Sunday, July 26, 2020

ಕಾರ್ಗಿಲ್ ವಿಜಯೋತ್ಸವ

🇮🇳🇮🇳 *ಇಂದು ಕಾರ್ಗಿಲ್ ವಿಜಯೋತ್ಸವ ದಿನ* 🇮🇳🇮🇳
       
💐                 💐

▪. (ಜುಲೈ 26) ಕಾರ್ಗಿಲ್ ವಿಜಯ ದಿವಸ. 1999 ರಲ್ಲಿ ಭಾರತ-ಪಾಕಿಸ್ತಾನದ ನಡುವೆ ನಡೆದ ಯುದ್ಧದಲ್ಲಿ ಭಾರತ ದಿಗ್ವಿಜಯ ಸಾಧಿಸಿದ ದಿನ ಇದು. 1999 ರ ಮೇ ತಿಂಗಳಿನಿಂದ ಜುಲೈವರೆಗೆ ಸುಮಾರು 60 ದಿನಗಳ ಕಾಲ ನಡೆದ ಯುದ್ಧದಲ್ಲಿ ಭಾರತದ 527 ಸೈನಿಕರು ಹತರಾಗಿದ್ದರು .

▪ ಪಾಕಿಸ್ತಾನ ತನ್ನ 357 ಸೈನಿಕರು ಹತರಾಗಿದ್ದರೆಂದು ವರದಿ ನೀಡಿದ್ದರೂ, ಇದು ಸುಳ್ಳು ಎಂದು ಭಾರತ ತಳ್ಳಿಹಾಕಿತ್ತು. ಏಕೆಂದರೆ ಭಾರತೀಯ ಸೈನಿಕರೇ ಹೇಳುವ ಪ್ರಕಾರ ಪಾಕಿಸ್ತಾನದ ಕನಿಷ್ಠ1 ಸಾವಿರ ಸೈನಿಕರು ಈ ಯುದ್ಧದಲ್ಲಿ ಹತರಾಗಿದ್ದರು.

▪.. ಜಮ್ಮು ಕಾಶ್ಮೀರದ ಲಡಾಕ್ ಜಿಲ್ಲೆಯಲ್ಲಿರುವ ಕಾರ್ಗಿಲ್ ನಲ್ಲಿ ಅಕ್ರಮವಾಗಿ ನುಸುಳಿದ್ದ ಪಾಕಿಸ್ತಾನಿ ಸೇನೆಯನ್ನು ಬಗ್ಗುಬಡಿಯಯವ ಕಾರ್ಯಾಚರಣೆಗೆ ಭಾರತ ಇಟ್ಟಿದ್ದ ಹೆಸರು 'ಆಪರೇಶನ್ ವಿಜಯ'. ಅದಕ್ಕೆಂದೇ ಈ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಿದ ದಿನವಾದ ಜುಲೈ 26 ಅನ್ನು ಕಾರ್ಗಿಲ್ ವಿಜಯ ದಿವಸ ಎಂದು ಕರೆಯಲಾಗುತ್ತದೆ.

▪.. ಜುಲೈ 26, 1999, ಪಾಕಿಸ್ತಾನದೊಂದಿಗೆ ಕಾರ್ಗಿಲ್ ಸಂಘರ್ಷದಲ್ಲಿ ಭಾರತವು ಅದ್ಭುತ ಗೆಲುವು ಸಾಧಿಸಿತು.

▪.. 1999 ರಿಂದ, ಪ್ರತಿ ವರ್ಷ, ಜುಲೈ 26 ರನ್ನು "ಕಾರ್ಗಿಲ್ ವಿಜಯ್ ದಿವಸ್" ಎಂದು ಆಚರಿಸಲಾಗುತ್ತದೆ. ಯುದ್ಧದಲ್ಲಿ ಭಾರತವು ಜಯವನ್ನು ನೆನಪಿಗೆ ತರುತ್ತದೆ ಮತ್ತು ಭಾರತೀಯ ಸೈನಿಕ ಯೋಧರು ಮಾಡಿದ ತ್ಯಾಗವನ್ನು ನೆನಪಿಸಿಕೊಳ್ಳುತ್ತಾರೆ.

ನಮ್ಮ ಸೇನೆ ನಮ್ಮ ಹೆಮ್ಮೆ.

No comments:

Post a Comment