಲಿನ ತರಬೇತಿ ಮತ್ತು ನಾಟಕದಲ್ಲಿ ಇವರಿಗಿರುವ ಆಸಕ್ತಿಯು ನವೀನ ತರಗತಿ ಬೋಧನಾ ತಂತ್ರಗಳನ್ನು ಸೂಚಿಸುತ್ತವೆ.  ಎಳೆಯ ಮಕ್ಕಳ ಶಿಕ್ಷಣದಕ್ಕೂ ಇವರು ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ.  ಎಳೆಯ ಮಕ್ಕಳ ಶಿಕ್ಷಣದ ಮಟ್ಟದಲ್ಲಿ ಪ್ರಾಥಮಿಕ ಮಟ್ಟದವರೆಗೂ ಇವರು ಶಿಕ್ಷಕರೊಂದಿಗೆ ನಿಕಟವಾಗಿ ಕಾರ್ಯವೆಸಗುತ್ತಿದ್ದಾರೆ.  


3.  ೧ ನೇ ತರಗತಿಗೆ ಮುಂಚೆ ಕಲಿಯುವುದಕ್ಕೆ ಮಕ್ಕಳನ್ನು ಸೂಕ್ತವಾಗಿ ಸಿದ್ಧ ಪಡಿಸುವುದು



ನಡೆಯುವುದಕ್ಕೇ ಬರದ ಮಗುವಿಗೆ ಓಡುವುದಕ್ಕೆ ಕಲಿಸಲು ಹೋಗಬಾರದು. ಮಕ್ಕಳು ಆಟಪಾಠಕ್ಕೆ ಸಿದ್ಧರಾಗುವಂತೆ ಮಾಡುವುದು ಎಂಬ ಪರಿಕಲ್ಪನೆಯ ಹಿಂದಿನ ಮೂಲಭೂತ ತತ್ವ ಇದೇ . ಇದು ತುಂಬಾ ನಮ್ಮ ತರಗತಿಯ  ಬೋಧನೆಗೂ ಚೆನ್ನಾಗಿ ಅನ್ವಯಿಸುತ್ತದೆ.
  • ಆರು ವರ್ಷಗಳ  ಒಂದು ಮಗುವಿಗೆ  ಅದರ ಕಣ್ಣು ಮತ್ತು ಕಿವಿ ಎರಡೂ ಪಾಠ ಕಲಿಯಲು ಸಿದ್ದವಾಗುವ ತನಕ "ಅ" ಮತ್ತು "ಆ" ಅಥವಾ "ತ" ಮತ್ತು "ಥ" ನಡುವೆ ಸುಲಭವಾಗಿ ವ್ಯತ್ಯಾಸ ಕಂಡುಕೊಳ್ಳಲಾರವು. ಸಾಮಾನ್ಯವಾಗಿ, ಅನೇಕ ಬಾರಿ   ನಾವು 2 ಅಥವಾ 3ನೇ ಅಥವಾ 4 ನೇ ತರಗತಿಯಲ್ಲಿ ಓದುತ್ತಿರುವ ನಮ್ಮ ಮಕ್ಕಳು ಕೇಳಿದ ವಿವಿಧ ಧ್ವನಿಗಳು ಮತ್ತು ಬರೆದ ವಿವಿಧ ಪದಗಳ ನಡುವೆ ಸಂಬಂಧ ಮತ್ತು ವ್ಯತ್ಯಾಸವನ್ನು ಸರಿಯಾಗಿ ಕಂಡುಕೊಳ್ಳದೇ ಪರದಾಡುತ್ತಿರುವುದನ್ನು ಕಂಡಿದ್ದೇವೆ. ಇದೇ ಮುಂದೆ ಓದುವುದನ್ನು ಮತ್ತು ಬರೆಯುವುದನ್ನು ಕಲಿಯಲು  ಒಂದು ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ.
  •  ನಾವು ಮಕ್ಕಳ ತರಗತಿ ಪಾಠಗಳನ್ನು  ಹಾಡುಗಳನ್ನು ಹಾಡಿ , ಪದ್ಯಗಳನ್ನು ಓದಿ ಮತ್ತು ಆಟಗಳನ್ನು ಆಡಿಸಿ ಪ್ರಾರಂಭಿಸುತ್ತೇವೆ. .ಮಕ್ಕಳು ವಾಡಿಕೆಯ ಶೈಕ್ಷಣಿಕ ಕಲಿಕೆಯ ದೊಡ್ಡ ಕೆಲಸವನ್ನು ಆರಂಭಿಸುವ ಮೊದಲು ಮಕ್ಕಳು ಆರಾಮದಾಯಕವಾಗಿ ಇರುವಂತೆ ಮಾಡಲು ಉಲ್ಲಾಸ ಲವಲವಿಕೆಯಿಂದ ಇರುವಂತೆ ಮಾಡಲು ಹೀಗೆ ಮಾಡುತ್ತೇವೆ. ಏಕೆಂದರೆ ಒಮ್ಮೆಲೆ  ಓದುವ ಮತ್ತು ಬರೆಯುವ ಪಾಠಗಳ ಕಲಿಕೆ ದೊಡ್ಡ ಜಿಗಿತವಾಗುತ್ತದೆ.  
  • ನಾವು ನಮ್ಮ ಮಕ್ಕಳಿಗೆ ವಿಷಯಗಳನ್ನು ಕಲಿಯುವುದು ಸುಲಭವಾಗುವಂತೆ ಹೇಗೆ ಮಾಡಬಹುದು? ನಾವು ಅವರು ತಮ್ಮ ತನು ಮನಗಳು  ಪಾಠಗಳನ್ನು ಕಲಿಯಲು ತಯಾರು ಮಾಡಿಕೊಳ್ಳುವುದಕ್ಕೆ ಮುಂಚೆ ಶಾಲೆಯಲ್ಲಿ ಮೊದಲ ಕೆಲವು ತಿಂಗಳುಗಳಲ್ಲಿ ಸಾಕಷ್ಟು ಖುಷಿ ಮತ್ತು ಅನಂದದಿಂದ ಇರುವಂತೆ ನೋಡಿಕೊಳ್ಳಬಹುದೇ? ನಾವು ಅದೇ ಆಟಗಳು, ಹಾಡುಗಳು, ನೃತ್ಯಗಳು, ಪದ್ಯಗಳು, ಕಥೆಗಳು  ಹೇಳಿಕೊಡುವುದನ್ನು ಮನಸ್ಸಿನಲ್ಲಿ ನಿರ್ದಿಷ್ಟ ಗುರಿಗಳನ್ನು ಇಟ್ಟುಕೊಂಡು ಮಾಡಿದರೆ, ಅದು ಬಹಳ ಸಹಾಯ ಮಾಡುತ್ತದೆ.
  •  ಮಕ್ಕಳನ್ನು ನೇರವಾಗಿ ಓದುವ ಮತ್ತು ಬರೆಯುವ ಕೆಲಸಕ್ಕೆ ತೊಡಗಿಸುವ ಮೊದಲು ನಮ್ಮ ಮಕ್ಕಳು ಬಣ್ಣಗಳು, ಆಕಾರಗಳು, ಚಿತ್ರಗಳು, ಆಂಗಿಕ ಅಭಿನಯಗಳು ಮತ್ತು ಶಬ್ದಗಳ ನಡುವಿನ ವ್ಯತ್ಯಾಸವನ್ನು ಕಾಣಬಲ್ಲರೇ  ಎಂದೇಕೆ ನೋಡಬಾರದು? ಈ ಓದುವ ಮತ್ತು ಬರೆಯುವ ಕೆಲಸಕ್ಕೆ ಇವೇ ಅಡಿಪಾಯವಾಗಿರುತ್ತವೆ. ಈ ಚಟುವಟಿಕೆಗಳು ನಮ್ಮ ಮಕ್ಕಳ ಕಣ್ಣು, ಕಿವಿ, ಸ್ಪರ್ಷ ಮಾತು ಮತ್ತು ದೇಹಗಳನ್ನು ಓದುವ ಮತ್ತು ಬರೆಯುವ ಕೆಲಸದ ದೊಡ್ಡ ಜಿಗಿತಕ್ಕೆ ಸಿದ್ಧಪಡಿಸಲು ಸಹಾಯ ಮಾಡುತ್ತವೆ.
  • ನಾವು ಈ ಗುರಿಗಳನ್ನು ಸಾಧಿಸಲು ತರಗತಿಯಲ್ಲಿ ಮಾಡಲು ವಿವಿಧ ಚಟುವಟಿಕೆಗಳನ್ನು ಯೋಚಿಸಬಹುದು - ನಾವು ಮಕ್ಕಳಿಗೆ ಅವರು ಓದಲು ಮತ್ತು ಬರೆಯಲು ಹೇಳಿಕೊಡುವ ಮುಂಚೆ  ಪ್ರತಿಯೊಂದು ಮಗುವೂ ಅದಕ್ಕೆ ಸಿದ್ಧವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.·      
 • ನಾವು ನಮ್ಮ ಮಕ್ಕಳಿಗೆ ತರಗತಿಯಲ್ಲಿ ಪಾಠಕಲಿಯಲು  ಅಗತ್ಯವಿರುವ  ಕೌಶಲ್ಯಗಳ ಪಟ್ಟಿಯನ್ನು ರಚಿಸಿದ್ದೇವೆ ಮತ್ತು ನಾವು ವಿನ್ಯಾಸಗೊಳಿಸುವ ಎಲ್ಲಾ ಚಟುವಟಿಕೆಗಳು ನಮ್ಮ ಮಕ್ಕಳು ಈ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಲು ಸಹಾಯ ಮಾಡಬೇಕು.. ಇದೇನು ಕಷ್ಟ ಅಲ್ಲ – ನಮ್ಮ ಬಹಳಷ್ಟು ಮಕ್ಕಳು ಈಗಾಗಲೇ ಈ ಕೌಶಲ್ಯಗಳನ್ನು ಹೊಂದಿವೆ. ನಾವು ಅವುಗಳನ್ನು ತಿಳಿದಿರಬೇಕು ಮತ್ತು ನಮ್ಮ ಎಲ್ಲಾ ಮಕ್ಕಳು ತಮ್ಮ  ಬಹುಮಟ್ಟಿನ ಸಾಮರ್ಥ್ಯಕ್ಕೆ ಅವನ್ನು ಉತ್ತಮ ವಾಗಿ ಬೆಳಸಿಕೊಳ್ಳಲು ಸಹಾಯ ಮಾಡಬೇಕು.
• ನಾವು ನಮ್ಮ ಮಕ್ಕಳಿಗೆ ಅವರು ನೋಡಿದ್ದು, ಕೇಳಿದ್ದು, ಮುಟ್ಟಿದ್ದು, ಅನುಭವಿಸಿದ್ದು, ವಾಸನೆ ಅಥವಾ ರುಚಿ ನೋಡಿದ ಎಲ್ಲಾದರ ಬಗ್ಗೆ ಅರಿತಿರುವಂತೆ ಮಾಡಬೇಕು. ಅವರು ಎಷ್ಟೇ ಸಣ್ಣದು ಆಗಿದ್ದಾಗ್ಯೂ ಮಾಡುವ ಪ್ರತಿ ಚಲನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರಬೇಕು. ತಮ್ಮ ಇಂದ್ರಿಯಗಳ ಮೂಲಕ ಗ್ರಹಿಸುವ ಪ್ರತಿ ಸಣ್ಣ ವಿಷಯ ಜೀವಂತವಾಗಬೇಕು ಮತ್ತು ಜಾಗೃತಿ ಮೂಡಿಸಬೇಕು ಎಂಬುದು,  ಪ್ರತಿ ಸಣ್ಣ ಧ್ವನಿ, ಪ್ರತಿ ಪುಟ್ಟ ಬಣ್ಣ ಪ್ರತಿಯೊಂದು ವಸ್ತು, ಅವರು ಸಂಪರ್ಕಕ್ಕೆ ಬರುವ ಪ್ರತಿ ವ್ಯಕ್ತಿ ಆ ಕಲಿಕೆಯ ಒಂದು ಮೂಲವಾಗಬೇಕು ಎಂಬುದು, ಇಲ್ಲಿನ ಗುರಿ ಆಗಿರಬೇಕು.
• ನಾವು ಸ್ವತಃ ತರಗತಿಯಿಂದಲೇ ಪ್ರಾರಂಭ ಮಾಡೋಣ ಸ್ಪಷ್ಟ ವಿಷಯದಿಂದಲೇ ಆರಂಭಮಾಡೋಣ? ನಿನ್ಮುಂದೆ ಕುಳಿತಿರುವ ವರು ಯಾರು - ಸೀಲಿಂಗ್ ನೋಡು – ಏನು ಕಾಣಿಸುತ್ತಿದೆ? ನೆಲದ ನೋಡು ಏನು ಕಾಣಿಸುತ್ತಿದೆ? ನಿನಗೆ ಪಕ್ಕದ ತರಗತಿಯಿಂದ ಶಬ್ದ ಕೇಳುತ್ತಿದೆಯೇ? ನಾನು ಏನು ಧರಿಸಿದ್ದೇನೆ?
• ಈಗ ನಾವು  ಇನ್ನೂ ನಿರ್ದಿಷ್ಟ ವಿಷಯಗಳಿಗೆ ಹೋಗೋಣ –ನಿಮ್ಮಲ್ಲಿ ಯಾರು ಎತ್ತರವಾಗಿದ್ದಾರೆ? ಯಾರು ಉದ್ದ ಕೂದಲು ಹೊಂದಿದ್ದಾರೆ? ಯಾರು ನೆಕ್ಲೆಸ್ ತೊಟ್ಟಿದ್ದಾರೆ? ಯಾರು ಕೂದಲಲ್ಲಿ ಹೂ ಮುಡಿದ್ದಿದ್ದಾರೆ? ಹೊರಗೆ ಒಂದು ಮರಇದೆಯೇ? ನೀವು ಹೆದ್ದಾರಿಯಲ್ಲಿ ಒಂದು ಲಾರಿ ಹಾರನ್ ಮಾಡುತ್ತಿರುವುದು ಕೇಳುತ್ತಿದೆಯೇ? ಒಂದು ಟ್ರಾಕ್ಟರ್  ಬರುತ್ತಿರುವುದು ಕೇಳುತ್ತಿದೆಯೇ? (ಸರ್ವ ಶಿಕ್ಷಣ ಅಭಿಯಾನ ಲೋಗೊ) ಹೊರಗೆ ಚಿತ್ರಿಸಿದ ಪೆನ್ಸಿಲ್ ಮೇಲೆ ಯಾರು ಕುಳಿತುಕೊಂಡಿದ್ದಾರೆ? ನನ್ನ ಸೀರೆಯ ಬಣ್ಣ ಏನು?
  •  ಈಗ ನಾವು ಹೆಚ್ಚಿನ ವಿವರ ಸೇರಿಸೋಣ - ಟ್ರಾಕ್ಟರ್  ತುಂಬಾ ದೂರ ಇದೆಯೇ? ಯಾವ ದಿಕ್ಕಿನಿಂದ ನಿಮಗೆ ಹಾರನ್ ಶಬ್ಧ ಕೇಳುತ್ತಿದೆ? ನಮ್ಮ ತರಗತಿಯ ಬಣ್ಣದ ಉದ್ದಕ್ಕೂ ಒಂದೇ ಬಣ್ಣವೇ ಅಥವಾ ಗೋಡೆಗೆ ಹಗುರವಾದ ಅಥವಾ ಗಾಢವಾದ ಸಣ್ಣ  ಸಣ್ಣ ತೇಪೆಗಳಿವೆಯೇ? ಹೊರಗೆ ಚಿತ್ರಿಸಿದ ಪೆನ್ಸಿಲ್ (ಸರ್ವ ಶಿಕ್ಷಣ ಅಭಿಯಾನ ಲೋಗೊ), ಮೇಲೆ ಕುಳಿತ ಹುಡುಗಿಯ ಕೂದಲು ಉದ್ದ ಇದೆಯೇ ಅಥವಾ ಗಿಡ್ಡ  ಇದೆಯೇ?  ಹುಡುಗನ ಮುಖದ ಮೇಲೆ ಏನು ಕಾಣುತ್ತಿದೆ? ನನ್ನ ಸೀರೆಯ ಬಣ್ನ ತಿಳಿ ಅಥವಾ ಗಾಢ ನೀಲಿ ಬಣ್ಣವೇ? ನಿಮ್ಮ ಸ್ಕರ್ಟ್ನ ನೀಲಿ ಬಣ್ಣವೇ? ನಿಮ್ಮ ಬಿಳಿ ಶರ್ಟ್ ಹಸುವಿನ ಹಾಲಿ ನಷ್ಟೇ ಬಿಳಿ ಇದೆಯೇ?
  • ನಾವು ಮಕ್ಕಳು ವಸ್ತುಗಳು ಮತ್ತು ಚಿತ್ರಗಳನ್ನು (ಅವರು ಪಟ್ಟಿ ಮಾಡಬಹುದು ,ಆಕಾರ, ಗಾತ್ರ ಅಥವಾ ರೂಪದಲ್ಲಿ ಹೋಲಿಕೆಗಳು ಮತ್ತು ವ್ಯತ್ಯಾಸಗಳನ್ನು ಚರ್ಚಿಸಬಹುದು) ಹೋಲಿಸುವ ಕೆಲಸ ಒಳಗೊಂಡ ಬಹಳಷ್ಟು ಅಭ್ಯಾಸ / ಆಟಗಳನ್ನು ಮಾಡಿಸುವುದು.  ಶ್ರವಣ ಮತ್ತು ದೃಷ್ಟಿ ವ್ಯಾಯಾಮದಲ್ಲಿ ಅತ್ಯಂತ ಮುಖ್ಯ
  •  ಒಂದೇ ರೀತಿಯ ಧ್ವನಿ ಪದಗಳಿರುವ ಹಾಡುಗಳು  ಅದರಲ್ಲಿರುವ ಪದಗಳ ಕಾರಣದಿಂದಾಗಿ ಮಕ್ಕಳು ನಂತರ ಕಠಿಣ ಪದಗಳನ್ನು ಉತ್ತಮವಾಗಿ ಉಚ್ಚರಿಸಲು ಸಹಾಯಮಾಡುತ್ತದೆ. - "ತ" ಅಕ್ಷರ ಪದೆ ಪದೆ ಬರುವ ಹೊಸಾ ಹಾಡನ್ನು ರಚಿಸಿರಿ. ನಾವು ಒಂದು ಅಸಂಬದ್ಧ ಪದಗಳ ಆಟ (ಅಚ್ಚಚ್ಚು ಬೆಲ್ಲದಚ್ಚು) ರಚಿಸಿರಿ -, ಸರಿಗಮ ಎಂಬ ಪದಗಳ ಹಾಡನ್ನು ರಚಿಸಲು ಮಕ್ಕಳಿಗೆ ಹೇಳಿ -. ನಮಗೆ ಶಿಕ್ಷಕರಾದ ನಾವು ಕಲ್ಪನೆಯನ್ನು ಭಾಷೆಯನ್ನು ಶಬ್ದಗಳ ಆಟ ಎಂದು ಅರ್ಥಮಾಡಿಕೊಳ್ಳಬೇಕು ನಾವು ಹೆಚ್ಚು ಶಬ್ದಗಳನ್ನು ಬಳಸಿದರೆ, ನಂತರ ಅವುಗಳನ್ನು ನಾವು ಉತ್ತಮವಾಗಿ  ಬಳಸಬಹುದು.
• ಮೇಲೆ  ಹೇಳಿದ್ದು ಕೇವಲ ಉದಾಹರಣೆ - ನಾವು ಯಾವುದರಿಂದ ಬೇಕಾದರೂ ಈ  ಅಭ್ಯಾಸ ಮಾಡಬಹುದು. ಮಕ್ಕಳು ನಂತರ ಚೆನ್ನಾಗಿ ಬರೆಯಲು ದೇಹ ಚಲನೆಗಳು ಮತ್ತು ಲಯ ಆಟಗಳು ಬಹಳ ಉಪಯುಕ್ತವಾಗಿರುತ್ತವೆ. ಬರವಣಿಗೆ ೆಂಬುದುಮನಸ್ಸು, ಕಣ್ಣು, ಕೈ ಮತ್ತು ದೈಹಿಕ ಹೊಂದಾಣಿಕೆ ಕೆಲಸ ಆಗಿದೆ. ನಾವು ಬಹಳಷ್ಟು ತಮಾಷೆ ಆಟಗಳು (ನಾಯಕ ಮಾಡಿದಂತೆ  ಮಾಡಿ ಇತ್ಯಾದಿ) ಆಡಿಸಬಹುದು. ಮಕ್ಕಳು ನಿರ್ದಿಷ್ಟ ದಿಕ್ಕಿನಲ್ಲಿ ತಮ್ಮ ದೇಹದ ಚಲನೆಯನ್ನು ಮಾಡುವಂತೆ ತೋರಿಸಬಹುದು. ಉತ್ತಮ ಅಭಿನಯದ ಕವನಗಳು ಅಥವಾ ಹಾಡುಗಳು  ಇಲ್ಲಿ ಬಹಳ ಉಪಯುಕ್ತವಾಗುತ್ತವೆ.
  • • ಈ ಎಲ್ಲಾ ಅವಧಿಗಳು, ಸಂತಸದ  ಲವಲವಿಕೆಯಮತ್ತು ಉಲ್ಲಾಸ ಪೂರ್ಣವಾಗಿ ಇರಬೇಕು - ಇಲ್ಲಿ ಯಾವುದೇ ಒಳ್ಳೆಯ ಅಥವಾ ಕೆಟ್ಟ ಪ್ರದರ್ಶನ ಇರುವುದಿಲ್ಲ. ಮಕ್ಕಳು ಏನು  ಮಗುವಿನ ಮಾಡಿದರೂ  ಚೆನ್ನ . ಶಿಕ್ಷಕರಾಗಿ, ನಾವು ಕೇವಲ ನಮ್ಮ ಮಕ್ಕಳು ಶೈಕ್ಷಣಿಕ ಕಲಿಕೆ ಆರಂಭಿಸಲು ತಮ್ಮ ಇಂದ್ರಿಯಗಳ ತಮ್ಮ ಮನಸ್ಸನ್ನು ಬಳಸಿ ಸವಾಲಿಗೆ ಎಷ್ಟು ಸಿದ್ಧರಾಗಿದ್ದಾರೆ ಎಂದು ಅಳೆಯಲು ಈ ಚಟುವಟಿಕೆಗಳನ್ನು ಬಳಸುತ್ತಿದ್ದೇವೆ.
  • ಒಂದನೇ ತರಗತಿ ಶಿಕ್ಷಕರಾಗಿ, ನಾವು ಶೈಕ್ಷಣಿಕ ವರ್ಷದ ಒಂದು ಅಥವಾ ಎರಡು ತಿಂಗಳು ನಮ್ಮ ಮಕ್ಕಳು ಸಿದ್ಧತೆ ಕೌಶಲಗಳನ್ನು ಚೆನ್ನಾಗಿ ಮೈಗೂಡಿಸಿಕೊಂಡಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ವಿನಿಯೋಗಿಸಬೇಕು . ಈ ಬಹುಶಃ ಮಕ್ಕಳು ಹೆಜ್ಜೆ  ಮೇಲೆ ಹೆಜ್ಜೆ ಇಟ್ಟು ಕಲಿಕೆ ಮೆಟ್ಟಿಲನ್ನು ಹತ್ತುವುದು ಒಳ್ಳೆಯದು  ಬದಲಿಗೆ ಒಂದೆರಡು ಮೆಟ್ಟಲು ಬಿಟ್ಟು ಬಳಿಕ ಪರದಾಡುವುದು ಬೇಡ.
• ನಮ್ಮ ಮಕ್ಕಳನ್ನು ಆರಾಮದಾಯಕ ಮತ್ತು ಸುರಕ್ಷಿತ ವಾಗಿ ಕಲಿಯುವಂತೆ ಮಾಡುವುದು ಮೊದಲ ಹೆಜ್ಜೆ – ಇಲ್ಲದೆ ಹೋದರೆ  ಶಾಲೆಯು ಒಂದು ವಿಚಿತ್ರ ಅನುಭವ ಆಗಿಹೋಗುತ್ತದೆ. ನಾವು ನಂತರ ಮೂಲ ಸಿದ್ಧತೆ ಕೌಶಲಗಳನ್ನು ಮಕ್ಕಳು ತಾವು ಎನನ್ನೋ ಕಲಿಯುತ್ತಿದ್ದೇವೆ ಎಂಬುದು ಅರಿವಾಗದಂತೆ ಬೆಳೆಸಿಕೊಂಡು ಹೋಗುವಂತೆ ಚಟುವಟಿಕೆಗಳನ್ನು ವಿನ್ಯಾಸ ಗೊಳಿಸಬಹುದು

4.ಹುಟ್ಟುವ ಮೊದಲೇ ಕೂಸಿಗೆ ಇಂಗ್ಲಿಷ್ ಪಾಠವೇ? ಯಾಕಾಗಬಾರದು?



ಪುಟ್ಟ ಮಕ್ಕಳ ಶಿಕ್ಷಣದಲ್ಲಿ ಮಾತೃ ಭಾಷೆ ವಿರುದ್ಧ ಇಂಗ್ಲೀಷ್ ಭಾಷೆ- ಒಂದು ವಿವೇಚನೆ.
                   ಓರಿಸ್ಸಾದ ಗಜಪತಿ  ಜಿಲ್ಲೆಯ  ತುಮುಲೋ ಎಂಬ ಹಳ್ಳಿಯಲ್ಲಿ ಸೌರಾ ಎಂಬ ಬುಡಕಟ್ಟು ಜನಾಂಗದಲ್ಲಿ ಹೆಣ್ಣು ಮಗು ಪಿಂಕಿ ಜನಿಸಿದಾಗ, ಅವಳ ತಂದೆ ತಾಯಿಗೆ ಹಿಗ್ಗಿನೌತಣ.   ನನ್ನ ಪಿಂಕಿ ಶಾಲೆಗೆ ಹೋಗ್ತಾಳೆ, ಚೆನ್ನಾಗಿ ಓದ್ತಾಳೆ - ಎಂದು ಅವಳ ತಂದೆ ಸಂಭ್ರಮಿಸಿದ. ಇದನ್ನು ಕೇಳಿ ಪಿಂಕಿಯ ತಾಯಿಯೂ ಸಂತಸಪಟ್ಟಳು.  "ಅಷ್ಟಾದರೆ ತುಂಬಾ ಒಳ್ಳೆಯದು, ನಮಗಂತೂ ಆ ಸೌಭಾಗ್ಯ ಇರಲಿಲ್ಲ, ಪಿಂಕಿ ಓದಿ ದೊಡ್ಡವಳಾಗಬೇಕು" ಎಂದಳು. ಪಿಂಕಿ ಬೆಳೆದಳು, ನಡೆದಾಡಲು ಪ್ರಾರಂಭಿಸಿದಳು ಮತ್ತು ತನ್ನ ತಂದೆಯ ಬೆರಳನ್ನು ಹಿಡಿದು ಹಳ್ಳಿಯ ಸಂತೆಗೆ ಹೋಗಲಾರಂಭಿಸಿದಳು. ಆಡುತ್ತಾ ನಲಿಯುತ್ತಾ ಹುಸಿನಗೆ ಬೀರಿ ಕೆಲವು ತೊದಲು ನುಡಿಗಳನ್ನು ಆಡುತ್ತಿದ್ದಳು. ಅವಳ ತೊದಲುನುಡಿ ಅರ್ಥ ಆಗದಿದ್ದರೂ ಆ ಬಾಲ ಭಾಷೆ ಕೇಳಿದವರು ಸಂತೋಷ ಪಡುತ್ತಿದ್ದರು.  ಬಹು ಬೇಗನೇ ಅವಳು ತನ್ನ ಸೌರಾ ಭಾಷೆಯಲ್ಲಿ ಹರುಕು ಮುರುಕು ವಾಕ್ಯಗಳನ್ನು ತನ್ನ ಪಾಲಕರೊಂದಿಗೆ, ಹಳ್ಳಿಗರೊಂದಿಗೆ ಮತ್ತು ಬೇರೆ ಇತರ ಮಕ್ಕಳೊಂದಿಗೆ ಮಾತನಾಡತೊಡಗಿದಳು. ಅವಳು ತನ್ನ ಸೌರಾ ಭಾಷೆಯಲ್ಲಿ ಅಪ್ಪ ಅಮ್ಮನನ್ನು ಕರೆಯುತಿದ್ದಳು. ತನ್ನ ಹಳ್ಳಿಯ ಸುತ್ತಮುತ್ತಲಿನ ಗಿಡ-ಮರಗಳ, ಹೂವು-ಹಣ್ಣುಗಳ ಮತ್ತು ಪ್ರಾಣಿಗಳ ಹೆಸರನ್ನು ಹೇಳುವಂತಾದಳು. ತನ್ನ ತಂದೆಯ ಹೆಗಲ ಮೇಲೆ ಕುಳಿತು, ಬಗಡಾಕ್ಕೆ (ಓಡಿಸ್ಸಾದ ಗಿರಿಜನರ ಸಾಗುವಳಿ ಭೂಮಿ) ಹೋಗುವ ದಾರಿಯಲ್ಲಿ ಕಂಡ ಎಲ್ಲಾ ಚಿಟ್ಟೆಗಳನ್ನು ತನ್ನ ತಂದೆಯೊಂದಿಗೆ ಎಣಿಸುತ್ತಾ ಹೋಗುತ್ತಿದ್ದಳು. ಹಳ್ಳಿಗರು ಪಿಂಕಿಯ ನಡೆನುಡಿಗಳಿಂದ ಅವಳನ್ನು ಇಷ್ಟ ಪಡುತ್ತಿದ್ದರು.  ಪಿಂಕಿ ತುಂಬಾ ಜಾಣೆ!  ಎನ್ನುತ್ತಿದ್ದರು. ಒಂದು ದಿನ ಹಳ್ಳಿಯ ಶಾಲಾ ಶಿಕ್ಷಕಿ ಬಂದು "ಪಿಂಕಿಗೆ ಆರು ವರ್ಷ ಆಯ್ತಲ್ಲಾ. ಅವಳನ್ನು ಶಾಲೆಗೆ ಕಳುಹಿಸಿ" ಎಂದರು. ಪಿಂಕಿಯ ಅಪ್ಪ ಅಮ್ಮ ಅವಳನ್ನು ಶಾಲೆಗೆ ಸೇರಿಸಲು ತುಂಬಾ ಖುಷಿಯಿಂದ ಕರೆದುಕೊಂಡುಹೋದರು. ಪಿಂಕಿಯೂ ಸಹ ಬಹಳ ಸಂತೋಷ ಪಟ್ಟಳು. ಅವಳಿಗೆ ಶಾಲೆಯಿಂದ ಹೊಸ ಪುಸ್ತಕ ಮತ್ತು ಬರಹದ ಪುಸ್ತಕ ದೊರೆಯಿತು. ಅವಳು ಅವುಗಳನ್ನು ತನ್ನ ತಾಯಿಗೆ ಹೆಮ್ಮೆಯಿಂದ ತೋರಿಸಿದಳು. ಆಗ ಅವಳ ತಾಯಿ " ಈ ಪುಸ್ತಕಗಳನ್ನು ಹೇಗೆ ಓದಬೇಕೆಂಬುದನ್ನು ನಿನ್ನ ಶಿಕ್ಷಕರು ನಿನಗೆ ಹೇಳಿಕೊಡುತ್ತಾರೆ. ನಾನಂತೂ ಓದಲು ಕಲಿಲೇ ಇಲ್ಲ." ಎಂದಳು.
        ಪಿಂಕಿ ಪ್ರತೀ ದಿನ ಶಾಲೆಗೆ ಹೋಗುತ್ತಿದ್ದಳು. ಆದರೆ, ಕ್ರಮೇಣ ಅವಳು ಮೌನಿಯಾದಳು. ಅವಳ ತಾಯಿ  ನೀನು ಶಾಲೆಯಲ್ಲಿ ಏನು ಮಾಡುತ್ತೀಯಾ? ಎಂದು ಕೇಳುತಿದ್ದರೆ, ಅದಕ್ಕೆ ಪಿಂಕಿ ಏನನ್ನೂ ಹೇಳುತ್ತಿರಲಿಲ್ಲ.  ಅವಳ ತಂದೆ  ನಿನ್ನ ಶಿಕ್ಷಕರು ನಿನಗೆ ಈ ಪುಸ್ತಕವನ್ನು ಓದಲು ತಿಳಿಸಿ ಕೊಟ್ಟರೇ? ನನಗೊಂದು ಕತೆ ಓದಿ ಹೇಳು ಎಂದರೂ ಪಿಂಕಿ ಏನೂ ಹೇಳದೇ ಮೌನಿಯಾಗಿರುತ್ತಿದ್ದಳು. ಕ್ರಮೇಣ ಅವಳು ಹೆಚ್ಚು ಹೆಚ್ಚು ಮೌನಿಯಾಗುವುದರೊಂದಿಗೆ ನಿರುತ್ಸಾಹದಿಂದಿರುತ್ತಿದ್ದಳು. ಅವಳು ಶಾಲೆಗೆ ಪ್ರತಿದಿನ ಹೋಗದೇ ಬಿಟ್ಟು ಬಿಟ್ಟು ಹೋಗುತ್ತಿದ್ದಳು. ಒಂದು ದಿನ ಶಾಲಾ ಶಿಕ್ಷಕಿ ಮತ್ತು ಪಿಂಕಿಯ ತಂದೆ ಹಳ್ಳಿಯ ಮಾರುಕಟ್ಟೆಯಲ್ಲಿ ಮುಖಾಮುಖಿಯಾದರು. ಪಿಂಕಿ ಶಾಲೆಗೆ ನಿರಂತರವಾಗಿ ಬರುತ್ತಿಲ್ಲ; ಏನಾದರೂ ಪ್ರಶ್ನೆಗಳನ್ನು ಕೇಳಿದರೆ ತಲೆಯನ್ನು ತಗ್ಗಿಸಿ ಮೌನವಾಗಿರುತ್ತಾಳೆ. ಎಂದರು.  ಅವಳ ತಂದೆಗೆ ಈ ಮಾತನ್ನು ಕೇಳಿ ಬೇಸರವಾಯಿತು. "ಯಾಕೆ ಪುಟ್ಟಿ ನೀನು ಶಾಲೆಗೆ ಹೋಗುವುದಿಲ್ಲ? ಶಿಕ್ಷಕರು ಏನಾದರೂ ಕೇಳಿದರೆ   ಏಕೆ ಉತ್ತರಿಸುವುದಿಲ್ಲ? ಯಾಕಮ್ಮಾ ಏನಾಯ್ತು ?" ಎಂದು ಪಿಂಕಿಯನ್ನು ಕೇಳಿದರು. "ಮೇಡಂ ಹೇಳುವುದು ನನಗೆ ಅರ್ಥವಾಗುವುದಿಲ್ಲ; ನಾನು ಪುಸ್ತಕದಲ್ಲಿರುವ ಚಿತ್ರಗಳನ್ನು ಮಾತ್ರ ನೋಡುತ್ತಿರುತ್ತೇನೆ, ಮೇಡಂ ಪುಸ್ತಕ ಓದಿದರೆ  ನನಗೆ ಏನೂ ಅರ್ಥವಾಗುತ್ತಿಲ್ಲ. " ಎಂದಳು ಪಿಂಕಿ. ಅವಳ ತಂದೆಗೆ ಅರ್ಥವಾಯಿತು. ಶಿಕ್ಷಕರು ಶಾಲೆಯಲ್ಲಿ ಒರಿಯಾ ಭಾಷೆಯನ್ನು ಮಾತನಾಡುತ್ತಾರೆ ಅದು ನನ್ನ ಪಿಂಕಿಗೆ ಅರ್ಥವಾಗುತ್ತಿಲ್ಲ. ಪಿಂಕಿಯ ತಂದೆಗೆ ತನ್ನ ಶಾಲಾದಿನಗಳು ನೆನಪಾದವು; ಅವನು ಸಹ ಶಾಲೆಯಲ್ಲಿರುವ ಬೋಧನಾ ಭಾಷೆಯ ಅದೇ ಕಾರಣಗಳಿಂದ ಶಾಲೆಯನ್ನು ಬಿಟ್ಟಿದನು. ಶಾಲೆಯಲ್ಲಿ ಬಳಸುತ್ತಿರುವ ಭಾಷೆ ಸೌರಾ ಆಗಿರಲಿಲ್ಲ. ಕೆಲವು ದಿನಗಳ ನಂತರ ಪಿಂಕಿಯೂ  ಶಾಲೆಗೆ ಹೋಗುವುದನ್ನು ಬಿಟ್ಟಳು.
              ಇದು ಕೇವಲ ಪಿಂಕಿ ಮತ್ತು ಅವಳ ತಂದೆಗೆ ಸಂಬಂಧಪಟ್ಟ ಸಮಸ್ಯೆ ಅಲ್ಲ. ಮಿಲಿಯಾಂತರ ಮಕ್ಕಳು ಶಾಲೆಗಳಲ್ಲಿ ತಾವು ಮಾತನಾಡಬಲ್ಲ, ಪ್ರಾಣಿ ಪಕ್ಷಿಗಳನ್ನು ಹೆಸರಿನಿಂದ ಗುರುತಿಸಬಲ್ಲ, ತನ್ನ ಸಮುದಾಯದವರೊಂದಿಗೆ ಮಾತನಾಡಬಲ್ಲ ಭಾಷೆಯನ್ನು ಕಡೆಗಣಿಸಿ ತಮಗೆ ಗೊತ್ತಿಲ್ಲದ ಭಾಷೆಯನ್ನು ಅವರ ಕಲಿಕೆಯಲ್ಲಿ ಒತ್ತಾಯದಿಂದ ಹೇರುವುದರಿಂದ ಬೇಸತ್ತು ಶಾಲೆಯಿಂದ ಹೊರಬಂದಿರುತ್ತಾರೆ. ಮಗುವಿನ ಮೊದಲ ಭಾಷೆ ಅವಳ ಮೊತ್ತ ಮೊದಲ ಸ್ವಸ್ವರೂಪ  ಅಥವಾ ಸ್ವವ್ಯಕ್ತಿತ್ವವಾಗಿರುತ್ತದೆ. ಅದು ಅವಳ ಬಾಲ್ಯದ ಎಲ್ಲಾ ಅನುಭವಗಳು, ಕಲಿಕೆಗಳು, ತನ್ನ ಗೆಳತಿಯರು, ಹಿರಿಯರೊಂದಿಗಿನ ಅವಳ ಸಂಬಂಧ, ಅವಳ ತಿಳಿವಳಿಕೆ ಮತ್ತು ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವಿಧಾನವಾಗಿರುತ್ತದೆ. ಈ ಭಾಷೆ ಅವಳಿಗೆ ತನ್ನ ಮನೆ, ಕುಟುಂಬ, ಸಮುದಾಯ ಮತ್ತು ಸಾಮಾಜಿಕ ಜಗತ್ತಿನಲ್ಲಿ ವ್ಯವಹರಿಸಲು ಬೇಕಾದ ಸಾಮರ್ಥ್ಯವನ್ನು ಅವಳಿಗೆ ಕೊಡುತ್ತದೆ. ಆದರೆ, ಒಮ್ಮೆ ಅವಳು ಶಾಲೆಗೆ ಸೇರಿದರೆ ಎಲ್ಲವೂ ಬದಲಾಗುತ್ತದೆ. ಶಾಲೆಯೇನೋ ಅವಳಿಗೋಸ್ಕರ ತನ್ನ ಬಾಗಿಲನ್ನು ತೆರೆದರೂ ಅವಳ ಮತ್ತು ಶಾಲಾ ತರಗತಿಯ ನಡುವೆ ಕಣ್ಣಿಗೆ ಕಾಣದ  ಹಾಗೂ ದಾಟಿಹೋಗಲಾಗದ ಕೋಟೆಯೊಂದು ಇರುತ್ತದೆ. ಇದ್ದಕ್ಕಿಂದ್ದಂತೆ ಅವಳ ಆಡು ಭಾಷೆಯು  ಶಾಲಾ ಬೋಧನಾ ಭಾಷೆಯ ಮುಂದೆ ಏನೂ ಪ್ರಯೋಜನವಿಲ್ಲ ಎನಿಸಿಕೊಂಡು ಅವಮಾನಕ್ಕೆ ಈಡಾಗುತ್ತದೆ. ಇದರಿಂದ ಇದ್ದಕ್ಕಿದ್ದಂತೆ ಅವಳಲ್ಲಿರುವ ಜ್ಞಾನ, ಅನುಭವಗಳು, ಸಂಪನ್ಮೂಲಗಳು ಮೌಲ್ಯಹೀನವಾಗುತ್ತವೆ. ಇದರ ಪರಿಣಾಮವಾಗಿ ತಾನು ಸಂಪತ್ತು ಎಂದುಕೊಂಡಿದ್ದ ಅವಳ ಮಾತೃಭಾಷೆ ಅವಳಿಗೊಂದು ಹೊರೆಯಾಗಿ ಬಿಡುತ್ತದೆ. ಶಾಲೆಯ ಶಿಕ್ಷಣ ಮಾಧ್ಯಮದ ಭಾಷೆ ಅವಳಿಗೆ ಅಪರಿಚಿತ ಭಾಷೆ, ಅದಕ್ಕೂ ಅವಳ ಅನುಭವ, ಜ್ಞಾನ ಮತ್ತು ಸಾಮಾಜಿಕ ಜೀವನಕ್ಕೂ ಏನೇನೂ ಸಂಬಂಧ ಇರುವುದಿಲ್ಲ. ಅವಳ ಸ್ವಂತ ವ್ಯಕ್ತಿತ್ವವನ್ನು ಕಡೆಗಣಿಸುವ ಅವಳ ಅನುಭವದಿಂದ ಆವಳನ್ನು ದೂರ ಮಾಡುವ ಹೊಸ ಭಾಷೆಯನ್ನು ಆಕೆ ಹೇಗೆ ನಿಭಾಯಿಸಬಲ್ಲಳು., ಇಂತಹ ಹಲವಾರು ಮಕ್ಕಳು ಶಾಲೆಯಲ್ಲಿರುವ ಅಪರಿಚಿತ ಭಾಷೆಯ ಹೊರೆಯಿಂದ ಶಾಲೆಯಿಂದ ದೂರವಿದ್ದಾರೆ. ಇದರಲ್ಲಿ ಆಶ್ಚರ್ಯಪಡುವ ಸಂಗತಿಯೇನಿಲ್ಲ.
      ಇಂದಿನ ಜಗತ್ತಿನಲ್ಲಿ ಅದರಲ್ಲೂ ಬಹುಭಾಷಾ ದೇಶಗಳಾದ ಅಂದರೆ ನಮ್ಮಂತಹ ದೇಶಗಳಲ್ಲಿ, ಒಂದು ಭಾಷೆ ಕಲಿಕೆ ಸಾಕಾಗುವುದಿಲ್ಲ ಎಂಬುದೇನೋ ನಿಜ; ಶಾಲಾ ಕಲಿಕೆಯು ಬಹು ಭಾಷೆಗಳನ್ನು ಒಳಗೊಂಡಿರಲೇ ಬೇಕು. ಮಾತೃ ಭಾಷೆ, ಪ್ರಾಂತೀಯ ಭಾಷೆ ಅಂದರೆ, ತಮಿಳ್, ಪಂಜಾಬಿ ಮತ್ತು ಬಂಗಾಲಿಯಂತಹ ಪ್ರಾಂತೀಯ ಭಾಷೆಗಳು, ರಾಷ್ಟ್ರ ಮಟ್ಟದ ಸಂಪರ್ಕ ಭಾಷೆ ಅಂದರೆ ಹಿಂದಿ ಮತ್ತು ಅಂತಾರಾಷ್ಟ್ರೀಯ ಭಾಷೆ ಇಂಗ್ಲೀಷ್. ಆದರೆ, ಶಾಲೆಗಳಲ್ಲಿ ಮಕ್ಕಳು ತನಗೆ ಈಗಾಗಲೇ ಗೊತ್ತಿರುವ ಭಾಷೆಯನ್ನು ಏಕೆ ಕಲಿಯಬೇಕು? ಬಾಲ್ಯದಲ್ಲಿಯೇ ಇನ್ನೊಂದು ಪ್ರಮುಖ ಭಾಷೆಯನ್ನು ಏಕೆ ಕಲಿಯಬಾರದು? ಮಕ್ಕಳಿಗೆ ಮಾತೃ ಭಾಷೆಯು ಬೇಕೇ ಬೇಕು ಏಕೆಂದರೆ ಶಾಲೆಯಲ್ಲಿ ಚೆನ್ನಾಗಿ ಕಲಿಯಲು ಬೇಕಾದ ಬುನಾದಿ ಜ್ಞಾನವನ್ನು ಅದರಲ್ಲಿ ಸಂಗ್ರಹಿಸಿಡಲಾಗಿರುತ್ತದೆ. ಈ ಭಾಷೆ ಅವರನ್ನು ಶಾಲೆಗೆ ಹೋಗಿ ಕಲಿಯಲು ಸಿದ್ಧ ಪಡಿಸುತ್ತದೆ. ಆದರೆ ಅದೇ ಸಮಯದಲ್ಲಿ, ಅವರು  ತಮ್ಮ  ಭಾಷಾ ಕೌಶಲ್ಯಗಳನ್ನು ಇನ್ನೂ ಅಭಿವೃದ್ಧಿ ಪಡಿಸಿಕೊಳ್ಳಬೇಕು. ಮಕ್ಕಳೇನೋ ತಮ್ಮ ಆಡು ಭಾಷೆಯಲ್ಲಿ ಚೆನ್ನಾಗಿ ಮಾತಾಡ ಬಲ್ಲವರಾದರೂ, ಅದು ಪ್ರಾಥಮಿಕ ಹಂತದಲ್ಲಿ ತನ್ನ ಮನೆ ಮತ್ತು ಸಮುದಾಯದ  ನಿಕಟ ಪರಿಸರಗಳಲ್ಲಿ ಸಾಮಾಜಿಕ ಮತ್ತು ವ್ಯಕ್ತಿಗತ ಮಾತುಕತೆಗೆ ಉಪಯೋಗವಾಗುವಂತದ್ದು.
ಆದರೆ  ಶಾಲಾ ಕಲಿಕೆ, , ಸಂಕೀರ್ಣ ಮತ್ತು ಅಮೂರ್ತವಾದ ಪರಿಕಲ್ಪನೆಯನ್ನು ಒಳಗೊಂಡಿರುತ್ತದೆ, ಮತ್ತು ಭಾಷೆಯನ್ನು ಈ ಪರಿಕಲ್ಪನೆಗಳಲ್ಲಿ ಪ್ರಭುತ್ವವನ್ನು ಗಳಿಸುವುದಕ್ಕಾಗಿ, ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದಕ್ಕಾಗಿ, ತನ್ನದೇ ಚಿಂತನಾಶಕ್ತಿಯನ್ನು  ಕ್ರಮಗೊಳಿಸುವುದಕ್ಕಾಗಿ ಮತ್ತು ಚಿಂತನಾವಸ್ತುವಾಗಿ ಭಾಷೆ ಕುರಿತು ಚಿಂತಿಸುವುದಕ್ಕಾಗಿ ಬಳಸಲಾಗುತ್ತದೆ. ಶಾಲಾಶಿಕ್ಷಣ ಮತ್ತು ಪ್ರಾಥಮಿಕ ಅಕ್ಷರಾಭ್ಯಾಸ ಮಕ್ಕಳ ಭಾಷಾ ಬಳಕೆಯನ್ನು  ಸಾಮಾಜಿಕವಾಗಿ ಮತ್ತು ಸಮಯಸಂದರ್ಭಗಳಲ್ಲಿ ಬಳಸುವುದರಿಂದ ಮುಂದಕ್ಕೆ   ಹೆಚ್ಚಿನ ಕ್ರಮಬದ್ಧವಾದ  ಆಲೋಚನೆ ,ವಿಷಯ ಗ್ರಹಣೆ ಮತ್ತು ಶೈಕ್ಷಣಿಕ ಕಲಿಕೆಯ ಕಡೆಗೆ ಕೊಂಡೊಯ್ಯುತ್ತದೆ.  ಮಕ್ಕಳ  ಮೊದಲ ಆಡು ಭಾಷೆ ಈ ವಿಷಯ ಗ್ರಹಣಾ  ಮತ್ತು ಶೈಕ್ಷಣಿಕ ಕಲಿಕೆಯ ಹಂತಕ್ಕೆ ಏರಬೇಕು. ಶೈಕ್ಷಣಿಕ ಸಾಧನೆಯನ್ನು ಮಾಡಲು ಅದೂ ಅಲ್ಲದೇ ಬೇರೆ ಭಾಷೆಯನ್ನು ಕಲಿಯಲು ಬೇಕಾದ  ಭಾಷೆಯನ್ನು ಕುರಿತು ಚಿಂತಿಸುವ ಸಾಮರ್ಥ್ಯ ಬೆಳೆಯಲೇಬೇಕು.
ಶಾಲೆಗೆ ಪ್ರವೇಶಿಸಿದ ನಂತರ, ಬುಡಕಟ್ಟು ಸಮುದಾಯದ ಮತ್ತು ಭಾಷಾ ಅಲ್ಪಸಂಖ್ಯಾತರ ಮಕ್ಕಳು ತಮಗೆ ಎನೇನೂ ಪರಿಚಯವಿರದ ಪ್ರಬಲ ಬೋಧನಾ ಭಾಷೆಯ ಹೊರೆ ಹೊರಬೇಕಾಗುತ್ತದೆ. ಇದಲ್ಲದೆ ಅವರಿಗೆ ಪಾಠ ಮಾಡಿದ ವಿಷಯ ಅರ್ಥವಾಗುವುದಿಲ್ಲ ಪರಿಣಾಮವಾಗಿ ನಪಾಸಾಗುತ್ತಾರೆ.  ಶಾಲೆಯಲ್ಲಿ ಬಳಸುವ  ಪ್ರಬಲ ಭಾಷೆ ಮಗುವಿಗೆ  ಭಾಷಾ ಸಾಮರ್ಥ್ಯವನ್ನು ಸಾಮಾನ್ಯ ವ್ಯಕ್ತಿಗತ ಸಂಭಾಷಣೆಗಿಂತ ಹೆಚ್ಚೇನೂ ಬೆಳಸುವುದಿಲ್ಲ ಅಗತ್ಯವಿರುವ ಸಾಮಾನ್ಯ  ಭಾಷಾ ಕೌಶಲ ಮತ್ತು ಮಾತೃ ಭಾಷೆಯ ಮೇಲೆಯೂ ಇದು ದುಷ್ಪರಿಣಾಮ ಬೀರುತ್ತದೆ ಅಥವಾ ಕಲಿತದ್ದನ್ನು ಮರೆಸುತ್ತದೆ; ಮಗು ಶಾಲೆಯಲ್ಲಿ ಬಳಸುವ ಪ್ರಬಲ ಭಾಷೆಯನ್ನು ಕಲಿಯುವುದರಿಂದ ಮಗುವಿನಲ್ಲಿರುವ ಮಾತೃ ಭಾಷಾ ಕೌಶಲ್ಯಗಳು ದಿನೇದಿನೇ ನಶಿಸಿ ಹೋಗುತ್ತವೆ. ಒಂದು ಭಾಷೆಯಲ್ಲಿ ಮೂಲಭೂತ  ಪರಸ್ಪರ ಸಂಭಾಷಣಾ  ಕೌಶಲ್ಯಗಳು  ಬೆಳೆಯಲು ಎರಡರಿಂದ ಮೂರು ವರ್ಷಗಳು ಬೇಕಾಗುತ್ತವೆ, ಇನ್ನು ವಿಷಯ ಗ್ರಹಣಾ ಮತ್ತು ಶೈಕ್ಷಣಿಕ ಭಾಷಾ ಕೌಶಲ್ಯಗಳು ಬೆಳೆಯಲು  ನಿಧಾನವಾಗಿ ಅಂದರೆ ಆರರಿಂದ ಎಂಟು ವರ್ಷಗಳು ಬೇಕಾಗುತ್ತವೆ. ಆದುದರಿಂದ, ಮಕ್ಕಳು ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದಕ್ಕೆ ಸಹಾಯ ಮಾಡುವುದಕ್ಕೆ ಮಾತ್ರವಲ್ಲದೆ  ಭಾಷೆಯನ್ನು  ಉನ್ನತ ಮಟ್ಟದ ಚಿಂತನೆಗೆ ಬಳಸಲು, ಸಮಸ್ಯಾ ಪರಿಹಾರ ಮಾಡಿಕೊಳ್ಳಲು, ಬಹು ಭಾಷಾ ಕುಶಲತೆ ಗಳಿಸಲು ಅನುವಾಗುವಂತೆ ಮಕ್ಕಳಿಗೆ ಅವರವರ ಮಾತೃ ಭಾಷೆಯನ್ನು ಬಾಲ್ಯದ ಶಿಕ್ಷಣ ಮತ್ತು ಔಪಚಾರಿಕ ಶಿಕ್ಷಣವನ್ನು ನೀಡಲು ಶಿಕ್ಷಣದಲ್ಲಿ  ಕನಿಷ್ಠ ಆರು ವರ್ಷ ಉಪಯೋಗಿಸಲೇಬೇಕು. ವಾಸ್ತವವಾಗಿ ಮಾತೃಭಾಷಾ ಶಿಕ್ಷಣವು ಮುಂದೆ ಕಲಿಯುವ ಭಾಷೆಗಳಿಗೆ ಯಾವುದೇ ಹೊರೆಯಾಗದಂತೆ ನಡೆದುಹೋಗುತ್ತದೆ. ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಸಂಭಾಷಣೆ ಮತ್ತು ಸಾಮಾಜಿಕ ಮಾತುಕತೆಗಳನ್ನು ಅನೇಕ ಭಾಷೆಗಳಲ್ಲಿ ಬಲು ಬೇಗ ಕಲಿತುಕೊಳ್ಳುತ್ತಾರಾದರೂ ಅವರ ಮಾತೃಭಾಷೆಯಲ್ಲಿ ಪ್ರಾರಂಭಿಕ ಸಾಮಾಜಿಕ ಬಳಕೆಯನ್ನೂ ಮೀರಿದ ಕೌಶಲ್ಯವನ್ನು ಕಲಿತಿದ್ದರೆ ಬಲು ಬೇಗನೆ ಇತರ ಭಾಷೆಗಳಲ್ಲೂ ಉನ್ನತಮಟ್ಟದ ಓದುಬರಹ ಮತ್ತು ಶೈಕ್ಷಣಿಕ ಕೌಶಲ್ಯಗಳನ್ನು ಕಲಿತುಕೊಳ್ಳುತ್ತಾರೆ.ಇದೇ ಮಾತೃಭಾಷೆ ಆಧಾರಿತ ಶಿಕ್ಷಣಕ್ಕೆ ಮೂಲಭೂತ ತತ್ವ.
 ಮಕ್ಕಳು ಪ್ರಾಥಮಿಕ ಶಾಲಾ ಹಂತಕ್ಕೆ ಸೇರುವಾಗ  ಅವರ ಮನಸ್ಸು ಕಾಲಿ ಸ್ಲೇಟಿನಂತಿರುವುದಿಲ್ಲ, ಬದಲಿಗೆ  ಶ್ರೀಮಂತ ಜ್ಞಾನ ಭಂಡಾರ, ಮಾತೃ ಭಾಷಾ ಜ್ಞಾನ, ಬಾಲ್ಯದ ಅನುಭವ ಮತ್ತು ತಿಳಿವಳಿಕೆಯನ್ನು ಹೊಂದಿರುತ್ತಾರೆ.ಇವೇ ಪ್ರಾಥಮಿಕ ಶಾಲೆಯಲ್ಲಿ ಅವರ  ಭಾಷೆ ಬೆಳವಣಿಗೆ, ಓದುಬರಹದ ಬೆಳವಣಿಗೆ  ಮತ್ತು ಲೆಕ್ಕದ ಪರಿಕಲ್ಪನೆ ಗ್ರಹಿಸಲು ಮತ್ತು  ಪರಿಸರದ ಅರಿವಿನ ಬೆಳವಣಿಗೆಗೆ ಅಗತ್ಯವಿರುವ   ಮೂಲ ಸಂಪನ್ಮೂಲ. ಅನೌಪಚಾರಿಕ ಸಂಸ್ಕೃತಿಯ ಅನುಭವದೊಂದಿಗೆ ತನ್ನ ಬಾಲ್ಯ ವ್ಯವಸ್ಥೆಯಿಂದ ಔಪಚಾರಿಕ ಶಿಕ್ಷಣ ವ್ಯವಸ್ಥೆಯ ಕಡೆಗೆ ಪದಾರ್ಪಣ ಮಾಡುವುದು ಪ್ರತಿಯೊಂದು ಮಗುವಿಗೂ ದೊಡ್ಡ ಸವಾಲು. ಶಾಲೆ ಮತ್ತು ಮನೆಯ ನಡುವಿನ ಅಂತರ ಕೇವಲ ದೈಹಿಕವಾಗಿ ಕ್ರಮಿಸುವ ದೂರವಲ್ಲ. ಅದು ಶಾಲಾ ಕಲಿಕೆಗೆ ಅಗತ್ಯವಿರುವ ಗ್ರಹಣ ಶಕ್ತಿಯ, ಸಂಕಲ್ಪ ಶಕ್ತಿಯ ಮತ್ತು ಸಾಮಾಜಿಕ ಸಿದ್ಧತೆಯ ಮನೋವೈಜ್ಞಾನಿಕ ಅಂತರವಾಗಿದೆ.  ಆದ್ದರಿಂದ, ಪದ್ಧತಿ ಶಿಕ್ಷಣದ ಪ್ರಯೋಜನಗಳು ದೊರಕಬೇಕಾದರೆ ಶಾಲೆಗೆ ಸೇರುವ ಮೊದಲ; ಅಂದರೆ, ಎರಡರಿಂದ ಆರನೇ ವಯಸ್ಸಿನ ಮಕ್ಕಳಿಗೆ ಮನೋವೈಜ್ಞಾನಿಕ, ದೈಹಿಕ, ಸಾಮಾಜಿಕ ಮತ್ತು ಬೌದ್ಧಿಕ ಸನ್ನದ್ದತೆ ಅಗತ್ಯವಿರುತ್ತದೆ.  ಪುಟಾಣಿ ಮಕ್ಕಳ ಶಿಕ್ಷಣದ ಉದ್ದೇಶವೇ  ಇಂತಹ ಒಂದು  ಸನ್ನದ್ಧತೆಯನ್ನು ಬೆಳಸುವುದು. ಇದರಲ್ಲಿ ಭಾಷೆ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಪುಟಾಣಿ ಮಕ್ಕಳ ಶಿಕ್ಷಣವು ಮಕ್ಕಳ ಭಾಷೆಯನ್ನು ಸಾಮಾಜಿಕ ಮಾತುಕತೆಯ ಕೌಶಲ್ಯದಿಂದ ಆಲೋಚನೆ ಮಾಡುವ ಮತ್ತು ಪರಿಣಾಮಕಾರಿಯಾಗಿ ತರಗತಿಯಲ್ಲಿ ಪಾಠ ಕಲಿಯುವ ಹಂತಕ್ಕೆ ಬೆಳಸುವುದಕ್ಕೆ ಒಂದು ಸಂಪರ್ಕ ಸೇತುವಾಗಿರುತ್ತದೆ. 
ಕೇಂದ್ರ ಸರ್ಕಾರದ ಸಚಿವ ಸಂಪುಟವು ೨೦ ಸೆಪ್ಟಂಬರ್ ೨೦೧೩ ರಲ್ಲಿ ರಾಷ್ಟ್ರೀಯ ಪುಟ್ಟ ಮಕ್ಕಳ ಪಾಲನೆ ಮತ್ತು ಶಿಕ್ಷಣ (National Early Childhood Care And Education (ECCE))(National Early Childhood Care And Education (ECCE)) ಕಾರ್ಯನೀತಿಯನ್ನು ಅನುಮೋದಿಸಿತು. ಮಗುವಿನ ಸಂಪೂರ್ಣ ಬೆಳವಣಿಗೆ ಮತ್ತು ಗುಣಾತ್ಮಕ ಶಿಕ್ಷಣದಲ್ಲಿ ಸಮಾನ ಅವಕಾಶ ಕಲ್ಪಿಸಲು ಸೂಕ್ತ ಸಿದ್ಧತೆಯಾಗಿ ಶಿಕ್ಷಣದಲ್ಲಿ ಮಾತೃ ಭಾಷೆಯನ್ನು ಕಡ್ಡಾಯಗೊಳಿಸಿತು. ಆರು ವರ್ಷದ ಒಳಗಿನ ಸುಮಾರು ೧೬೦ ದಶಲಕ್ಷ ಮಕ್ಕಳಲ್ಲಿ,  ಹಣ ನೀಡಬಲ್ಲ ತಂದೆತಾಯಿಯರ ೪೫ ದಶಲಕ್ಷ ಮಕ್ಕಳು ಖಾಸಗೀ ಶಿಕ್ಷಣ ಸಂಸ್ಥೆಯಡಿಯಲ್ಲಿ ಶಿಶುವಿಹಾರ ಶಿಕ್ಷಣ ಪಡೆಯುತ್ತಿದ್ದಾರೆ. ೭೫ ದಶಲಕ್ಷ ಮಕ್ಕಳು ರಾಷ್ಟ್ರೀಯ ಪುಟ್ಟ ಮಕ್ಕಳ ಪಾಲನೆ ಮತ್ತು ಶಿಕ್ಷಣ (National Early Childhood Care And Education (ECCE))ನೀತಿಯಡಿ ಸರಕಾರ ಯೋಜನೆಯಾದ ಮಕ್ಕಳ ಸಮಗ್ರ  ಬೆಳೆವಣಿಗೆ ಕಾರ್ಯಕ್ರಮದ  ಅಡಿ ಅಂಗನವಾಡಿಯಂತಹ ಸಂಸ್ಥೆಗಳಲ್ಲಿ  ಶಿಕ್ಷಣ ಪಡೆಯುತ್ತಿದ್ದಾರೆ. ಉಳಿದ ೪೦ ದಶಲಕ್ಷ ಮಕ್ಕಳಿಗೆ ರಾಷ್ಟ್ರೀಯ ಪುಟ್ಟ ಮಕ್ಕಳ ಪಾಲನೆ ಮತ್ತು ಶಿಕ್ಷಣ (National Early Childhood Care And Education (ECCE))ಅಡಿಯಲ್ಲಿ ಯಾವುದೇ ಅವಕಾಶಗಳು ದೊರೆಯುತ್ತಿಲ್ಲ. ಹೀಗೆ, ಪುಟ್ಟ ಮಕ್ಕಳಾಗಿರುವಾಗಲೇ ಮಾನವ ಸಂಪನ್ಮೂಲ ಮತ್ತು ಸಾಮರ್ಥ್ಯದ ಬೆಳವಣಿಗೆಯ ಅವಕಾಶ ಕಲ್ಪಿಸುವುದರಲ್ಲೇ ಅನ್ಯಾಯವಾದ ತಾರತಮ್ಯ ನಡೆಯುತ್ತಿದೆ. ಆಶಾದಾಯಕವೆಂದರೆ, ರಾಷ್ಟ್ರೀಯ ಪುಟ್ಟ ಮಕ್ಕಳ ಪಾಲನೆ ಮತ್ತು ಶಿಕ್ಷಣ (National Early Childhood Care And Education (ECCE))ರ ಕರಡು ನಿಯಮಾವಳಿಯು ಕನಿಷ್ಠ ಪ್ರಮಾಣದಲ್ಲಾದರೂ ಅಂಥ ತಾರತಮ್ಯವನ್ನು ಪರಿಣಾಮಕಾರಿಯಾಗಿ ಬಗೆಹರಿಸುವ ಸಾಧ್ಯತೆಗಳಿವೆ. ಕರಡು ಕಾರ್ಯನೀತಿಯ  ಕಲಂ ೫.೨.೪  ಹೇಳುವುದೇನೆಂದರೆ, (ECCE)  ಈ ಕಾರ್ಯಕ್ರಮದ ಅಡಿಯಲ್ಲಿ ಮಗುವಿನ ಮಾತೃ ಭಾಷೆ ಮತ್ತು ಮನೆಯ ಭಾಷೆ ಇಲ್ಲಿನ  ಸಂಭಾಷಣೆ ಮತ್ತು ಪರಸ್ಪರದ ಮಾತುಕತೆಯ ಪ್ರಾಥಮಿಕ ಭಾಷೆಯಾಗಿರುತ್ತದೆ. ಅಲ್ಲದೇ ಮಕ್ಕಳಿಗೆ ಈ ಪುಟ್ಟ ವಯಸ್ಸಿನಲ್ಲಿ ಅನೇಕ ಭಾಷೆಯನ್ನು ಕಲಿಯುವ ಸಾಮರ್ಥ್ಯವು ಇರುವುದನ್ನು ಗಮನದಲ್ಲಿಟ್ಟುಕೊಂಡು ; ರಾಷ್ಟ್ರೀಯ, ಪ್ರಾಂತೀಯ ಮತ್ತು ಇಂಗ್ಲೀಷ್ ಭಾಷೆಯ ಪರಿಚಯವನ್ನು ಮಾತುಕತೆಗಳ ಮೂಲಕ  ಅವರಿಗೆ ಒದಗಿಸುವ ಬಗ್ಗೆ ಸಹ ಆಲೋಚನೆ ನಡೆಸಲಾಗುವುದು.  ಆದ್ದುದರಿಂದ ರಾಷ್ಟ್ರೀಯ ಪುಟ್ಟ ಮಕ್ಕಳ ಪಾಲನೆ ಮತ್ತು ಶಿಕ್ಷಣ (National Early Childhood Care And Education (ECCE))ಕಾರ್ಯನೀತಿಯು ಮಕ್ಕಳಲ್ಲಿ ವಿಚಾರ ಶಕ್ತಿ, ತಾರ್ಕಿಕ ಶಕ್ತಿ ಮತ್ತು ವಿಷಯ ಗ್ರಹಣೆ ಮತ್ತು ಪಾಠಪ್ರವಚನ ಕಲಿಕೆಯ ಬೆಳವಣಿಗೆಯಲ್ಲಿ ಮಾತೃ ಭಾಷೆಯ ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಸ್ವೀಕರಿಸುತ್ತದೆ.
ಹೀಗೆಯೇ ಒಂದು ಸಿದ್ಧ ಸಂಶೋಧನೆಯ ಪ್ರಕಾರ ಅನೇಕ ಭಾಷೆ ಕಲಿತ ಮಕ್ಕಳು ಒಂದೇ ಭಾಷೆ ಕಲಿತ ಮಕ್ಕಳಿಗಿಂತ ಬುದ್ದಿವಂತಿಕೆಯಲ್ಲಿ ಮತ್ತು ಸೃಜನಾತ್ಮಕತೆಯಲ್ಲಿ ಮುಂದುವರಿದಿರುತ್ತಾರೆ ಎಂಬುದನ್ನೂ ಗುರುತಿಸುತ್ತದೆ. ಆದರೆ, ಇಲ್ಲಿ ಸಮಸ್ಯೆಯಿರುವುದು ಬಹುಭಾಷೆಯನ್ನು ಬಳೆಸುವುದರಲ್ಲಲ್ಲ; ಬದಲಿಗೆ ಪುಟ್ಟ ಮಕ್ಕಳ ಶಿಕ್ಷಣವನ್ನು ಮಾತೃ ಭಾಷೆಯ ಬದಲಿಗೆ ಅನ್ಯ-ಅಪರಿಚಿತ ಭಾಷೆಯಲ್ಲಿ ನೀಡುವುದು. 
ದುರದುಷ್ಟವಶಾತ್, ಆಧುನಿಕ ತಂದೆತಾಯಿಯರ ಸಮಸ್ಯೆಯೇನೆಂದರೆ, ತಂದೆ-ತಾಯಂದಿರು ಮಗುವಿಗೆ ಚಿಕ್ಕ ವಯಸ್ಸಿನಲ್ಲೇ ಇಂಗ್ಲೀಷನ್ನು ಪರಿಚಯಿಸುವುದಕ್ಕೆ ಅತಿ ಉತ್ಸುಕರಾಗಿರುವುದು. ಇಂಗ್ಲೀಷ್    ಭಾಷೆ ಅವರ ಪಾಲಿಗೆ ಅಧಿಕಾರ ಶಕ್ತಿಯಿರುವ ಭಾಷೆ, ಪ್ರಗತಿ ಮತ್ತು ಆರ್ಥಿಕ ಸದವಕಾಶಗಳಿಗೆ ಹೆಬ್ಬಾಗಿಲು. ಹೀಗಾಗಿ ಆದಷ್ಟು ಚಿಕ್ಕ ವಯಸ್ಸಿನಲ್ಲೇ ಮನೆಯ ವಾತವರಣದಲ್ಲಿಯೇ ಮತ್ತು ಶಾಲಾ ಶಿಕ್ಷಣದಲ್ಲಿ ಇಂಗ್ಲೀಷ ಶಿಕ್ಷಣವನ್ನು ತರಬೇಕೆನ್ನುವ ಗೀಳಿಗೆ ಬಲಿಯಾಗಿದ್ದಾರೆ. ಈ ಗೀಳು ಎಷ್ಟು ಅತಿರೇಕಕ್ಕೆ ಹೋಗಿದೆಯೆಂದರೆ ಪುರಾಣದ ಅಭಿಮನ್ಯು ತನ್ನ ತಾಯಿಯ ಗರ್ಭದಲ್ಲಿರುವಾಗಲೇ ಯುದ್ಧನೀತಿಯನ್ನು ಕಲಿತಂತೆ; ಮಗುವಿಗೆ ತನ್ನ ತಾಯಿಯ ಗರ್ಭದಲ್ಲಿರುವಾಗಲೇ ಇಂಗ್ಲೀಷ ಭಾಷೆಯಲ್ಲಿ ಶಿಕ್ಷಣವನ್ನು ನಾವು ನೀಡುತ್ತೇವೆಂದು ಯಾರಾದರೂ ಜಾಹಿರಾತು ಹಾಕಿದರೆ ತಾಯಂದಿರು ಕ್ಯೂ ನಿಂತರೂ ನಿಂತರೇ. ಇಂಗ್ಲೀಷನ ಮೇಲಿರುವ  ಈ ಅತಿಯಾದ ವ್ಯಾಮೋಹ ಅಸಮಂಜಸ ಮತ್ತು ಆಧಾರಹೀನ ಅಂಶವಾಗಿದೆ. ಗುಣಾತ್ಮಕ ಶಿಕ್ಷಣ ನೀಡುವುದಕ್ಕೆ ಮತ್ತು ಇಂಗ್ಲೀಷ್ ಸೇರಿದಂತೆ ಇತರ ಅನ್ಯ ಭಾಷೆಯನ್ನು ಕಲಿಯುವುದಕ್ಕೆ ಮಾತೃಭಾಷೆಯು ರಾಜಮಾರ್ಗವಿದ್ದಂತೆ ಎಂಬ ಶೈಕ್ಷಣಿಕ ತತ್ವಕ್ಕೆ ತದ್ವಿರುದ್ಧವಾಗಿದೆ. ಆಧುನಿಕ ಅಭಿಮನ್ಯುಗಳಿಗೆ ಎಳೆಯ ವಯಸ್ಸಿನಲ್ಲೇ ಇಂಗ್ಲೀಷಿನ ಅಗತ್ಯವಿಲ್ಲ. ಅವರಿಗೆ ಬೇಕಾಗಿರುವುದು ಒಳ್ಳೆಯ ಲಾಲನೆ ಪಾಲನೆ, ಸಂಸ್ಕೃತಿ ಮತ್ತು ಮಾತೃಭಾಷಾಧಾರಿತ ಉತ್ತಮ ಗುಣಮಟ್ಟದ ಶಿಕ್ಷಣ ಮಾತ್ರ.
ಅಜಿತ್ ಮೊಹಿಂತೆ

5.ಬಹುಮಾನಗಳು ಅಥವಾ ಶಿಕ್ಷೆ ಇಲ್ಲದೆ ನಿಮ್ಮ ಮಕ್ಕಳಲ್ಲಿ ಶಿಸ್ತು ಬೆಳಸುವುದು ಹೇಗೆ?



ಶಿಸ್ತು ಮಕ್ಕಳಿಗೆ ಅವಶ್ಯಕ, ಆದರೆ ನಾವು ಅವರಿಗೆ ಮನೋನಿಗ್ರಹ ವನ್ನು ಕಲಿಸಬೇಕೆ ಹೊರತು ಪುಸಲಾಯಿಸಿ ಅದೂ ಇದೂ ಕೊಟ್ಟು ಒಳ್ಳೆಯ ನಡತೆ ಕಲಿಸಲು ಹೋಗ ಬಾರದು.
EmilianoCC BY-SA

 ಅನೇಕ ಹೆತ್ತವರು ಶಾಂತಿ ಸಮಾಧಾನದಿಂದ ಮಕ್ಕಳಿಗೆ ಒಳ್ಳೆಯ ನಡತೆಯನ್ನು  ಕಲಿಸಲು  ಇಚ್ಛಿಸುತ್ತಿದ್ದಾರೆ ಇಲ್ಲಿ ಅವರು ಮಕ್ಕಳನ್ನು ಉತ್ತಮ ನಡವಳಿಕೆಗೆ ಪ್ರೋತ್ಸಾಹಿಸಲು  ("ಲಂಚ" ಸ್ಟಿಕ್ಕರ್ , ಮಿಠಾಯಿ, ಚಾಕೊಲೇಟ್, ಟಿವಿ ನೋಡಲು ಅವಕಾಶ ) ಮುಂತಾದ ಬಹುಮಾನ ಕೊಡದೆ) ಮತ್ತು (ಹೊಡೆಯುವುದು,ಕೊಡುತ್ತಿದ್ದ ವಿಶೇಷ ಪುರಸ್ಕಾರ ನಿಲ್ಲಿಸುವುದು ಹೊರಗೆ ಆಡಿಕೊಳ್ಳಲು ಬಿಡದೇ ಇರುವುದು ಮುಂತಾದ ಶಿಕ್ಷೆ ನೀಡದೆ) ಸರಿಯಾದ ನಡವಳಿಕೆ ಒಳ್ಳೆಯದು ಎಂದು ಮನವರಿಕೆ ಮಾಡಿಸಿ ಮಕ್ಕಳಿಗೆ ಉತ್ತಮ ನಡವಳಿಕೆ ಕಲಿಸುತ್ತಾರೆ
ಶಾಂತಿ ಸಮಾಧಾನ ಪೋಷಕರು ಮಕ್ಕಳಿಗೆ ಈ ರೀತಿ ಬಹುಮಾನ  ಮತ್ತು ಶಿಕ್ಷೆನೀಡುವುದು ಸರಿಯಾದ ನಡವಳಿಕೆ ಕಡೆಗೆ ಮಗುವು ಸಹಜವಾಗಿ ಒಗ್ಗಿಕೊಂಡು ವರ್ತಿಸುವುದನ್ನು ತಪ್ಪಿಸುತ್ತದೆ ಮತ್ತು ಬಹುಮಾನದ  ಆಸೆಯಿಂದ, ಅಥವಾ ಶಿಕ್ಷೆಯನ್ನು ತಪ್ಪಿಸಿಕೊಳ‍್ಳಲು ಕೆಲವು ಸಲ ಉತ್ತಮವಾಗಿ  ವರ್ತಿಸುತ್ತಾರೆ ಅಷ್ಟೆ ಎಂದು ವಾದಿಸುತ್ತಾರೆ.
ಶಿಸ್ತು ಎಂದರೇನು?
ಬಹಳಷ್ಟು ಜನರು ಬಹುಮಾನ ಮತ್ತು ಶಿಕ್ಷೆಯನ್ನು ಕೊಡದೆ ಶಿಸ್ತು ತರುವುದು ಅಸಾಧ್ಯ ಎಂದು ಭಾವಿಸುತ್ತಾರೆ. ಆದಾಗ್ಯೂ, ಇದೆಲ್ಲಾ "ಶಿಸ್ತು"ಎಂಬುದರ ಬಗ್ಗೆ ನಿಮ್ಮ ತಿಳುವಳಿಕೆಯನ್ನು ಅವಲಂಬಿಸಿರುತ್ತದೆ. 
ಶಿಸ್ತು ಎಂದು ಹೇಳಿದಾಗ "ಸ್ವಯಂಶಿಸ್ತು"ಎಂದರ್ಥ.ಇಲ್ಲಿ ನಿಮ್ಮನ್ನು ನೀವು ನಿಯಂತ್ರಿಸುಕೊಳ್ಳುವುದೇ ಮುಖ್ಯ.
ಆದ್ದರಿಂದ, ಪೋಷಕರ ಸಂದರ್ಭದಲ್ಲಿ, ಇದು ಮಕ್ಕಳು ತಮ್ಮನ್ನು, ತಮ್ಮ ಭಾವನೆಗಳನ್ನು, ತಮ್ಮನಡವಳಿಕೆ ಮತ್ತು ತಮ್ಮ ತಿಕ್ಕಲುತನವನ್ನು ನಿರ್ವಹಿಸಿ ವರ್ತಿಸಲು ಕಲಿಯುವುದಕ್ಕೆ ಸಹಾಯ ಮಾಡುವುದು. ನಾವು ನಮ್ಮ ಮಕ್ಕಳು ಒಂದು ಸರಿಯಾದ  ನೈತಿಕ ದಿಕ್ಸೂಚಿಯನ್ನು ಬೆಳೆಸಿಕೊಳ್ಳಬೇಕೆಂದು ಆಶಿಸುತ್ತೇವೆ. "ಇದು ಸೂಕ್ತ" ಮತ್ತು "ಇದು ಅನುಚಿತ" ಎಂದು  ನಡವಳಿಕೆಗಳನ್ನು, ಪ್ರಚೋದನೆಗಳು ಮತ್ತು ಭಾವನೆಗಳನ್ನು ವಿಂಗಡಿಸಲು ಮತ್ತು ತಮ್ಮ ಆಯ್ಕೆಗಳನ್ನು ಬಗ್ಗೆ ನಿರ್ಣಯಗಳನ್ನು ಸಮರ್ಥಿಸಿಕೊಳ್ಳಲು ಸಮರ್ಥರಾಗಬೇಕು ಎಂದು ಬಯಸುತ್ತೇವೆ.
 ಶಿಸ್ತು 
ಪದವನ್ನು ಬಳಸಿದಾಗ, ಇದು ಶಿಕ್ಷೆಯನ್ನು ಸೂಚಿಸುತ್ತದೆ. ಏಕೆ ಈ ಅರ್ಥ ಬರುತ್ತದೆಂದರೆ  ಶಿಸ್ತು ಎಂಬ ಮಾನವ ತಿಳಿವಳಿಕೆಯು ವರ್ತನಾವಾದ (behaviourist   ದೃಷ್ಟಿಕೋನವನ್ನು ಹೊಂದಿದೆ. ಏಕೆಂದರೆ ಈ ಅರ್ಥವನ್ನು ಸೂಚಿಸುತ್ತದೆ.ವರ್ತನಾವಾದವು(Behaviourism)ವರ್ತನೆಯ ಅಧ್ಯಯನ , ಕಲಿಕೆ ಕೇವಲ ಪಾವ್ಲೋವ್ ನಾಯಿ ಪ್ರಯೋಗದಲ್ಲಿದ್ದಂತೆ (Pavlov’s dog experiment)ರೀತಿಯ ವರ್ತನೆ ನಿಯಂತ್ರಣ ಮತ್ತು ಒಳ್ಳೆಯ ಅಥವಾ ಕೆಟ್ಟ ಫಲಿತಾಂಶದ ನಡುವಿನ ಸಂಬಂಧವನ್ನು ಕುರಿತ ಪ್ರಕ್ರಿಯೆಯಾಗಿದೆ.
ಮಾನವ ವರ್ತನೆಯನ್ನು ಸರಳ ಬಹುಮಾನ / ಶಿಕ್ಷೆಗಳ ಮಾದರಿ ಸೂಚಿಸುವುದಕ್ಕಿಂತ ಸಂಕೀರ್ಣವಾದುದು  ಹಾಗಾಗಿ ವರ್ತನೆವಾದವನ್ನು  ಕಡಿಮೆ ಬಳಸಲಾಗುತ್ತದೆ(behaviourism is used less and less)ಜನರು ಮಾತ್ರ ಪ್ರತಿಫಲಗಳನ್ನು ಪಡೆದು ಅಥವಾ ಶಿಕ್ಷೆಯನ್ನು ಕಡಿಮೆ ಮಾಡಿಕೊಳ್ಳುವುದರಿಂದ(
secure rewards or minimise punishments.) ಅಪೇಕ್ಷಣೀಯವಲ್ಲ .
ಅವರು ಏನೋ ದೊರಕುತ್ತದೆ ಅಥವಾ ಸಿಕ್ಕಿಹಾಕಿಕೊಂಡರೆ ತೊಂದರೆಗೆ ಸಿಲುಕುತ್ತಾರೆ ಎಂಬುದಕ್ಕಾಗಿ ಮಾತ್ರವೇ  ನಮ್ಮ ಮಕ್ಕಳು ಅಪೇಕ್ಷಣೀಯ  ರೀತಿಯಲ್ಲಿ ವರ್ತಿಸ ಬೇಕೆಂದು ನಾವು ಬಯಸುವುದಿಲ್ಲ. ನಾವು ಒಂದು ನಡವಳಿಕೆ ಅವರು ಅದನ್ನು ಸರಿಯಾದದ್ದು ಎಂದು  ತಿಳಿದಿರುವ ಕಾರಣ ನಮ್ಮ ಮಕ್ಕಳು ಸರಿಯಾದದ್ದನ್ನೇ ಮಾಡಲು  ವಿಷಯವನ್ನು ಬಯಸುವ, ಕಾರಣ ಸರಿಯಾಗಿ ನಡೆದುಕೊಳ್ಳಬೇಕೆಂದು ಬಯಸುತ್ತೇವೆ.
 
ಬಾಹ್ಯವಾಗಿ ಅಲ್ಲದೆ ಆಂತರಿಕವಾಗಿ ಮಕ್ಕಳನ್ನು ಪ್ರೇರೇಪಿಸುವುದು
ವರ್ತನೆಯ ಅಧ್ಯಯನವು ಅಪೇಕ್ಷಣೀಯ ಮಾರ್ಗದಲ್ಲಿ ವರ್ತಿಸಲು ಮಕ್ಕಳು ಬಾಹ್ಯ ಪ್ರೇರಣೆಗಳನ್ನು ಹುಡುಕಬೇಕೆಂದು  ಕಲಿಸುತ್ತದೆ. ಇದು ಬಹುಮಾನ ಮತ್ತು ಶಿಕ್ಷೆಯನ್ನು ಬಯಸುವುದು ಅವರು ತಮ್ಮ ಸಹಜ ಆಭಿಲಾಷೆಯನ್ನುಅವಲಂಭಿಸದೆ ಬಾಹ್ಯ ಪ್ರೇರಣೆ ಬಯಸುವುದರಿಂದ  ಅದೇ ಮೇಲುಗೈ ಪಡೆಯುತ್ತದೆ ಎಂದು ಹೇಳುತ್ತಾರೆ.
ಕೆಲಸದ ಸ್ಥಳಗಳ ಸಂಶೋಧನೆ ಪ್ರಕಾರ ಅವರು ಬಾಹ್ಯ ಪ್ರೇರೇಪಣೆ  ನೀಡಿದಾಗ  ಮಾಡಿದಾಗ ಜನರು ಉತ್ತಮ ಪ್ರದರ್ಶನ ನೀಡಲಿಲ್ಲ ಎಂದು ತೋರಿಸಿದೆ.  ಅಚ್ಚರಿಯೆಂದರೆ, ಹಣ, ಒಂದು ಉತ್ತಮ ಹುದ್ದೆ, ಉತ್ತಮ ಪ್ರಶಸ್ತಿ ಅಥವಾ ಪ್ರಮಾಣಪತ್ರಗಳನ್ನು ಒಳಗೊಂಡಿದ್ದಾಗಲೂ ಈ ಪ್ರೇರೇಪಣೆ ಪ್ರಯೋಜನವಾಗಲಿಲ್ಲ.
ಕೆಲಸದ ಸ್ಥಳಗಳ ಸಂಶೋಧನೆ ಪ್ರಕಾರ 
ಜನರು ಸಂತೋಷವನ್ನು ಅನುಭವಿಸುತ್ತಿದ್ದಾಗ ಮಾತ್ರ ತಮ್ಮ ಕಾರ್ಯಸ್ಥಾನಗಳಲ್ಲಿ ಅಪೇಕ್ಷಿತ ರೀತಿಯಲ್ಲಿ ವರ್ತಿಸುತ್ತಾರೆ. ಜನರು ತಾವು ಮೌಲ್ಯಯುತ ಎಂದು ಭಾವಿಸಿದರೆ ಮಾತ್ರ ತಮ್ಮ ಕಾರ್ಯಸ್ಥಾನಗಳಲ್ಲಿ ಸಂತೋಷವಾಗಿರುತ್ತಾರೆ ಮತ್ತು ಅವರು ತಮ್ಮ ಜೀವನದ ಮೇಲೆ ನಿಯಂತ್ರಣ ಇದ್ದಾಗ ಮಾತ್ರ  ಅವರು ತಾವು ಮೌಲ್ಯಯುತ ಎಂದು ಭಾವಿಸುತ್ತಾರೆ.
ಜೀವನದ ಮೇಲೆ ನಿಯಂತ್ರಣವನ್ನು ಪ್ರೇರಣಾ ಸಾಧನ ಎಂದು ಕರೆಯಲಾಗುತ್ತದೆ. ಸಂಶೋಧನೆಯಲ್ಲಿ ಹೆಚ್ಚು ಪ್ರೇರಣಾ ಸಾಧನ ಹೊಂದಿರುವ ಜನರು ಸಂತೋಷದಿಂದಿರುತ್ತಾರೆ  ಮತ್ತು ಹೆಚ್ಚು ಉತ್ಪಾದಕ ರಾಗಿರುತ್ತಾರೆ.
ಹಾಗೆಯೇ, ಮಕ್ಕಳಲ್ಲೂ ಈ ಪ್ರೇರಣಾಶಕ್ತಿಯೆಂದರೆ ಅವರು ತಮ್ಮ ಬಗ್ಗೆ ನಿಯಂತ್ರಣ ಹೊಂದುವ ಸಾಮರ್ಥ್ಯ. ನಾವು ಅದರ ಬಗ್ಗೆ ಯೋಚಿಸಿದರೆ, ಮಕ್ಕಳು ತಮ್ಮ ಜೀವನದ ಮೇಲೆ ಬಹಳ ಕಡಿಮೆ ನಿಯಂತ್ರಣ ಹೊಂದಿರುತ್ತಾರೆ. ಅವರ ತಂದೆತಾಯಿಗಳು ಅಥವಾ ಪೋಷಕರು ಇಡೀ ದಿನದಲ್ಲಿ ಬಹಳಷ್ಟು ವಿಷಯವನ್ನು ನಿರ್ಧರಿಸುತ್ತಾರೆ - ಏನು ತಿನ್ನಬೇಕು,ಏನು ಧರಿಸ ಬೇಕು ಯಾವಾಗ ಹೊರ ಹೋಗಬೇಕು ಯಾವಾಗ ಜೊತೆಯಲ್ಲಿ  ಉಳಿಯ ಬೇಕು ಯಾವಾಗ ಅವರು ಚಿಕ್ಕನಿದ್ರೆ ಮಾಡಬೇಕು ಅವರು  ಬಗ್ಗೆ ಎಲ್ಲವನ್ನೂ ನಿರ್ಧರಿಸುತ್ತಾರೆ.
ಮಕ್ಕಳ  ಸುರಕ್ಷತೆ ಬಗ್ಗೆ ಕಾಳಜಿ ಇರಬೇಕು ನಿಜ, 
ಅವರ ಜೀವನದ ಬಗ್ಗೆ ತಕ್ಕ ಪ್ರೇರಣೆ ಪಡೆಯಲು ಅವರಿಗೆ ಸ್ವಲ್ಪ ಅವಕಾಶ ನೀಡಬೇಕು. ಇದರ  ಪರಿಣಾಮ ಏನೆಂದರೆ ತಮ್ಮ ಬಗ್ಗೆ ಹೆಚ್ಚು ನಿಯಂತ್ರಣ ಹೊಂದಿ ಎಲ್ಲರಿಗೂ ಸಂತೋಷ ನೀಡುವ ತಾವೂ   ಸಂತೋಷದಿಂದಿರುವ  ಮಕ್ಕಳು ದೊರೆಯುತ್ತಾರೆ.
ಹಾಗೆಂದರೆ ನಾವು ಮಕ್ಕಳಿಗೆ ಸ್ವೇಚ್ಛೆ ನೀಡಕೂಡದು, ಇದು ಅಪಾಯಕರ ಸಂಗತಿ!
ನೀವು ಬಹುಶಃ ಇದನ್ನು ಓದುತ್ತಾ ಓದುತ್ತಾ ಅಯ್ಯಯ್ಯೋ ಮಕ್ಕಳನ್ನು  ನಂಬಲು ಸಾಧ್ಯವೇ? ಮುಕ್ತವಾಗಿ ಬಿಡಲು ಸಾಧ್ಯವೇ? ಚಾಕು ಮುಟ್ತಾರೆ,ಬೆಂಕಿ ಹಚ್ಚಿಕೊಳ್ಳುತ್ತಾರೆ ನಾಯಿ ಹತ್ತಿರ ಹೋಗ್ತಾರೆ ಮನೆಯಲ್ಲಿ ಗ್ಯಾಸ್ ಬಿರಡೆ ಜೊತೆ ಆಡುತ್ತಾರೆ ಅಥವಾ ರಸ್ತೆಗೆ ಓಡಿಬಿಡುತ್ತಾರೆ ಭಯಾನಕ, ಆಲೋಚನೆ ಮಾಡುತ್ತೀರಿ.
ಮಕ್ಕಳಿಗೆ ಮಿತಿ ಇರಬೇಕು. ಯಾವುದು ಸುರಕ್ಷಿತ (ತಮ್ಮ ಮನೆ ಅಂಗಳದಲ್ಲಿ ಆಡುವಸುರಕ್ಷತೆ ) ಮತ್ತು ಏನು ಅಸುರಕ್ಷಿತ (ಚಾಕುಗಳು, ಸ್ಟೌವ್ಗಳು, ರಸ್ತೆಗಳು, ನಾಯಿ ಬೆಂಕಿ ಜೊತೆ ಆಟ) ಏನನ್ನು ತಿಳಿಯಬೇಕು. ಅವರು ಮಗುವಿಗೆ ಇದು ಎಂದು  ಹೇಳುವುದು ಅವರನ್ನು ಶಿಕ್ಷಿಸಿದಂತೆ  ಅಲ್ಲ. ಅದರ ಬದಲಿಗೆ, ನೀವು ಈ ಕ್ರಮಗಳನ್ನು ಅನುಸರಿಸಬಹುದು:
   1. 
ವರ್ತನೆಯನ್ನು ನಿಲ್ಲಿಸಿ. ಮಗು ರಸ್ತೆ ಕಡೆಗೆ ಓಡಲಿದೆ ಆಗ ಮಗುವನ್ನು ಹಿಡಿದೆತ್ತಿಕೊಂಡು ತಡೆಯಬೇಕು. 
ಮಗು ನಾಯಿ ನೋಯಿಸುವುದನ್ನು ತಡೆಯ ಬೇಕು ಕೈ ಹಿಡಿದು ಅದರಲ್ಲಿ ಕೋಲು ಏನಾದರೂ ಇದ್ದರೆ ಬಿಡಿಸಿ ತೆಗೆಯಬೇಕು.  ಮಗು ಹಾಟ್ ಪ್ಲೇಟ್ ಮುಟ್ಟಲು ಹೋದರೆ ಅದನ್ನು ದೂರ ಕೈಗೆಟುಕದಂತೆ ಇಡಿ.  ಅವರು ಅಸಭ್ಯವಾಗಿ  ಒರಟಾಗಿ ನಡೆದುಕೊಂಡರೆ ನೀವು ಅದನ್ನೂ ತಡೆಯ ಬೇಕು .
  2.  ಈ ರೀತಿ ಹೇಳಿ "[ಹಾಗೆ  ಮಾಡುವುದು] ಸುರಕ್ಷಿತವಲ್ಲ, ನಾನು  ಹಾಗೆ ಮಾಡಲು ಅವಕಾಶ ನೀಡುವುದಿಲ್ಲ". ರಸ್ತೆಗೆ ಓಡುವುದನ್ನೇ ಉದಾಹರಣೆಗೆ ತೆಗೆದುಕೊಳ್ಳಿ ಮೇಲೆ ಚಾಲನೆಯಲ್ಲಿರುವ ಬಳಸಲು, ನೀವು ರಸ್ತೆಗೆ ಓಡುವುದು ಅಪಾಯಕಾರಿ  ನಿನಗೆ ರಸ್ತೆಗೆ ಹೋಗಿ ಓಡಲು ಬಿಡುವುದಿಲ್ಲ " ಮಗು ಒರಟಾಗಿ ನಡೆದುಕೊಂಡರೆ  ನಾನು   ನನಗೆ  / ನಿನ್ನ ಸಹೋದರ / ಇನ್ಯಾರಿಗೋ ನೋವುಂಟು ಮಾಡಲು ಅವಕಾಶ ನೀಡುವುದಿಲ್ಲ "ಎಂದು ಹೇಳಿ 
  3.ಅವರು, ಅಳಬಹುದು. ಅದಕ್ಕೂ ಸಿದ್ಧರಾಗಿರಿ ಅಳಲಿ ಬಿಡಿ ನಾನು ಒಂದು ವೇಳೆ ಗಾಡಿ ವೇಗವಾಗಿ ಓಡಿಸಿದ್ದಕ್ಕೆ ಟಿಕೆಟ್ ಪಡೆದರೆ ನನಗೂ ಅಳು ಬರುತ್ತದೆ  ಆದರೆ ಅಪರಾಧ ದಾಖಲಾಗುವುದೇನೂ ನಿಲ್ಲುವುದಿಲ್ಲವಲ್ಲ.  
4.ಅವರು ಅತ್ತೂ ಕರೆದರೆ , ಅವರನ್ನು ಕೇಳಲು ಮತ್ತು ಅವರೇನು ಹೇಳುತ್ತಾರೋ  ಸಮಾಧಾನದಿಂದ ಕೇಳಿ  ಅವರ ಕಷ್ಟ ಏನೆಂದು ವಿಚಾರಿಸಿದ್ದು ಅವರಿಗೆ ಸಮಾಧಾನ ತರುತ್ತದೆ.
5. ಸುರಕ್ಷತೆ ಕಾಳಜಿಯಿಂದ ಅವರು ಮುನ್ನುಗ್ಗಿ ಪರಿಶೀಲಿಸುವುದನ್ನು ನೀವು ತಡೆದಿದ್ದಿರಿ. ಹೀಗೆ ಹೇಳಿ ,ನಾನು ತಡೆದದ್ದು ನಿನಗೆ ಬೇಜಾರು ತಂದಿದೆ " ಹಾಟ್ಪ್ಲೇಟ್  ಸಂದರ್ಭದಲ್ಲಿ   ನನಗೆ ಹಾಟ್ಪ್ಲೇಟ್ ನೋಡಬೇಕು ಅಂತಾ ಇತ್ತಲ್ವ ಆದರೆ ಅದು ಸುಡುತ್ತದೆ ಆದ್ದರಿಂದ  ಅದನ್ನು ಮುಟ್ಟಲು ಸಾಧ್ಯವಿಲ್ಲ.  ಅವರು ಒರಟಾಗಿ ನಡೆದುಕೊಂಡರೆ  ನೀನೇನೂ ನೋಯಿಸಬೇಕು ಅಂತಿಲ್ಲ ಆದರೆ ಹಾಗೆ ಮಾತನಾಡಿದರೆ ಬೇರೆಯವರಿಗೆ ನೋವಾಗುತ್ತದೆ ಎಂದು ತಿಳಿಸಬೇಕು.
ನಾವು ನಮ್ಮ ಮಕ್ಕಳಿಗೆ ಶಿಸ್ತು ಕಲಿಯಲು  ಸಹಾಯ ಮಾಡಬೇಕಾದ ಅಗತ್ಯವಿದೆ, ಆದರೆ ನಾವು ಅವರ ಸ್ವಾಭಿಮಾನಕ್ಕೆ ಅವರ ಪ್ರೇರಣೆ ಶಕ್ತಿಗೆ ಧಕ್ಕೆ ಬಾರದಂತೆ   ಮಾಡಬಹುದು. ಇದು ಜೀವನದ ಸುವರ್ಣ ನಿಯಮ   "ನಾನು ನನ್ನ ಮಗುವಿನ ಸ್ಥಾನದಲ್ಲಿ ಇದ್ದಲ್ಲಿ  ನನ್ನನ್ನು ಹೇಗೆ ನಡೆಸಿಕೊಳ್ಳಬೇಕೆಂದು ಬಯಸುತ್ತೇನೆ?"ಎಂಬುದನ್ನು ಪರ್ಯಾಲೋಚಿಸಿ ಮಾತನಾಡಬೇಕು.

No comments:

Post a Comment