Wednesday, November 2, 2022

ಬಾರ್-ಟೈಲ್ಡ್ ಗೋಡ್ವಿಟ್ ಹಕ್ಕಿಗಳ ವಲಸೆ


 

ಕಳೆದ ವಾರ ಒಂದು ಅದ್ಭುತ ನಡೆಯಿತು. ಅದೊಂದು ಸಣ್ಣ ಸುದ್ದಿಯೂ ಆಗಲಿಲ್ಲ.ಆಗಬೇಕಿತ್ತು. ಆಗಲಿಲ್ಲ ಏಕೆಂದರೆ, ನಮ್ಮ ಮಾಧ್ಯಮಗಳಿಗೆ ರಾಜಕಾರಣ,ಸಿನಿಮಾ,ಧರ್ಮ,ಹಿಂಸೆಗಳ ಸುದ್ದಿ ಬಿತ್ತಿ ಬೆಳೆ ತೆಗೆಯುವ ಕೆಲಸ ತುಂಬಾ. 
ಇರಲಿ, ನವ ಮಾಧ್ಯಮಗಳ ಮೂಲಕ ಈ  ಒಂದು ಅದ್ಭುತ ಸುದ್ದಿ ಸಿಕ್ಕಿತು. ಅದು ಒಂದು ಹಕ್ಕಿಯ ಪಯಣ. 
ಬಾರ್-ಟೈಲ್ಡ್ ಗೋಡ್ವಿಟ್ ಹಕ್ಕಿಗಳು ವಲಸೆಗೆ ಹೆಸರುವಾಸಿ. ಉತ್ತರಧ್ರುವ-ದಕ್ಷಿಣಧ್ರುವ ನಡುವೆ ಈ ಹಕ್ಕಿಗಳು ಆಹಾರ ವಿಹಾರಕ್ಕಾಗಿ ಹಾರಾಡುವುದುಂಟು. ಅಕ್ಟೋಬರ್ ನಲ್ಲಿ ವಲಸೆ ಅಧ್ಯಯನಕ್ಕಾಗಿ ವಿಜ್ಞಾನಿಗಳು ಐದು ತಿಂಗಳು ಪ್ರಾಯದ 400 ಗ್ರಾಂ ತೂಕದ  ಗೋಡ್ವಿಟ್ ಹಕ್ಕಿಯೊಂದಕ್ಕೆ 5G ಸಾಟಲೈಟ್ ಟ್ಯಾಂಗಿಂಗ್ ಮಾಡಿದ್ದಾರೆ. ಆಮೇಲೆ ಅದು ಎಲ್ಲಿಗೆ ಹೋಗುತ್ತದೆ?ಏನು ಮಾಡುತ್ತದೆ?  ಎಂಬುದರ ಮಾನಿಟರ್ ಮಾಡಿದ್ದಾರೆ. ಅಲಾಸ್ಕಾದಿಂದ ಅಕ್ಟೋಬರ್ 13 ರಂದು ಈ ಹಕ್ಕಿ ಹಾರಿದೆ. ಆಮೇಲೆ ಎಲ್ಲೂ ಇಳಿದಿಲ್ಲ. ಆಹಾರ ನೀರೂ ಸೇವಿಸದೇ, ಸಮುದ್ರ ಸಾಗರಗಳ ಮೇಲೆ ಹಾರುತ್ತಾ ಹಾರುತ್ತಾ ಹನ್ನೊಂದನೇ ದಿನ ಆಸ್ಟ್ರೇಲಿಯಾದ ತಾಸ್ಮಾನಿಯಾದಲ್ಲಿ ಬಂದಿಳಿದಿದೆ. 
13,560 ಕಿಮೀ ದೂರ non stop ಯಾನ!
ಗಂಟೆಗೆ 51 ಕಿಮೀ ವೇಗದ ನಿರಂತರ ಪಯಣ!
Uff! What a Trip!
ಯಾವ ವಿಮಾನ, ಯಾವ ಜಿಪಿಎಸ್, ಯಾವ ಲೆಕ್ಕ? 
Nature is Wild!
Just  incredible!
Fantastic!
Amazing!



No comments:

Post a Comment