ಮಕ್ಕಳಿಗೆ ವಿದ್ಯೆ ಶಾಲೆಯಲ್ಲಿ ಸಿಗುತ್ತದೆ. ಒಳ್ಳೆಯ ಸಂಸ್ಕಾರ ಮನೆಯಿಂದಲೇ ಕಲಿಸಿಕೊಡಿ.......
ಆತ ದೊಡ್ಡ ಸಾಫ್ಟವೇರ್ ಕಂಪನಿ ಒಂದರಲ್ಲಿ ಆಫೀಸ್ ಗುಮಾಸ್ತ ನಾಗಿ ದುಡಿಯುತಿದ್ದ. ತನ್ನ ಮಗನಿಗೆ ಅದೇ ಸಾಫ್ಟವೇರ್ ಕಂಪನಿಯಲ್ಲಿ ಇಂಜಿನಿಯರ್ ಮಾಡಿಸಬೇಕು ಎಂಬುದು ಅವನ ಕನಸಾಗಿತ್ತು.. ಆತ ಮಗನಿಗೆ ಯಾವತ್ತೂ ತಾನೊಬ್ಬ ಗುಮಾಸ್ತನ ಮಗ ಎಂಬುದು ಗೊತ್ತಾಗದಂತೆ ನೋಡಿಕೊಂಡ. ಬದಲಾಗಿ ಚಿಕ್ಕಂದಿನಲ್ಲೇ ಮಗ ಕೇಳಿದ್ದೆಲ್ಲ ಕೊಡಿಸಿದ ಹಾಗೆಯೇ ಲೆವೆಲ್ ಮೆಂಟೈನ್ ಮಾಡುವುದನ್ನು ಹೇಳಿ ಕೊಟ್ಟ. ನಾಳೆ ಇಂಜಿನಿಯರ್ ಆದರೆ ಇದೆಲ್ಲ ಅವನಿಗೆ ಉಪಯೋಗಕ್ಕೆ ಬರುತ್ತದೆ ಎಂಬುದು ಇವನ ಯೋಚನೆ ಯಾಗಿತ್ತು.
ಆತ ಕೆಲಸ ಮಾಡುವ ಅದೇ ಸಾಫ್ಟ್ ವೇರ್ ಕಂಪನಿಯ ಎಮ್. ಡಿ ತನ್ನ ಮಗನಿಗೆ ಸಿಂಪಲ್ ಆಗಿರುವುದನ್ನು, ಎಲ್ಲರೊಂದಿಗೆ ಬೆರೆತು ಮುನ್ನಡೆಯುವುದನ್ನು ಹೇಳಿಕೊಟ್ಟಿದ್ದ. ತಾನು ಸ್ಥಾಪಿಸಿರುವ ಈ ಸಾಫ್ಟವೇರ್ ಕಂಪನಿಯನ್ನು ಮುನ್ನಡೆಸಲು ಇಂತಹ ಗುಣಗಳು ಬೇಕಿದ್ದವು ಅವನಿಗೆ.
ವರ್ಷಗಳು ಕಳೆದವು ಗುಮಾಸ್ತನ ಮಗ ಸಾಫ್ಟವೇರ್ ಇಂಜಿನಿಯರ್ ಆದ. ತಂದೆಯ ಕನಸು ಈಡೇರಿತ್ತು. ಅದೇ ಕಂಪೆನಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಸೇರಿಕೊಂಡ. ಅವನ ಎಮ್. ಡಿ ಯ ಮಗ ಕೂಡಾ ಇಂಜಿನಿಯರ್ ಆಗಿ ತಂದೆಯ ಕಂಪೆನಿಗೆ ಎಂ.ಡಿ ಆಗಿದ್ದ.. ಅಲ್ಲೊಂದು ಟ್ವಿಸ್ಟ್ ಇತ್ತು.
ಇಂಜಿನಿಯರ್ ಆಗಿ ದುಡಿಯುತಿದ್ದ ಮಗನಿಗೆ ತನ್ನ ತಂದೆ ಅಲ್ಲಿ ಗುಮಾಸ್ತನಾಗಿ ದುಡಿಯುವುದು ಇಷ್ಟ ವಿರಲಿಲ್ಲ. ಇಲ್ಲಿ ನನ್ನನ್ನು ಗುಮಾಸ್ತನ ಮಗ ಎಂದು ತನ್ನ ಸಹೋದ್ಯೋಗಿಗಳು ಕರೆಯುವುದು ಅವನಿಗೆ ಅವಮಾನ ತರಿಸುತಿತ್ತು.. ಆಫೀಸ್ ಅಲ್ಲಿ ತಂದೆಯೊಂದಿಗೆ ಲೆವೆಲ್ ಮೆಂಟೈನ್ ಮಾಡಲು ಆರಂಭಿಸಿದ. ದಿನ ಕಳೆದಂತೆ ಅವನ ಲೆವೆಲ್ ಮತ್ತಷ್ಟು ಎತ್ತರಕ್ಕೇರಿದಂತೆಲ್ಲ ತಂದೆಯನ್ನು ದುರ್ಲಕ್ಷ ಮಾಡತೊಡಗಿದ. ತಂದೆಯ ಮನೆ ಬಿಟ್ಟ, ಆ ಮನೆ ಬಹಳ ಚಿಕ್ಕದಿದೆ ಅನಿಸಿತ್ತು ಅವನಿಗೆ, ದೊಡ್ಡ ಮನೆ, ಕಾರು ಅವನದಾಯಿತು. ತಂದೆ ಅದೇ ಸೈಕಲ್ ಅಲ್ಲಿ ಅವರ ಚಿಕ್ಕ ಮನೆಗೇ ಹೋಗುತಿದ್ದರು.
ಅತ್ತ ಎಮ್. ಡಿ ಯ ಮಗ ಎಲ್ಲರನ್ನೂ ಪ್ರೀತಿಯಿಂದ ನೋಡಿಕೊಳ್ಳುತಿದ್ದ. ಅವನಪ್ಪ ಹೇಳಿದ್ದ ಪಾಠ ಇಷ್ಟು ದೊಡ್ಡ ಕಂಪನಿಯನ್ನು ನೋಡಿಕೊಳ್ಳಲು ಸಹಕಾರಿಯಾಗಿತ್ತು ಅವನಿಗೆ.
ಈತ ಮಾತ್ರ ಲೆವೆಲ್ ಮೆಂಟೈನ್ ಮಾಡುತ್ತಾ ಅದೇ ಕಂಪೆನಿಯಲ್ಲಿ ಕೊಡುವ ಸಂಬಳಕ್ಕೆ ದುಡಿಯುವ ಕೆಲಸಗಾರನಾಗಿಯೇ ಉಳಿದು ಬಿಟ್ಟ. ಈಗ 75 ವರ್ಷದ ತಂದೆ ಏಕಾಂಗಿಯಾಗಿದ್ದಾರೆ. ವೃದ್ಧಾಶ್ರಮದಲ್ಲಿ ತಾವು ದುಡಿದು ಸಂಗ್ರಹಿಸಿಟ್ಟಿದ್ದ ಒಂದಷ್ಟು ಹಣದಲ್ಲಿ ಜೀವಿಸುತ್ತಿದ್ದಾರೆ. ಮಗ ಲೆವೆಲ್ ಮೆಂಟೈನ್ ಮಾಡುತ್ತಾ ಮಾಡುತ್ತಾ ತಂದೆಯಿಂದ ಬಹಳಷ್ಟು ದೂರ ಹೋಗಿಬಿಟ್ಟಿದ್ದ.
ಅದೆಷ್ಟು ಸತ್ಯ ನೋಡಿ ಒಬ್ಬ ಮಕ್ಕಳಿಗೆ ಲೆವೆಲ್ ಮೆಂಟೈನ್ ಮಾಡುವುದನ್ನು ಹೇಳಿಕೊಟ್ಟ, ತನ್ನ ಕಷ್ಟಗಳನ್ನು ಮಗನಿಂದ ಮುಚ್ಚಿಟ್ಟ. ಇನ್ನೊಬ್ಬ ಪ್ರೀತಿ, ವಿಶ್ವಾಸದಿಂದ ಎಲ್ಲರೊಂದಿಗೆ ಒಂದಾಗಿ ಬದುಕುವ ಕಲೆಯನ್ನು ಹೇಳಿ ಕೊಟ್ಟ.. ಲೆವೆಲ್ ಮೆಂಟೈನ್ ಮಾಡುವುದನ್ನು ಕಲಿತವ ತನ್ನದಷ್ಟೇ ನೋಡಿಕೊಂಡ. ಎಲ್ಲರನ್ನೂ ಪ್ರೀತಿಸುವುದನ್ನು ಕಲಿತವ... ಎಲ್ಲರೊಂದಿಗೆ ಬೆರೆತು ಎಲ್ಲರ ಮೆಚ್ಚುಗೆಗೆ ಪಾತ್ರನಾದ.
ನಿಮ್ಮ ಕಷ್ಟಗಳು ಮಕ್ಕಳಿಗೆ ಗೊತ್ತಿರಲಿ... ಅಪ್ಪ ನಮಗಾಗಿ ಅದೆಷ್ಟು ಕಷ್ಟ ಪಡುತ್ತಿದ್ದಾರೆ ಎಂಬ ಅರಿವಿರಲಿ.
ಮಕ್ಕಳಿಗೆ ವಿದ್ಯೆ ಶಾಲೆಯಲ್ಲಿ ಸಿಗುತ್ತದೆ... ಒಳ್ಳೊಳ್ಳೆ ಸಂಸ್ಕಾರ ಮನೆಯಿಂದಲೇ ಕಲಿಸಿಕೊಡಿ....
No comments:
Post a Comment