ಜಪಾನ್ ದೇಶದಲ್ಲಿ ಕಾಮಿ- ಶಿರಾತಾಕಿ ಎಂಬ ಹೆಸರಿನ ರೇಲ್ವೆ ಸ್ಟೇಷನ್ ಇದೆ.ಈ ರೇಲ್ವೆ ನಿಲ್ದಾಣ ಹೆಚ್ಚು ಕಡಿಮೆ ಬಂದ ಆಗಿದೆ ಎನ್ನಬಹುದು.ಕಾರಣ ಈ ಊರು ಜಪಾನಿನ ಅತ್ಯಂತ ದೂರದ ಭಾಗದಲ್ಲಿ ಇರುವುದರಿಂದ ಹೋಗಿ ಬರುವ ಪ್ರಯಾಣಿಕರ ಸಂಖ್ಯೆಯು ಕೂಡ ಅತ್ಯಂತ ವಿರಳವಾಗಿದೆ.ಆದ್ದರಿಂದ ಜಪಾನ್ ದೇಶವು ಈ ಮಾರ್ಗದಲ್ಲಿಯ ಎಲ್ಲ ರೇಲ್ವೆಗಳ ಓಡಾಟವವನ್ನು ಕೂಡ ಸ್ಥಗಿತಗೊಳಿಸಲು ನಿರ್ಧರಿಸಿತ್ತು.ಆದರೆ ಈ ಸಂದರ್ಭದಲ್ಲಿ ಒಂದು ವಿಷಯ ತಿಳಿಯಿತು....ಕಾನಾ ಹಾರಡಾ ಎಂಬ ಹೆಸರಿನ ಚಿಕ್ಕ ಹುಡುಗಿಯು ಈ ಕಾಮಿ-ಶಿರಾತಾಕಿ ಎಂಬ ರೇಲ್ವೆ ನಿಲ್ದಾಣದಿಂದ ಓಡಾಡುವ ರೇಲ್ವೆಯಿಂದ ದಿನಾಲೂ ಶಾಲೆಗೆ ಹೋಗುವಳೆಂದು.ಸಹಜವಾಗಿ ಒಬ್ಬಳೇ ಪ್ರಯಾಣಿಕಳ ಸಲುವಾಗಿ ರೇಲ್ವೆ ಓಡಿಸುವದೆಂದರೆ ಜಪಾನಿನ ರೇಲ್ವೆ ಇಲಾಖೆಗೆ ಆರ್ಥಿಕವಾಗಿ ಹೊರೆಯಾಗುತ್ತಿತ್ತು.ಆದರೆ ಈ ರೇಲ್ವೆ ಮಾರ್ಗದಲ್ಲಿ ಓಡುವ ರೇಲ್ವೆಯನ್ನು ಬಂದ ಮಾಡಿದರೆ, ಕಾನಾ ಹಾರಡಾ ಈ ಹುಡುಗಿಯು ಶಿಕ್ಷಣದಿಂದ ವಂಚಿತಳಾಗುವಳು ಎಂಬುದು ಜಪಾನ್ ಸರ್ಕಾರದ ಗಮನಕ್ಕೆ ಬಂದಿತು. ಆ ಸಂದರ್ಭದಲ್ಲಿ ಎಲ್ಲಿಯವರೆಗೆ ಕಾನಾ ಹಾರಡಾಳ ಶಿಕ್ಷಣ ಪೂರ್ಣಗೊಳ್ಳುವುದಿಲ್ಲವೋ,ಅಲ್ಲಿಯವರೆಗೆ ಈ ಕಾಮಿ ಶಿರಾತಾಕಿ ಮಾರ್ಗದ ರೇಲ್ವೆ ಬಂದ ಮಾಡುವುದಿಲ್ಲ ಎಂಬ ಮಹತ್ವಪೂರ್ಣ ನಿರ್ಣಯ ಜಪಾನ್ ಸರಕಾರವು ತೆಗೆದುಕೊಂಡಿತು.ಅದಲ್ಲದೇ ಅವಳ ಸಲುವಾಗಿ ಅವಳ ಶಾಲಾ ವೇಳೆಯ ತಕ್ಕಂತೆ ಆ ಮಾರ್ಗದ ರೇಲ್ವೆಯ ವೇಳಾಪಟ್ಟಿ ತಯಾರಿಸಲಾಯಿತು.ಯಾವಾಗ 2016 ರಲ್ಲಿ ಕಾನಾ ಹಾರಡಾಳ ಶಿಕ್ಷಣ ಪೂರ್ಣವಾದ ನಂತರ ಆ ಮಾರ್ಗದಲ್ಲಿ ಓಡುವ ರೇಲ್ವೆಯನ್ನು ಬಂದ ಮಾಡಲಾಯಿತು.ಕೇವಲ ಒಬ್ಬಳೇ ಹೆಣ್ಣುಮಗಳ ಶಿಕ್ಷಣದ ಸಲುವಾಗಿ ಜಪಾನ್ ಸರಕಾರವು ತೆಗೆದುಕೊಂಡು ಕಾಳಜಿ ನಿಜಕ್ಕೂ ಶ್ಲಾಘನೀಯವಾದುದು..ಆದರೆ ಮಹಾರಾಷ್ಟ್ರ ಸರಕಾರವು 20 ಕ್ಕಿಂತ ಕಡಿಮೆ ಪಟಸಂಖ್ಯೆ ಇರುವ ಶಾಲೆಗಳನ್ನು ಮುಚ್ಚಲು ಆದೇಶ ಮಾಡಿರುವುದು ನಿಜಕ್ಕೂ ದುರಂತ.ಬಡ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಸಾಮಾನ್ಯ ಜ್ಞಾನ ಕೂಡ ಇಲ್ಲದಿರುವುದು, ಗ್ರಾಮೀಣ ಭಾಗದ ಪಾಲಕರಿಗೆ ಸರಕಾರದ ಧೋರಣೆ ಮನಸ್ಸಿಗೆ ನೋವನ್ನುಂಟು ಮಾಡಿದೆ.ಸರಕಾರದಲ್ಲಿಯ ಸಚಿವರು ಜನರ ತೆರಿಗೆ ಹಣದಲ್ಲಿ ವರ್ಷಕ್ಕೊಮ್ಮೆ ವಿದೇಶ ಪ್ರವಾಸ ಕೈಕೊಳ್ಳುತ್ತಾರೆ....ಆದರೆ ಅಲ್ಲಿಯ ಶಿಕ್ಷಣ ಪದ್ಧತಿ ಹೇಗಿದೆ? ಶಿಕ್ಷಣಕ್ಕೆ ಎಷ್ಟು ಮಹತ್ವ ಕೊಡುತ್ತಾರೆ ? ಎಂಬುದನ್ನು ತಿಳಿದುಕೊಳ್ಳಲು ವಿಫಲರಾಗಿದ್ದಾರೆ ಎಂದು ಹೇಳಬಹುದು.
ಮೂಲ ಲೇಖನ( ಮರಾಠಿ) - ಸಂತೋಷ ತಳೇಕರ್
ಕನ್ನಡದಲ್ಲಿ ಅನುವಾದ- ವಿರೇಶ ಹಿರೇಮಠ

Super viresh
ReplyDeleteVery nice 👍👌
ReplyDelete👍👍
ReplyDelete